ISRO: ಚಳ್ಳಕೆರೆಯಲ್ಲಿ ಶೀಘ್ರ ಮರುಬಳಕೆ ರಾಕೆಟ್ ಲ್ಯಾಂಡಿಂಗ್ ಪರೀಕ್ಷೆ
* ಹೊಸ ಪ್ರಯೋಗಕ್ಕೆ ಮುಂದಾದ ಇಸ್ರೋ
* ಮುಂದಿನ 3 ತಿಂಗಳಲ್ಲಿ ಪರೀಕ್ಷೆ ನಡೆಸಲು ಇಸ್ರೋ ಸಂಸ್ಥೆ ಸಜ್ಜು
* ಭಾರೀ ಉಷ್ಣತೆಯಿಂದ ರಕ್ಷಿಸುವ ತಂತ್ರಜ್ಞಾನ ಸಿದ್ಧ
ಬೆಂಗಳೂರು(ಫೆ.17): ಮರು ಬಳಕೆ ಮಾಡಬಹುದಾದ ರಾಕೆಟ್ ತಂತ್ರಜ್ಞಾನವನ್ನು (ಆರ್‌ಎಲ್‌ವಿ-ಟಿಡಿ-ರೀಯೂಸಬಲ್ ಲಾಂಚ್ ವೆಹಿಕಲ್ ಟೆಕ್ನಾಲಜಿ ಡೆಮಾನ್‌ಸ್ಪ್ರೇಟರ್) ಅಭಿವೃದ್ಧಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ ಭಾರತೀಯ ಉಪಗ್ರಹ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ISRO), ಇದೀಗ ಇಂಥ ರಾಕೆಟ್‌ಗಳು ಸ್ವಯಂಚಾಲಿತವಾಗಿ ಲ್ಯಾಂಡಿಂಗ್ ಆಗುವಂಥ ಮಹತ್ವದ ಪ್ರಯೋಗಕ್ಕೆ ಮುಂದಾಗಿದೆ. ಜೊತೆಗೆ ಈ ಪ್ರಯೋಗವನ್ನು ಶೀಘ್ರದಲ್ಲಿಯೇ ಕರ್ನಾಟಕದ(Karnataka) ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿ ನಡೆಸಲು ನಿರ್ಧರಿಸಿದೆ.
ಇದರಲ್ಲಿ ಇಸ್ರೋ ಯಶಸ್ವಿಯಾದಲ್ಲಿ, ಪ್ರತಿ ಬಾರಿ ಉಪಗ್ರಹಗಳ(Satellite) ಉಡ್ಡಯನಕ್ಕೆ ಪ್ರತ್ಯೇಕ ರಾಕೆಟ್‌ಗಳನ್ನು(Rocket) ಬಳಸಬೇಕಾದ ಪ್ರಮೇಯ ತಪ್ಪಲಿದೆ. ಉಡ್ಡಯನ ವೆಚ್ಚದಲ್ಲಿ ಗಮನಾರ್ಹ ಇಳಿಕೆಯಾಗಲಿದೆ.
