ಬೆಂಗಳೂರು(ಆ.04): ಹೊಂಡಾ ಕಾರು ಸಂಸ್ಥೆ ಮಾರಾಟದಲ್ಲಿ ದಾಖಲೆ ಬರೆದಿದೆ. ಭಾರತದಲ್ಲಿ ನೂತನ ಹೊಂಡಾ ಅಮೇಜ್ ಬಿಡುಗಡೆ ಬಳಿಕ, ಕಾರು ಪ್ರೀಯರು ಹೊಂಡಾ ಕಾರಿನತ್ತು ಮುಖಮಾಡಿದ್ದಾರೆ. ಹೊಸ ವಿನ್ಯಾಸ ಹಾಗೂ ವಿಶೇಷತೆಗಳಿಂದ ಹೊಂಡಾ ಅಮೇಜ್ ಗ್ರಾಹಕರ ನೆಚ್ಚಿನ ಕಾರಾಗಿ ಮಾರ್ಪಟ್ಟಿದೆ.

ನೂತನ ಹೊಂಡಾ ಅಮೇಜ್ ಭಾರತದಲ್ಲಿ ಪ್ರತಿ ತಿಂಗಳು ಸರಾಸರಿ 10,000  ಮಾರಾಟವಾಗುತ್ತಿದೆ. ಹೀಗಾಗಿ ಹೊಂಡಾ ಪ್ರತಿ ತಿಂಗಳ ಒಟ್ಟು ಕಾರು ಮಾರಾಟ ಸಂಖ್ಯೆ 19,970. ಈ ಮೂಲಕ ಮಾರಾಟದಲ್ಲಿ ಟಾಟಾ ಹಾಗೂ ಮಹೀಂದ್ರ ಕಾರುಗಳನ್ನ ಹಿಂದಿಕ್ಕಿದೆ.

ಟಾಟಾ ಪ್ರತಿ ತಿಂಗಳು 17090 ಕಾರುಗಳು ಮಾರಾಟಗೊಳ್ಳುತ್ತಿದರೆ, ಮಹೀಂದ್ರ 19,781 ಕಾರುಗಳು ಮಾರಾಟವಾಗುತ್ತಿದೆ. ಸದ್ಯದಲ್ಲಿ ಹೊಂಡಾ ಸಿಆರ್-ವಿ ಎಸ್‌ಯುವಿ ಕಾರು ಬಿಡುಗಡೆಗೊಳ್ಳುತ್ತಿದೆ. ಹೀಗಾಗಿ ಪ್ರತಿ ತಿಂಗಳ ಮಾರಾಟ 20ಸಾವಿರ ದಾಟಲಿದೆ ಎಂದು ಹೊಂಡಾ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.