ಬೆಂಗಳೂರು(ಜು.27): ಹೊಂಡಾ ಮೋಟಾರು ಸಂಸ್ಥೆ ಇದೀಗ ನೂತನ ಹೊಂಡಾ ಏವಿಯೇಟರ್ ಸ್ಕೂಟರ್ ಬಿಡುಗಡೆ ಮಾಡಿದೆ. ಇತರ ಸ್ಕೂಟರ್‌ಗೆ ಭಾರಿ ಪೈಪೋಟಿ ನೀಡಲು ಇದರ ಬೆಲೆ ಕೂಡ ಕಡಿಮೆ ಮಾಡಲಾಗಿದೆ. 

ನೂತನ ಏವಿಯೇಟರ್ ಸ್ಕೂಟರ್ ಬೆಲೆ 55,157 ರೂಪಾಯಿ(ಎಕ್ಸ್ ಶೋರೂಂ). ನೂತನ ಸ್ಕೂಟರ್ ಸ್ಟಾಂಡರ್ಡ್, ಆಲೋಯ್ ಡ್ರಮ್, ಅಲೋಯ್ ಡಿಸ್ಕ್ ಎಂಬ ಮೂರು ರೂಪಾಂತರದಲ್ಲಿ ಲಭ್ಯವಿದೆ.

ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಏವಿಯೇಟರ್ ಗ್ರಾಹಕರನ್ನ ಮೋಡಿ ಮಾಡಲಿದೆ. 109 ಸಿಸಿ ಇಂಜಿನ್, 8 ಹೆಚ್‌ಪಿ ಹಾಗೂ 9ಎನ್ಎಮ್ ಟಾಕ್ಯೂ ಉತ್ವಾದಿಸುವ ಏರ್ ಕೂಲ್ ಇಂಜಿನ್ ಹೊಂದಿದೆ. 

ಪ್ರತಿ ಲೀಟರ್ ಪೆಟ್ರೋಲ್‌ಗೆ 60 ಕೀಮಿ ಮೈಲೇಜ್ ನೀಡಲಿದೆ ಎಂದು ಹೊಂಡಾ ಮೋಟಾರ್ ಸಂಸ್ಥೆ ಹೇಳಿದೆ. ಜೊತೆಗೆ ಗರಿಷ್ಠ ವೇಗ 82 ಕೀಮಿ. ಟ್ಯೂಬ್‌ಲೆಸ್ ಟೈಯರ್ ಹಾಗೂ ಡಿಸ್ಕ್ ಬ್ರೇಕ್‌ ಹೊಂದಿದೆ. ಹೀಗಾಗಿ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ.