ಮೊಬೈಲ್ ಸಂಖ್ಯೆ ಇಲ್ಲದೆಯೇ ಇನ್ಮುಂದೆ ಹೈಕ್'ನಲ್ಲಿ ಚಾಟ್ ಮಾಡಬಹುದು

First Published 11, Jan 2018, 5:53 PM IST
Hike ID lets users chat without sharing phone number
Highlights

ವಾಟ್ಸಪ್ ಥರವೇ ಜನಪ್ರಿಯವಾಗಿರುವ ಮೆಸೇಜಿಂಗ್ ಆಪ್  ಹೈಕ್  ಜ. 9 ರಂದು  ‘ಹೈಕ್ ಎಚ್‌'ಡಿ’  ಎಂಬ ವಿನೂತನ ಲಕ್ಷಣ ಪರಿಚಯಿಸಿದೆ.

ಬೆಂಗಳೂರು (ಜ.11): ವಾಟ್ಸಪ್ ಥರವೇ ಜನಪ್ರಿಯವಾಗಿರುವ ಮೆಸೇಜಿಂಗ್ ಆಪ್  ಹೈಕ್  ಜ. 9 ರಂದು  ‘ಹೈಕ್ ಎಚ್‌'ಡಿ’  ಎಂಬ ವಿನೂತನ ಲಕ್ಷಣ ಪರಿಚಯಿಸಿದೆ.

ಗ್ರಾಹಕರ  ಖಾಸಗಿತನ ಕಾಪಾಡುವ ದೃಷ್ಟಿಯಿಂದ ಪರಸ್ಪರ ಮೊಬೈಲ್ ಸಂಖ್ಯೆಗಳು ಗೊತ್ತಿಲ್ಲದಿದ್ದರೂ ವಿಶಿಷ್ಟವಾದ ಈ ಐಡಿ ಸಹಾಯದಿಂದ ಸಂವಹನ ನಡೆಸಬಹುದು. ಇನ್ನು ಮುಂದೆ ನಮ್ಮ ಗ್ರಾಹಕರು ಸ್ನೇಹಿತರ ಸಂಖ್ಯೆ ಸಂಗ್ರಹಿಸಿ, ಸೇವ್ ಮಾಡುವಂಥಹ ಕ್ಲಿಷ್ಟ ಪ್ರಕ್ರಿಯೆಗಳನ್ನು ದಾಟಿ ಹೋಗಬೇಕಿಲ್ಲ ಎಂದು ಹೈಕ್ ಹೇಳಿಕೊಂಡಿದೆ.

ಮುಂದಿನ ವಾರದಿಂದಲೇ ಆರಂಭವಾಗುವಂತೆ ಗ್ರಾಹಕರು ಹೈಕ್ ಐಡಿ ಕ್ರಿಯೇಟ್ ಮಾಡಿ ಅದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು, ಐಒಎಸ್ ಗ್ರಾಹಕರಿಗೆ ಈ ಫೀಚರ್ ಶೀಘ್ರದಲ್ಲೇ ದೊರಕಲಿದೆ ಎಂದು ಅವರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೈಕ್ ಕ್ಯಾಬ್ ಬುಕಿಂಗ್, ಬಸ್, ರೈಲು, ಸಿನಿಮಾ ಟಿಕೆಟ್ ಬುಕಿಂಗ್, ಬಿಲ್ ಪೇ ಮತ್ತಿತರ ಲಕ್ಷಣಗಳನ್ನು ಅಳವಡಿಸಿಕೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ. 2012  ರಲ್ಲಿ ಆರಂಭವಾದ ಹೈಕ್ ಮೆಸೆಂಜರ್ ಆಪ್ 100  ಮಿಲಿಯನ್‌'ಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ.

 

loader