ನಿಮ್ಮಲ್ಲಿ ಕಾರು ಅಥವಾ ಬೈಕ್ ಇದೆಯಾ? ನಿರ್ಲಕ್ಷ್ಯಿಸಿದರೆ ಜೈಲೇ ಗತಿ!
ಕಾರು ಹಾಗೂ ಬೈಕ್ ಮಾಲೀಕರು ನಿಯಮ ನಿರ್ಲಕ್ಷ್ಯಿಸಿದರೆ ಸಿದರೆ ಜೈಲು ಶಿಕ್ಷೆಗೆ ಗುರಿಯಾಗಲಿದ್ದೀರಿ. ಹಳೇ ನಿಯಮವನ್ನ ಕಟ್ಟು ನಿಟ್ಟಾಗಿ ಪಾಲಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಹಾಗಾದರೆ ಈ ನಿಯಮವೇನು? ಇಲ್ಲಿದೆ ಸಂಪೂರ್ಣ ವಿವರ.
ನವದೆಹಲಿ(ಸೆ.18): ಕಾರು,ಬೈಕ್ ಅಥವಾ ಇತರ ಯಾವುದೇ ವಾಹನ ಮಾಲೀಕರು ವಾಹನಗಳನ್ನ ಅಷ್ಟೇ ಉತ್ತಮವಾಗಿ ನಿರ್ವಹಣೆ ಮಾಡಬೇಕು. ಹೊಸ ನಿಯಮಗಳನ್ನ ನಿರ್ಲಕ್ಷ್ಯಿಸಿದೇ ಪಾಲಿಸಬೇಕು. ಇದೀಗ ದೆಹಲಿಯಲ್ಲಿ ಜಾರಿಗೆ ತಂದಿರುವ ಹೊಸ ವಾಹನ ನಿಯಮ ನಿರ್ಲಕ್ಷ್ಯಿಸಿದರೆ ಜೈಲೇ ಗತಿಯಾಗಲಿದೆ.
ಅಕ್ಟೋಬರ್ 13 ರೊಳಗೆ ದೆಹಲಿ ವಾಹನಗಳು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ಖಡಕ್ ಸೂಚನೆ ನೀಡಿದೆ. 2012ರಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನ ಸಂಪೂರ್ಣವಾಗಿ ಜಾರಿಗೊಳಿಸಲು ದೆಹಲಿ ಸಾರಿಗೆ ಇಲಾಖೆ ನಿರ್ಧರಿಸಿದೆ.
2012ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕೇಂದ್ರಾಡಳಿತ ಪ್ರದೇಶದ ವಾಹನಗಳು ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಅಳವಡಿಸಬೇಕು ಎಂದಿದೆ. ಇಷ್ಟೇ ಅಲ್ಲ, ನಿಮಯ ಪಾಲಿಸದವರು ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗುತ್ತಾರೆ ಎಂದು ಸೂಚಿಸಿತ್ತು.
ದೆಹಲಿಯ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಭದ್ರತೆ ಸವಾಲಾಗಿ ಪರಿಣಮಿಸುತ್ತಿದೆ. ದೆಹಲಿಯಲ್ಲಿ ಕನಿಷ್ಠ 40 ಲಕ್ಷ ವಾಹನಗಳಿಗೆ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಇಲ್ಲ. ಇದೀಗ ಅಕ್ಟೋಬರ್ 13ರೊಳಗೆ ಎಲ್ಲಾ ವಾಹನಗಳು ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಅಳವಡಿಸಲು ಸೂಚಿಸಿದೆ. ಇಲ್ಲವಾದಲ್ಲಿ ಭಾರಿ ಪ್ರಾಣದ ದಂಡ ಅಥವಾ ಜೈಲು ಶಿಕ್ಷೆಗೆ ಗುರಿಯಾಗಲಿದ್ದೀರಿ ಎಂದು ಸಾರಿಗೆ ಇಲಾಖೆ ಸೂಚಿಸಿದೆ.
ದೆಹಲಿಯಲ್ಲಿ 13 ಕೇಂದ್ರಗಳಲ್ಲಿ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಲಾಗುತ್ತೆ. ಕಟ್ಟು ನಿಟ್ಟಿನ ಆದೇಶದಿಂದ ಮುಂದಿನ ದಿನಗಳಲ್ಲಿ ಈ 13 ಕೇಂದ್ರಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಲಿದೆ ಎಂದು ಪೊಲೀಸರು ಸೂಚಿಸಿದ್ದಾರೆ. ಹೀಗಾಗಿ ಅಂತಿಮ ದಿನದವರೆಗೆ ಕಾಯದೇ ತಕ್ಷಣವೇ ನಂಬರ್ ಪ್ಲೇಟ್ ಬದಲಿಸಲು ಸೂಚಿಸಿದೆ.