ಕಾರು ಸಂಸ್ಥೆಗಳು ರಿಯಾತಿಗಳನ್ನ ನೀಡುವುದು ಸಾಮಾನ್ಯ. ಆದರೆ ಇದೀಗ ಹೊಂಡಾ ಕಾರು ಸಂಸ್ಥೆ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ನೀಡಿದೆ. ಹೊಂಡಾ ಕಾರು ಖರೀದಿಸಿದ ಗ್ರಾಹಕರಿಗೆ ಉಚಿತ ಟ್ರಿಪ್ ಆಫರ್ ಕೂಡ ನೀಡಿದೆ.
ಬೆಂಗಳೂರು(ಸೆ.05): ಹೊಂಡಾ ಕಾರು ಖರೀದಿಸುವ ಆಲೋಚನೆಯಲ್ಲಿದ್ದರೆ ನವೆಂಬರ್ 7 ಒಳಗೆ ಕಾರು ಬುಕ್ ಮಾಡಿ. ಕಾರಣ ನಿಮಗೆ ಹೊಂಡಾ ಕಾರು ಸಂಸ್ಥೆ ಭರ್ಜರಿ ರಿಯಾತಿ ಹಾಗೂ ಆಫರ್ ನೀಡಿದೆ. ಕಾರಿನ ಜೊತೆಗೆ ನೀವು ಲಂಡನ್ ಹಾಗೂ ಪ್ಯಾರಿಸ್ ಟ್ರಿಪ್ ಕೂಡ ಉಚಿತವಿದೆ.
ಹೊಂಡಾ ಕಾರು ಇಂಡಿಯಾ ಲಿಮಿಟೆಡ್ ಇದೀಗ ಸೆಪ್ಟೆಂಬರ್ 1 ರಿಂದ ನವೆಂಬರ್ 7 ರವರೆಗೆ ಭರ್ಜರಿ ಆಫರ್ ನೀಡಿದೆ. ಹೊಂಡಾ ಫೆಸ್ಟ್ ಸಂಭ್ರಮದಡಿಯಲ್ಲಿ ಆಫರ್ ನೀಡಿದೆ.

ಪ್ರತಿ ಕಾರಿಗೂ ಬೇರೆ ಬೆೇರೆ ರಿಯಾತಿ ದರಗಳನ್ನ ನಿಗಧಿಪಡಿಸಲಾಗಿದೆ. ಇನ್ನು ಲಕ್ಕಿ ಗ್ರಾಹಕರಿಗೆ ಲಂಡನ್ ಅಥವಾ ಪ್ಯಾರಿಸ್ ಟ್ರಿಪ್ ಉಚಿತವಾಗಿ ನೀಡಲು ಹೊಂಡಾ ಕಾರು ಸಂಸ್ಥೆ ನಿರ್ಧರಿದೆ.

