3 ತಿಂಗಳಲ್ಲಿ 30ಸಾವಿರ ದಾಟಿತು ಹೊಂಡಾ ಅಮೇಜ್ ಕಾರು ಮಾರಾಟ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 23, Aug 2018, 7:49 PM IST
Honda Amaze car created highest sales record in just 3 months
Highlights

ಹೊಂಡಾ ಅಮೇಜ್ ಕಾರು ಅತ್ಯಲ್ಪ ಅವಧಿಯಲ್ಲಿ ಗರಿಷ್ಠ ಮಾರಾಟವಾದ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೊಂಡ ಅಮೇಜ್ ಕಾರು ಈ ರೀತಿ ಮಾರಾಟದಲ್ಲಿ ದಾಖಲೆ ಬರೆಯಲು ಕಾರಣವೇನು? ಇಲ್ಲಿದೆ ವಿವರ.

ಬೆಂಗಳೂರು(ಆ.23): ಹೊಂಡಾ ಸಂಸ್ಥೆಯ ನೂತನ ಹೊಂಡಾ ಅಮೇಜ್ ಕಾರು ಮಾರಾಟದಲ್ಲಿ ದಾಖಲೆ ಬರೆದಿದೆ. ಬಿಡುಗಡೆಯಾದ ಮೂರೇ ತಿಂಗಳಲ್ಲಿ ಹೊಂಡಾ ಅಮೇಜ್ ಕಾರು 30,000 ಕಾರುಗಳು ಮಾರಾಟವಾಗಿದೆ. 

ಬಿಡುಗಡೆಯಾದ 3 ತಿಂಗಳಲ್ಲಿ ಗರಿಷ್ಠ ಮಾರಾಟವಾದ ಹೊಂಡಾ ಕಾರು ಅನ್ನೋ ಹೆಗ್ಗಳಿಕೆಗೆ ಅಮೇಜ್ ಪಾತ್ರವಾಗಿದೆ. ಈ ಮೂಲಕ ಜುಲೈ ತಿಂಗಳಲ್ಲಿ ಹೊಂಡಾ ಮಾರಾಟ 12.5 ಶೇಕಡಾ ಏರಿಕೆಯಾಗಿದೆ.

ಆಕರ್ಷ ವಿನ್ಯಾಸ, ಆಧುನಿಕ ತಂತ್ರಜ್ಞಾನ ಹೆಚ್ಚು ಬಲಿಷ್ಟ ನೂತನ ಹೊಂಡಾ ಅಮೇಜ್ ಗ್ರಾಹಕರ ನೆಚ್ಚಿನ ಕಾರಾಗಿ ಮಾರ್ಪಟ್ಟಿದೆ. ನ್ಯೂ ಜನರೇಶ್ ಅಮೇಜ್ ಲುಕ್ ಕಾರು ಪ್ರೀಯರನ್ನ ಮೋಡಿ ಮಾಡಿದೆ. ಹೀಗಾಗಿ ಅಮೇಜ್ ಗರಿಷ್ಠ ಮಾರಾಟವಾಗಿದೆ ಎಂದು ಹೊಂಡಾ ಸೇಲ್ಸ್ ಹಾಗೂ ಮಾರ್ಕೆಟಿಂಗ್ ನಿರ್ದೇಶಕ ಮಾರ್ಕಟೋ ಹ್ಯೊಡಾ ಹೇಳಿದ್ದಾರೆ.

loader