ಭಾರತದ ಜನಪ್ರೀಯ ಹಾಗೂ ಬೈಕ್ ಪ್ರೀಯರ ನೆಚ್ಚಿನ ಹೀರೋ ಮೋಟಾರ್ ಕಾರ್ಪ್ ಅವರ ನೂತನ ಎಕ್ಸ್ಟ್ರೀಮ್ 200 ಆರ್ ಬೈಕ್  ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ.  ಇದರ ವಿಶೇಷತೆ ಏನು? ಬೆಲೆ ಎಷ್ಟು? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ. 

ಬೆಂಗಳೂರು(ಆ.23): ಭಾರತದ ಜನಪ್ರೀಯ ಮೋಟಾರ್ ಬೈಕ್ ಹೀರೋ ಇದೀಗ ಭಾರತೀಯ ಬೈಕ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಸಜ್ಜಾಗಿದೆ. ಹೀರೋ ಈ ಆಗಸ್ಟ್ ಕೊನೆ ವಾರದ ವೇಳೆಗೆ ಹೊಸ ಬೈಕ್ ಪರಿಚಯಿಸಲು ಮುಂದಾಗಿದೆ. ‘ಎಕ್ಸ್‌ಟ್ರೀಮ್ 200ಆರ್’ ಹೆಸರಿನೊಂದಿಗೆ ಹೀರೋ ಮಾರುಕಟ್ಟೆ ಪ್ರವೇಶಿಸಲು ರೆಡಿಯಾಗಿದೆ.

ನೂತನ ಹೀರೋ ಎಕ್ಸ್‌ಟ್ರೀಮ್ 200ಆರ್ ಬೈಕ್‌ನ ಎಕ್ಸ್‌ಶೋ ರೂಂ ಬೆಲೆ 89,900 ರೂಪಾಯಿ. 200 ಸಿಸಿ ಇಂಜಿನ್ ಸಾಮರ್ಥ್ಯದ ಈ ಬೈಕ್ ತನ್ನ ಸರಣಿಯಲ್ಲೇ ಕಡಿಮೆ ಬೆಲೆಯ ಶಕ್ತಿಶಾಲಿ ಬೈಕ್ ಆಗಿರಲಿದೆ. 

ಕೇವಲ ಐದು ಸೆಕಂಡ್‌ನಲ್ಲಿಯೇ 60 ಕಿ.ಮೀ. ಸ್ಪೀಡ್‌ಗೆ ತಲುಪಬಹುದಾದ ಐದು ಬಲಿಷ್ಠ ಗೇರ್‌ಗಳ ಈ ಬೈಕ್ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಡಿಜಿಟಲ್ ಮಾನೀಟರ್, ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಂ ಇದರ ವಿಶೇಷ.

18 ಬಿಹೆಚ್‌ಪಿ ಪವರ್ ಹಾಗೂ 17.1 ಎನ್‌ಎಮ್ ಪೀಕ್ ಟಾರ್ಕ್ಯೂ ಉತ್ಪಾದಿಸಲಿರುವ ಹೀರೋ ಎಕ್ಸ್‌ಟ್ರೀಮ್ 200ಆರ್ ಬೈಕ್ 200 ಸಿಸಿ ಬೈಕ್‌ಗಳಿಗೆ ಭಾರಿ ಪೈಪೋಟಿ ನೀಡೋ ಸಾಧ್ಯತೆ ಇದೆ.