ಹೊಂಡಾ ಮೋಟಾರು ಸಂಸ್ಥೆ ಬಿಡುಗಡೆ ಮಾಡಿರು WR-V ಅಲೈವ್ ಸ್ಪೆಷಲ್ ಎಡಿಶನ್ ಕಾರು ಇತರ ಕಾರುಗಳಿಗೆ ಭಾರಿ ಪೈಪೋಟಿ ನೀಡೋದರಲ್ಲಿ ಯಾವುದೇ ಅನುಮಾನವಿಲ್ಲ, ಕಡಿಮೆ ಬೆಲೆ, SUV ಲುಕ್ ಹಾಗೂ ಆಕರ್ಷಕ  ವಿನ್ಯಾಸದೊಂದಿಗೆ WR-V ಅಲೈವ್ ಕಾರು ಮಾರುಕಟ್ಟೆಗೆ ಪ್ರವೇಶಿಸಿದೆ.

ಬೆಂಗಳೂರು(ಆ.11): ಹೊಂಡಾ ಮೋಟಾರು ಸಂಸ್ಥೆ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ನೂತನ ಕಾರು ಇದೀಗ ಕೇವಲ 8.02 ಲಕ್ಷ ರೂಪಾಯಿಗೆ ನಿಮ್ಮ ಕೈಗೆಟುಕಲಿದೆ. ಹೊಂಡಾ ಬಿಡುಗಡೆ ಮಾಡಿರುವ ನೂತನ WR-V ಅಲೈವ್ ಸ್ಪೆಷಲ್ ಎಡಿಶನ್ ಕಾರು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಹೊಂಡಾ WR-V ಅಲೈವ್ ಪೆಟ್ರೋಲ್ ಇಂಜಿನ್ ಕಾರಿನ ಬೆಲೆ 8.02 ಲಕ್ಷ(ಎಕ್ಸ್ ಶೋ ರೂಂ) ಇನ್ನು ಡೀಸೆಲ್ ಇಂಜಿನ ಕಾರಿನ ಬೆಲೆ 9.02 ಲಕ್ಷ(ಎಕ್ಸ್ ಶೋ ರೂಂ). ಇದು ಸ್ಟಾಂಡರ್ಸ್ ಎಸ್ ವೇರಿಯೆಂಟ್ ಕಾರಿಗಿಂತ 23500 ರೂಪಾಯಿ ಹೆಚ್ಚಳ. 

ಹೊಂಡಾ WR-V ಅಲೈವ್ ಕಾರು 16 ಇಂಚು ಡೈಮಂಡ್ ಕಟ್ ಆಲೋಯ್ ವೀಲ್ಸ್ ಹೊಂದಿದೆ. ರೇರ್ ಪಾರ್ಕಿಂಗ್ ಕ್ಯಾಮರ ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್, ಪ್ರೀಮಿಯಮ್ ಸ್ಟೇರಿಂಗ್ ವೀಲ್ ಕವರ್ ಹಾಗೂ ಸೀಟ್ ಕವರ್ ಹೊಂದಿದೆ.

1199 ಸಿಸಿ ಪೆಟ್ರೋಲ್ ಇಂಜಿನ್, ಹಾಗೂ 1498 ಸಿಸಿ ಡೀಸೆಲ್ ಇಂಜಿನ್ ಹೊಂದಿರುವ ಹೊಂಡಾ WR-V ಅಲೈವ್ ಕಾರು ಹೆಚ್ಚು ಬಲಿಷ್ಠ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಆಕರ್ಷಕ ವಿನ್ಯಾಸ ಹೊಂದಿರುವ ಹೊಂಡಾ WR-V ಅಲೈವ್ ಕಾರು ಇತರ ಹ್ಯಾಚ್‌ಬ್ಯಾಕ್ ಕಾರಿಗೆ ಭಾರಿ ಪೈಪೋಟಿ ನೀಡಲಿದೆ.