ಮಾರುಕಟ್ಟೆಯಲ್ಲಿ ಐಫೋನ್ ದರ್ಬಾರ್..!

iphone dominates market
Highlights

ವ್ಯಾವಹಾರಿಕವಾಗಿಯೂ ಸ್ಮಾರ್ಟ್‌ಫೋನ್ ಕಣಜದಲ್ಲಿ ತಾನೇ ಅಗ್ರಜ ಎಂಬುದನ್ನು ಆಪಲ್ ಐಫೋನ್ ಮತ್ತೊಮ್ಮೆ ಸಾಬೀತುಮಾಡಿದೆ. ಜಾಗತಿಕ ಸ್ಮಾರ್ಟ್ ಫೋನ್ ಮಾರಾಟದ 2018ನೇ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಅತಿ ಹೆಚ್ಚಿನ ಮಾರಾಟದ ದಾಖಲೆ ಬರೆದಿದೆ.

ಬೆಂಗಳೂರು(ಮೇ 31): ವ್ಯಾವಹಾರಿಕವಾಗಿಯೂ ಸ್ಮಾರ್ಟ್‌ಫೋನ್ ಕಣಜದಲ್ಲಿ ತಾನೇ ಅಗ್ರಜ ಎಂಬುದನ್ನು ಆಪಲ್ ಐಫೋನ್ ಮತ್ತೊಮ್ಮೆ ಸಾಬೀತುಮಾಡಿದೆ. ಜಾಗತಿಕ ಸ್ಮಾರ್ಟ್ ಫೋನ್ ಮಾರಾಟದ 2018ನೇ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಅತಿ ಹೆಚ್ಚಿನ ಮಾರಾಟದ ದಾಖಲೆ ಬರೆದಿದೆ.

ಸ್ಟ್ರಾಟಜಿ ಅನಲಿಟಿಕ್ಸ್ ಪ್ರಕಾರ ಈ ತ್ರೈಮಾಸಿಕ ಅವಧಿಯಲ್ಲಿ ಐಫೋನ್ ಎಕ್ಸ್ ಹ್ಯಾಂಡ್‌ಸೆಟ್ 16 ಮಿಲಿಯನ್ ಯೂನಿಟ್ ಗಳನ್ನು ಮಾರುಕಟ್ಟೆಗೆ ಪೂರೈಸಿ ಮೊದಲ ಸ್ಥಾನದಲ್ಲಿದೆ. ಐಫೋನ್ 8 ಸೆಟ್ ಗಳು ೧೨.೫ ಮಿಲಿಯನ್ ಯೂನಿಟ್‌ಗಳು, ಐಫೋನ್ 8 ಪ್ಲಸ್ 8.3 ಮಿಲಿಯನ್ ಸೆಟ್‌ಗಳನ್ನು, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 9 ಪ್ಲಸ್ 5.3 ಮಿಲಿಯನ್ ಗ್ರಾಹಕರನ್ನು ತಲಪುವ ಮೂಲಕ ನಂತರದ ಸ್ಥಾನಗಳಲ್ಲಿವೆ. ಇದರೊಂದಿಗೆ ಶಿಯೋಮಿ ರೆಡ್ಮಿ 5ಎ ಕೂಡಾ 5.3 ಮಿಲಿಯನ್ ಹ್ಯಾಂಡ್ ಸೆಟ್ ಮಾರುಕಟ್ಟೆಗೆ ಪೂರೈಸುವ ಮೂಲಕ ಗ್ಯಾಲಕ್ಸಿ ಎಸ್ 9 ಜೊತೆ ಸ್ಥಾನ ಹಂಚಿಕೊಂಡಿದೆ.

ಈ ತ್ರೈಮಾಸಿಕ ಅವಧಿಯಲ್ಲಿ ಮಾರಾಟವಾದ ಹ್ಯಾಂಡ್ ಸೆಟ್‌ಗಳ ಪೈಕಿ ಶೇ.5ರಷ್ಟು ಜಾಗವನ್ನು ಐಫೋನ್ ಎಕ್ಸ್ ಸೆಟ್ ಆಕ್ರಮಿಸಿದೆ ಎನ್ನುತ್ತದೆ ವರದಿ. ಎರಡನೇ ತ್ರೈಮಾಸಿಕ ಅವಧಿಯಲ್ಲೂ ಐಫೋನ್ ಎಕ್ಸ್ ಮಾರುಕಟ್ಟೆಯಲ್ಲಿ ಪಾರಮ್ಯ ಮರೆದು ಮುಂಚೂಣಿಯಲ್ಲಿರುತ್ತದೆ ಎನ್ನವುದಾಗಿ ಸ್ಟ್ರಾಟಜಿ ಅನಲಿಸಿಸ್ಟ್ ಹೇಳಿದೆ. ಉತ್ತಮ ವಿನ್ಯಾಸ, ಕ್ಯಾಮೆರಾ, ಉಪಯುಕ್ತ ಆಪ್‌ಗಳು ಹಾಗೂ ಎಲ್ಲೆಡೆ ಲಭ್ಯತೆ ಈ ಸೆಟ್‌ನ ಜನಪ್ರಿಯತೆಗೆ ಕಾರಣ ಎನ್ನುತ್ತಾರೆ ಅವರು.

ಐಫೋನ್ ಜೊತೆಗೆ ಸ್ಪರ್ಧಿಸಿ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕಂಡಿರುವ ಶಿಯೋಮಿ ರೆಡ್ಮಿ 5ಎ ಮಾರುಕಟ್ಟೆಯಲ್ಲಿ ಶೇ.2ರಷ್ಟು ಸ್ಥಾನ ಹೊಂದಿದ್ದು, ಈ ಸೆಟ್ ಭಾರತ ಹಾಗೂ ಚೀನಾದಲ್ಲಿ ಹೆಚ್ಚು ಪ್ರಚಾರದಲ್ಲಿದೆ. ಆದಾಗ್ಯೂ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದಲ್ಲಿ ಮಾರಾಟವಾಗಿರುವ ಸ್ಮಾರ್ಟ್ ಫೋನ್‌ಗಳ ಸಂಖ್ಯೆ ಇಳಿಮುಖವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 344.4 ಮಿಲಿಯನ್ ಸೆಟ್‌ಗಳು ಮಾರಾಟವಾಗಿದ್ದರೆ, ಈ ವರ್ಷ 336.1 ಮಿಲಿಯನ್‌ಗೆ ಇಳಿಕೆಯಾಗಿದೆ. ಆದರೆ, ಆಪಲ್ ಐ ಫೋನ್ ಕಳೆದ ವರ್ಷಕ್ಕಿಂತ ಶೇ.2.8ರಷ್ಟು ಮಾರಾಟ ಏರಿಕೆ ಕಂಡಿದೆ.

loader