ವಾಟ್ಸಾಪ್ ಮನಿ ಎಷ್ಟು ಸುರಕ್ಷಿತ?

How Much Safe Whatsapp Money
Highlights

ಪೇಟಿಎಂ, ಫೋನ್‌ಪೇ ನಂತರ ಯೂನಿಫೈಡ್ ಪೇಮೆಂಟ್  ಇಂಟರ್‌ಫೇಸ್ (ಯುಪಿಐ) ಮುಖಾಂತರ ಹಣವಿನಿಮಯ ಸೇವೆ ಆರಂಭಿಸಲು ಹೊರಟಿರುವ ವಾಟ್ಸಪ್‌ಗೆ ಆರಂಭದಲ್ಲಿಯೇ ವಿಘ್ನ  ಎದುರಾಗುವ ಎಲ್ಲಾ ಸಾಧ್ಯತೆಗಳೂ ಕಂಡು ಬರುತ್ತಿವೆ. 

ಪೇಟಿಎಂ, ಫೋನ್‌ಪೇ ನಂತರ ಯೂನಿಫೈಡ್ ಪೇಮೆಂಟ್  ಇಂಟರ್‌ಫೇಸ್ (ಯುಪಿಐ) ಮುಖಾಂತರ ಹಣವಿನಿಮಯ ಸೇವೆ ಆರಂಭಿಸಲು ಹೊರಟಿರುವ ವಾಟ್ಸಪ್‌ಗೆ ಆರಂಭದಲ್ಲಿಯೇ ವಿಘ್ನ  ಎದುರಾಗುವ ಎಲ್ಲಾ ಸಾಧ್ಯತೆಗಳೂ ಕಂಡು ಬರುತ್ತಿವೆ. 

ಕಳೆದ ತಿಂಗಳಿನಿಂದ ಫೇಸ್‌ಬುಕ್ ತನ್ನ ಗ್ರಾಹಕರ ಮಾಹಿತಿಯನ್ನು ಮೂರನೇ  ವ್ಯಕ್ತಿಯೊಂದಿಗೆ ಹಂಚಿಕೊಂಡಿದೆ ಎನ್ನುವ ವಿಚಾರ ಜಗತ್ತಿನಾದ್ಯಂತ  ದೊಡ್ಡ ಮಟ್ಟದ ಸುದ್ದಿಯಾಗುತ್ತಿದ್ದಂತೆಯೇ ಫೇಸ್‌ಬುಕ್ ಮುಖ್ಯಸ್ಥ  ಮಾರ್ಕ್ ಜುಗರ್‌ಬರ್ಕ್ ಕೂಡ ಸ್ಪಷ್ಟನೆ ನೀಡಿ ಮಾಹಿತಿ ಸೋರಿಕೆಯಾಗಿರುವುದನ್ನು ಖುದ್ದು ಒಪ್ಪಿಕೊಂಡಿದ್ದರು. ಇದರ ಬೆನ್ನಲೇ ಫೇಸ್‌ಬುಕ್  ಒಡೆತನ ಹೊಂದಿರುವ ವಾಟ್ಸಪ್ ಕೂಡ ತನ್ನ ಗ್ರಾಹಕರ ಮಾಹಿತಿಯನ್ನು  ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದಾಗಿ ತನ್ನ ಖಾಸಗಿ ನೀತಿಯಲ್ಲೇ ಹೇಳಿಕೊಂಡಿರುವುದು ಈಗ ಹೊಸ ತಿರುವು ಪಡೆದುಕೊಂಡಿದೆ.

ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ವ್ಯವಸ್ಥೆಯಡಿ  ವಾಟ್ಸಾಪ್ ಕಂಪನಿ ಫೆಬ್ರವರಿಯಿಂದ ಪ್ರಾಯೋಗಿಕವಾಗಿ ಹಣ  ವರ್ಗಾವಣೆ ಸೇವೆ ಆರಂಭಿಸಿದೆ. ಆಯ್ದ ಕೆಲ ಗ್ರಾಹಕರಿಗೆ ಈಗಾಗಲೇ ಈ  ಸೇವೆ ಈಗಾಗಲೇ ಲಭ್ಯವಿದೆ. ಶೀಘ್ರದಲ್ಲೇ ಈ ಸೇವೆಯನ್ನು ಪೂರ್ಣಪ್ರಮಾಣದಲ್ಲಿ ನೀಡಲು ವಾಟ್ಸಾಪ್ ತಯಾರಿ ಮಾಡಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಗ್ರಾಹಕರ ಮೊಬೈಲ್ ನಂಬರ್, ನೋಂದಣಿ ಮಾಹಿತಿ, ಮೊಬೈಲ್ ಹ್ಯಾಂಡ್‌ಸೆಟ್‌ನ ಮಾಹಿತಿ, ವರ್ಚುವಲ್ ಪೇಮೆಂಟ್  ಅಡ್ರೆಸ್‌ಗಳು, ಹಣ ಕಳುಹಿಸುವವರ ಯುಪಿಐ ಪಿನ್, ಕಳುಹಿಸಿದ  ಹಣದ ಮೊತ್ತ ಇತ್ಯಾದಿ ಮಾಹಿತಿಯನ್ನು ಮೂರನೇ ಕಂಪನಿಗಳ ಜೊತೆ ಹಂಚಿಕೊಳ್ಳಲಾಗುತ್ತದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಈ ಮಾಹಿತಿಯನ್ನು ವಾಟ್ಸಾಪ್ ತನ್ನ ಖಾಸಗಿ ನೀತಿಯಲ್ಲೇ ಹೀಗೆ ಹೇಳಿಕೊಂಡಿದೆ ‘ಹಣ ವರ್ಗಾವಣೆ ಸೇವೆಯನ್ನು ಸರಿಯಾದ ರೀತಿಯಲ್ಲಿ ಒದಗಿಸಲು ನಾವು ಮೂರನೇ ವ್ಯಕ್ತಿಗಳ ಜೊತೆ ಮಾಹಿತಿ ಹಂಚಿಕೊಳ್ಳುತ್ತೇವೆ. ಹಣ ಕಳುಹಿಸಲು ಪೇಮೆಂಟ್ ಸರ್ವೀಸ್ ಪ್ರೊವೈಡರ್'ಗಳಿಗೆ, ಹಿಂದಿನ ವ್ಯವಹಾರದ ದಾಖಲೆಗಳನ್ನು ನಿರ್ವಹಿಸಲು, ಗ್ರಾಹಕರ ಕುಂದುಕೊರತೆಗಳನ್ನು ಬಗೆಹರಿಸಲು, ನಮ್ಮ ಸೇವೆಯನ್ನು ಸುರಕ್ಷಿತವಾಗಿ ಹಾಗೂ ಸುಭದ್ರವಾಗಿ ಇರಿಸಿಕೊಳ್ಳಲು ಫೇಸ್‌ಬುಕ್ ಹಾಗೂ ಇತರ ಕಂಪನಿಗಳಿಗೆ ನಾವು ಬಳಕೆದಾರರ ಮಾಹಿತಿ  ನೀಡಬೇಕಾಗುತ್ತದೆ’ ಎಂದಿದೆ.

ಸದ್ಯ ಮೊಬೈಲ್ ಫೋನ್‌ನಲ್ಲಿ ಹಣ ವರ್ಗಾವಣೆ ಸೇವೆ ನೀಡುತ್ತಿರುವ ಪೇಟಿಎಂ ಹಾಗೂ ಫ್ಲಿಪ್‌ಕಾರ್ಟ್‌ನ ಫೋನ್‌ಪೇ ಕೂಡ ತಾವು ಗ್ರಾಹಕರ ದತ್ತಾಂಶಗಳನ್ನು ಮೂರನೇ ವ್ಯಕ್ತಿಗಳ ಜೊತೆ ಹಂಚಿಕೊಳ್ಳಬಹುದು ಎಂದು ತಮ್ಮ ಖಾಸಗಿ ನೀತಿಯಲ್ಲಿ ಹೇಳಿಕೊಂಡಿವೆ. ಇದರೊಂದಿಗೆ ಈಗಾಗಲೇ ಜನರ ಖಾಸಗಿ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡ ಹಗರಣದಲ್ಲಿ ಫೇಸ್‌ಬುಕ್ ಸಿಲುಕಿರುವಾಗಲೇ ಅದರ ಒಡೆತನದಲ್ಲಿರುವ ವಾಟ್ಸಾಪ್ ಕೂಡ ಅಂತಹುದೇ ವಿವಾದಕ್ಕೆ ಸಿಲುಕುವ ಸಾಧ್ಯತೆ  ದಟ್ಟವಾಗಿದೆ.

loader