ಬೆಂಗಳೂರು(ಆ.15): ಭಾರತದ ಬೈಕ್ ತಯಾರಿಕ ಕಂಪೆನಿ ಹೀರೋ ಮೊಟಾರ್ ಕಾರ್ಪ್ ಇದೀಗ ಗ್ರಾಹಕರಿಗೆ ಹೊಸ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಹೀರೋ ಡ್ಯುಯೆಟ್ ಇದೀಗ ಹೊಸ ಹೆಸರು ಹಾಗೂ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಹೀರೋ ಡ್ಯುಯೆಟ್ ಹೆಸರಿನಲ್ಲಿದ್ದ ಸ್ಕೂಟರ್ ಇದೀಗ ಹೀರೋ ಡೆಸ್ಟಿನಿ 125 ಹೆಸರು ಹಾಗೂ ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. 124.6 ಸಿಸಿ ಇಂಜಿನ ಸಾಮರ್ಥ್ಯದ ಹೀರೋ ಡೆಸ್ಟಿನಿ 125 ಸ್ಕೂಟರ್ 8.70 ಬಿಹೆಚ್‌ಪಿ ಹಾಗೂ 10.2 ಟಾರ್ಕ್ಯೂ ಉತ್ಪಾದಿಸಲಿದೆ. 

ಹೀರೋ ಡೆಸ್ಟಿನಿ ಸಂಪೂರ್ಣ ಮೆಟಲ್ ಬಾಡಿ ಹೊಂದಿದೆ. ಇಂಧನ್ ಫಿಲ್ಲರ್ ಕ್ಯಾಪ್, ಮೊಬೈಲ್ ಚಾರ್ಚಿಂಗ್ ಪೋರ್ಟ್, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್, ಡ್ಯುಯೆಲ್ ಟೋನ್ ಮಿರರ್ ಹಾಗೂ ಟ್ಯುಬ್ ಲೆಸ್ ಟೈಯರ್ ನೂತನ ಸ್ಕೂಟರ್‌ನಲ್ಲಿ ಲಭ್ಯವಿದೆ.

10 ಇಂಚು ಆಲೋಯ್ ವೀಲ್ಸ್, ಫ್ರಂಟ್ ಹಾಗೂ ರೇರ್ ಡ್ರಂ ಬ್ರೇಕ್, 5.5 ಲೀಟರ್ ಇಂಧನ ಸಾಮರ್ಥ್ಯ, 155 ಎಂಎಂ ಗ್ರೌಂಡ್ ಕ್ಲೀಯರೆನ್ಸ್ ಹಾಗೂ ಗರಿಷ್ಠ 85 ಕೀಮಿ ವೇಗ ಸಾಮರ್ಥ್ಯ ಹೊಂದಿದೆ.