ISRO Chairman : ಇಸ್ರೋ ಮುನ್ನಡೆಸಲಿದ್ದಾರೆ ಸೋಮನಾಥ್, ರಾಕೆಟ್ ವಿಜ್ಞಾನಿಗೆ ದೊಡ್ಡ ಜವಾಬ್ದಾರಿ
ಏನಿದು ಯೋಜನೆ?:
ಹಾಲಿ ಪ್ರತಿ ಉಪಗ್ರಹ ಉಡ್ಡಯನಕ್ಕೂ(Satellite launch) ಹೊಸ ಪಿಎಸ್‌ಎಲ್‌ವಿ(PSLC), ಜಿಎಸ್‌ಎಲ್‌ವಿನಂಥ(GSLV) ಉಡ್ಡಯಕ (ರಾಕೆಟ್) ಬಳಸಬೇಕು. ಕಾರಣ ಉಪಗ್ರಹಗಳನ್ನು ಕಕ್ಷೆ ಸೇರಿಸಿದ ಮೇಲೆ ರಾಕೆಟ್‌ಗಳು ಮರಳಿ ಭೂಮಿಯನ್ನು(Earth) ಪ್ರವೇಶ ಮಾಡುತ್ತವೆಯಾದರೂ, ಭೂಮಿಯ ವಾತಾವರಣ ಪ್ರವೇಶಿಸುತ್ತಲೇ ಭಾರೀ ಉಷ್ಣಾಂಶದ ಕಾರಣ ಸುಟ್ಟು ಭಸ್ಮವಾಗುತ್ತದೆ. ಒಟ್ಟಾರೆ ಉಪಗ್ರಹ ಉಡ್ಡಯನದಲ್ಲಿ ರಾಕೆಟ್‌ಗಳ ವೆಚ್ಚವೇ ಹೆಚ್ಚಿರುವ ಕಾರಣ, ರಾಕೆಟ್‌ಗಳನ್ನು ಪುನರ್ ಬಳಕೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಇಸ್ರೋ ಶ್ರಮಿಸುತ್ತಿದೆ. ಈ ಪೈಕಿ ರಾಕೆಟ್ ಭೂಮಿಯ ವಾತಾವರಣ ಮರು ಪ್ರವೇಶ ಮಾಡಿದಾಗ ಅದಕ್ಕೆ ಭಾರೀ ಉಷ್ಣತೆಯಿಂದ ರಕ್ಷಿಸುವ ತಂತ್ರಜ್ಞಾನವನ್ನು(Technology) ಈಗಾಗಲೇ ಸಿದ್ಧಿಸಿಕೊಂಡಿದೆ.
ಈಗ ಏನು ಪ್ರಯೋಗ?:
ಮರು ಬಳಕೆ ರಾಕೆಟ್‌ಗಳು, ಭೂಮಿಯ ವಾತಾವರಣ ಪ್ರವೇಶಿಸಿದ ಬಳಿಕ ಅವು ಸ್ವತಂತ್ರವಾಗಿ ನಿಗದಿತ ಸ್ಥಳದಲ್ಲಿ ಇಳಿಯುವುದು ಅತ್ಯಂತ ಮಹತ್ವದ್ದು. ಹೀಗೆ ರಾಕೆಟ್ ಸ್ವಯಂಚಾಲಿತವಾಗಿ ಇಳಿಯಬಲ್ಲ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಇಸ್ರೋ, ಈ ತಂತ್ರಜ್ಞಾನ ಎಷ್ಟು ಯಶಸ್ವಿಯಾಗಿದೆ ಎಂಬುದನ್ನು ಮುಂದಿನ 3 ತಿಂಗಳಲ್ಲಿ ಚಳ್ಳಕೆರೆಯಲ್ಲಿರುವ(Challakere) ತನ್ನ ಘಟಕದಲ್ಲಿ ಪ್ರಯೋಗದಲ್ಲಿ ಒಳಪಡಿಸಲು ನಿರ್ಧರಿಸಿದೆ.
ಪ್ರಯೋಗ ಹೇಗೆ?:
ತಾನು ಅಭಿವೃದ್ಧಿಪಡಿರುವ ತಂತ್ರಜ್ಞಾನವೊಂದನ್ನು ವಾಹಕ್ಕೆ ಅಳವಡಿಸಿ ಅದನ್ನು ಹೆಲಿಕಾಪ್ಟರ್(Helicopter) ಮೂಲಕ 3-5 ಕಿ.ಮೀ ಎತ್ತರಕ್ಕೆ ಇಸ್ರೋ ಕೊಂಡೊಯ್ಯಲಿದೆ. ಅಲ್ಲಿ ಕಾಪ್ಟರ್‌ನಿಂದ ವಾಹಕ ಬೇರ್ಪಡೆಯಾಗಿ ಗುರುತ್ವಾಕರ್ಷಣೆ ಶಕ್ತಿಯ ಆಧಾರದಲ್ಲಿ ಚಳ್ಳಕೆರೆಯಲ್ಲಿ ನಿರ್ಮಿಸಿರುವ ರನ್‌ವೇಯತ್ತ ಧಾವಿಸಲಿದೆ. ಹೀಗೆ ನಿಗದಿತ ಪಥ ಮತ್ತು ಸ್ಥಳ ಅರಿತು ಅಲ್ಲೇ ಬಂದಿಳಿಯಲು ವಾಹಕದಲ್ಲಿ ಸ್ವಯಂ ಚಾಲಿತ ವ್ಯವಸ್ಥೆ ಅಳವಡಿಸಲಾಗುತ್ತದೆ. ಹೀಗೆ ಪ್ಯಾರಾಚೂಟ್ ಮೂಲಕ ಕೆಳಗೆ ಇಳಿಯಲಿರುವ ರಾಕೆಟ್ ಬಳಿಕ ರನ್‌ವೇ ಮೇಲೆ ಲ್ಯಾಂಡಿಂಗ್ ಆಗಲಿದೆ.
