ವಿಶ್ವದ ಅತ್ಯಂತ ಕಡಿಮೆ ತೂಕದ ಎಲೆಕ್ಟ್ರಿಕಲ್ ಬೈಕ್ ಲಾಂಚ್

First Published 12, Jul 2018, 6:33 PM IST
Hummingbird Launches The World's Lightest Electric Folding Bike
Highlights

ವಿಶ್ವದ ಕಡಿಮೆ ತೂಕದ ಬೈಕ್ ಬಿಡುಗಡೆಯಾಗಿದೆ. ಈ ಎಲೆಕ್ಟ್ರಿಕಲ್ ಬೈಕ್ ತೂಕ ಕೇವಲ 10.3 ಕೆಜಿ. ಈ ಬೈಕ್ ಹೇಗೆ ಬೇಕೋ ಹಾಗೆ ಮಡಚಿ ಲಗೇಜ್ ಬ್ಯಾಗ್‌ನಲ್ಲಿ ಹಾಕಬಹುದು. ಹಲವು ವಿಶೇಷತೆಗಳ ಈ ಹಮ್ಮಿಂಗ್‌ಬರ್ಡ್ ಬೈಕ್ ಭವಿಷ್ಯದ ಬೈಕ್ ಅನ್ನೋದರಲ್ಲಿ ಎರಡು ಮಾತಿಲ್ಲ.

ಬೆಂಗಳೂರು(ಜು.12): ವಿಶ್ವದ ಅತ್ಯಂತ ಕಡಿಮೆ ತೂಕದ ಎಲೆಕ್ಟ್ರಿಕಲ್ ಫೋಲ್ಡಿಂಗ್ ಬೈಕ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಬ್ರಿಟೀಷ್ ಮೂಲಕ ಬೈಸಿಕಲ್ ತಯಾರಿಕಾ ಕಂಪೆನಿ ಹಮ್ಮಿಂಗ್‌ಬರ್ಡ್ ಈ ನೂತ ಎಲೆಕ್ಟ್ರಿಕಲ್ ಬೈಕ್ ಬಿಡುಗಡೆಗೊಳಿಸಿದೆ.

ಲಂಡನ್‌ನಲ್ಲಿ ನೂತನ ಎಲೆಕ್ಟ್ರಿಕಲ್ ಬೈಕ್ ಬಿಡುಗೊಳಿಸಿದ ಹಮ್ಮಿಂಗ್‌ಬರ್ಡ್ ಸಂಸ್ಥೆ, ಮೋಟಾರ್ ಸೈಕಲ್ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಈ ಬೈಕ್‌ನ ತೂಕ 10.3 ಕೆಜಿ. ವಿಶೇಷ ಅಂದರೆ ಈ ಬೈಕ್‌ನ್ನ ಮಡಚಿ ಲಗೇಜ್ ಬ್ಯಾಗ್‌ನಲ್ಲೂ ಹಾಕಬಹುದು.

ಹಮ್ಮಿಂಗ್‌ಬರ್ಡ್ ಎಲೆಕ್ಟ್ರಿಕಲ್ ಬೈಕ್ 250 ವಾಲ್ಟ್ ಮೋಟಾರ್ ಇಂಜಿನ್ ಹೊಂದಿದೆ. ಇದರ ಗರಿಷ್ಠ ವೇಗ 25 ಕೀಮೀ ಪ್ರತಿ ಗಂಟೆಗೆ. ಒಂದು ಬಾರಿ ಚಾರ್ಜ್ ಮಾಡಿದರೆ 30 ಕೀಲೋ ಮೀಟರ್ ಪ್ರಯಾಣಿಸಬಹುದು.

loader