ಟಿ.ವಿ ನೋಡುತ್ತಿರುತ್ತೀವಿ. ಫ್ಯಾನ್ ಗಾಳಿಗೆ ಚಳಿಯಾಗುತ್ತಿರುತ್ತೆ. ಎದ್ದು ಸ್ವಿಚ್ ಆಫ್ ಮಾಡಲು ಆಲಸ್ಯ ಬಿಡುತ್ತಿಲ್ಲ. ಲೈಟ್ ಆಫ್ ಮಾಡಲು ಮತ್ತೊಮ್ಮೆ ಏಳ್ಬೇಕು. ನೆಮ್ಮದಿಯಾಗಿ ಕೂರಲು ಇರುವ ಇಂಥ ವಿಘ್ನಗಳನ್ನೆಲ್ಲ ನಾಶ ಮಾಡುವ ಹೊಸ ಟೆಕ್ನಾಲಜಿ ಬಂದಿದೆ.  

ಹೋಗರ್ ಕಂಟ್ರೋಲ್ಸ್ ಸಿದ್ಧಪಡಿಸಿರುವ ಈ ಸಾಧನದ ಹೆಸರು ಪ್ರೈಮ್ ಪ್ಲಸ್ ಮಾಸ್ಟರ್ ರೂಮ್ ಕಂಟ್ರೋಲ್. ಇದೊಂದು ಸ್ಮಾರ್ಟ್ ಟೆಕ್ನಾಲಜಿ. ಮನೆಯಾದ್ಯಂತ ಇರುವ ಎಲ್ಲ ವಿದ್ಯುತ್ ಉಪಕರಣಗಳನ್ನೂ ಈ ಒಂದು ಸಾಧನದಿಂದ ನಿಯಂತ್ರಿಸಬಹುದು.

ಇದನ್ನೂ ಓದಿ | ಫೋಟೋ ಅಪ್ಲೋಡ್ ಮಾಡುವ ಮೊಬೈಲ್ ಬಳಕೆದಾರರ ವೈಯುಕ್ತಿಕ ಮಾಹಿತಿ ಲೀಕ್!

ಇದನ್ನು ಸ್ಮಾರ್ಟ್‌ಫೋನ್ ಹಾಗೂ ಧ್ವನಿಯ ಮೂಲಕವೂ ನಿಯಂತ್ರಿಸಬಹುದು. ಇದರ ಬೆಲೆ 8500 ರಿಂದ ಆರಂಭವಾಗುತ್ತದೆ.