2019ಕ್ಕೆ ಸ್ಥಗಿತಗೊಳ್ಳಲಿದೆ ಐತಿಹಾಸಿಕ ಬಿಟಲ್ ಕಾರು! ಕಾರಣವೇನು?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 14, Sep 2018, 4:19 PM IST
Iconic beetle car prodcuction will stop by 2019
Highlights

ಫೋಕ್ಸ್‌ವ್ಯಾಗನ್ ಕಂಪೆನಿಯ ಐತಿಹಾಸಿಕ ಬೀಟಲ್ ಕಾರು ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ. ನಾಝಿ ಕಾಲದಲ್ಲಿ, ಅಂದರೆ 1938ರಲ್ಲಿ ಬೀಟಲ್ ಕಾರು ಮೊದಲ ಬಾರಿ ರಸ್ತೆಗಳಿದಿದ್ದು. ಅಲ್ಲಿಂದ ಇಲ್ಲೀವರೆಗೆ ಜನಮನ್ನಣೆಗಳಿಸಿದ್ದ ಬೀಟಲ್ ಸ್ಥಗಿತಗೊಳ್ಳುತ್ತಿರುವುದೇಕೆ? ಇಲ್ಲಿದೆ.

ನ್ಯೂಯಾರ್ಕ್(ಸೆ.14): ಫೋಕ್ಸ್‌ವ್ಯಾಗನ್ ಕಂಪೆನಿಯ ಐತಿಹಾಸಿಕ ಬೀಟಲ್ ಕಾರು ಕಾರು ಪ್ರೀಯರ ನೆಚ್ಚಿನ ಕಾರು. ರೆಟ್ರೋ ಲುಕ್ ಈ ಕಾರಿನ ವಿಶೇಷತೆ. 1938ರಲ್ಲಿ ಫೋಕ್ಸ್‌ವ್ಯಾಗನ್ ಬೀಟಲ್ ಕಾರು ಬಿಡುಗಡೆ ಮಾಡಿತ್ತು. ಇದೀಗ 2019ರಲ್ಲಿ ಬೀಟಲ್ ಕಾರು ನಿರ್ಮಾಣ ಸ್ಥಗಿತಗೊಳಿಸಲು ಫೋಕ್ಸ್‌ವ್ಯಾಗನ್ ನಿರ್ಧರಿಸಿದೆ.

 

 

1938ರಿಂದ ಇಲ್ಲೀವರೆಗೆ ಬೀಟಲ್ ಕಾರು ತನ್ನ ಜನಪ್ರೀಯತೆ ಕಳೆದುಕೊಂಡಿಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಭಾರಿ ಮೆಚ್ಚುಗೆಗಳಿಸಿದ್ದ ಬೀಟಲ್ ಕಾರು ಭಾರತ ಪ್ರವೇಶಿಸಿದ್ದು 2009ರಲ್ಲಿ . 

 

 

ಐತಿಹಾಸಿಕ ಫೋಕ್ಸ್‌ವ್ಯಾಗನ್ ಬೀಟಲ್ ಕಾರು ನಿರ್ಮಾಣ 2019ಕ್ಕೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕಲ್ ವಾಹನಗಳತ್ತ ಚಿತ್ತ ಹರಿಸಿರುವ ಕಾರಣ ಬೀಟಲ್ ಕಾರನ್ನ ಸ್ಥಗಿತಗೊಳಿಸಲು ಕಂಪೆನಿ ನಿರ್ಧರಿಸಿದೆ. 

 

 

ಬೀಟಲ್ ಕಾರಿನ ಬೆಲೆ 30 ಲಕ್ಷ ರೂಪಾಯಿಯಿಂದ(ಎಕ್ಸ್ ಶೋ ರೂಂ) ಪ್ರಾರಂಭವಾಗಲಿದೆ. ಕಾರು ಪ್ರೀಯರೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಬೀಟಲ್ ಇದೀಗ ಸ್ಥಗಿತವಾಗುತ್ತಿರುವುದು ಗ್ರಾಹಕರಿಗೆ ಬೇಸರ ತರಿಸಿದೆ.

loader