Income From Foreign Satellite:ವಿದೇಶಿ ಉಪಗ್ರಹ ಉಡಾವಣೆಯಿಂದ ಭಾರತಕ್ಕೆ 35 ಮಿಲಿಯನ್ ಡಾಲರ್ ಆದಾಯ
ಮುಂದೇನು?:
ಈ ತಂತ್ರಜ್ಞಾನ ಪರೀಕ್ಷೆ ಯಶಸ್ವಿಯಾದರೆ ಮುಂದೆ ವಾಹಕವನ್ನು ಕಕ್ಷೆಯಿಂದ ಭೂಮಿಯನ್ನು ಪ್ರವೇಶಿಸುವ ಪ್ರಯೋಗಕ್ಕೆ ಒಳಪಡಿಸಲಾಗುವುದು. ಈ ಹಂತದಲ್ಲಿ ಜಿಎಸ್‌ಎಲ್‌ವಿ ಅಥವಾ ಪಿಎಸ್‌ಎಲ್‌ವಿ ಮೂಲಕ ರಾಕೆಟ್ ಅನ್ನು ಕಕ್ಷೆಗೆ ಕೊಂಡೊಯ್ದು, ಅಲ್ಲಿ ಕೆಲ ಅದನ್ನು ಇಟ್ಟು ಬಳಿಕ ಅದನ್ನು ಭೂಮಿಯ ವಾತಾವರಣ ಮರು ಪ್ರವೇಶ ಮಾಡುವಂತೆ ಮಾಡಲಾಗುವುದು. ಅಲ್ಲಿಯೂ ತಂತ್ರಜ್ಞಾನ ಪೂರ್ಣ ಯಶಸ್ವಿಯಾದಲ್ಲಿ ಇಂಥ ತಂತಜ್ಞಾನ ಹೊಂದಿದ ವಿಶ್ವದ ಕೆಲವೇ ಕೆಲವು ದೇಶಗಳಿಗೆ ಭಾರತದ(India) ಹೆಮ್ಮೆಯ ಇಸ್ರೋ ಕೂಡಾ ಸೇರ್ಪಡೆಯಾಗಲಿದೆ.
ಮಾನವಸಹಿತ ಗಗನಯಾನದ ಎಂಜಿನ್ ಪರೀಕ್ಷೆ ಯಶಸ್ವಿ!
ಬೆಂಗಳೂರು: ಭಾರತದ ಮೊಟ್ಟಮೊದಲ ಮಾನವಸಹಿತ ಗಗನಯಾನ ಯೋಜನೆಯಲ್ಲಿ (Gaganyaan Mission) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇನ್ನೊಂದು ಮಹತ್ವದ ಸಿದ್ಧತಾ ಘಟ್ಟವನ್ನು ಪೂರೈಸಿದ್ದು, ಗಗನಯಾನ ನೌಕೆಯ ಕ್ರಯೋಜನಿಕ್ ಎಂಜಿನ್‌ನ (cryogenic engine) ಅರ್ಹತಾ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಜ. 14 ರಂದು ನಿರಂತರ 720 ಸೆಕೆಂಡ್‌ಗಳ ಕಾಲ ಎಂಜಿನ್‌ನ ಪರೀಕ್ಷೆ ನಡೆಸಲಾಗಿತ್ತು.