ಹಾರ್ಲೆ ಡೇವಿಡ್ಸನ್ ಸ್ಟ್ರೀಟ್‌ಫೈಟರ್ ಬೈಕ್ ಹಿಂದಿದೆ ಭಾರತೀಯನ ಕೈಚಳಕ
ಹಾರ್ಲೆ ಡೇವಿಡ್ಸನ್ ಸ್ಟ್ರೀಟ್‌ಫೈಟರ್ ಬೈಕ್ ವಿನ್ಯಾಸ ಮಾಡಿರೋದು ಭಾರತೀಯ ಅನ್ನೋದೇ ವಿಶೇಷ. ಅದರಲ್ಲೂ ಸ್ಟ್ರೀಟ್‌ಫೈಟರ್ ಬೈಕ್ ಡಿಸೈನ್ ಮಾಡಿದ ಈ ಭಾರತೀಯ ಕನ್ನಡ ಕೂಡ ಅಷ್ಟೆ ಸುಲಭವಾಗಿ ಮಾತನಾಡುತ್ತಾರೆ. ಹಾಗಾದರೆ ಹಾರ್ಲೆ ಡೇವಿಡ್ಸನ್ ಬೈಕ್ ಡಿಸೈನ್ ಮಾಡಿದ ಆ ಭಾರತೀಯನ ವಿವರ ಇಲ್ಲಿದೆ.
ಬೆಂಗಳೂರು(ಆ.01): ಅಮೇರಿಕಾದ ಖ್ಯಾತ ಬೈಕ್ ತಯಾರಿಕಾ ಕಂಪೆನಿ ಹಾರ್ಲೆ ಡೇವಿಡ್ಸನ್ ನೂತನ 3 ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದರಲ್ಲಿ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್‌ಫೈಟರ್ ಬೈಕ್ ವಿನ್ಯಾಸ ಹೆಚ್ಚು ಜನಪ್ರೀಯವಾಗಿದೆ.
975 ಸಿಸಿ ಇಂಜಿನ್ ಹೊಂದಿರುವ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್‌ಫೈಟರ್ ಬೈಕ್ ವಿನ್ಯಾಸದಿಂದಲೇ ಜನರನ್ನ ಆಕರ್ಷಿಸುತ್ತಿದೆ. ವಿಶೇಷ ಅಂದರೆ ಸ್ಟ್ರೀಟ್‌ಫೈಟರ್ ಬೈಕ್ ಡಿಸೈನ್ ಮಾಡಿದ್ದು ಭಾರತೀಯ.
ಹಾರ್ಲೆ ಡೇವಿಡ್ಸನ್ ಕಂಪೆನಿಯ ಹಿರಿಯ ಡಿಸೈನರ್ ಚೇತನ್ ಶೆದ್ಜಾಲೆ ಈ ನೂತನ ಬೈಕ್ ಡಿಸೈನರ್. ಚೇತನ್ ಕೈಚಳಕದಿಂದಲೇ ಸ್ಟ್ರೀಟ್‌ಫೈಟರ್ ಈ ಮಟ್ಟಿಗೆ ಪ್ರಖ್ಯಾತಿ ಪಡೆದಿದೆ. ಹಾರ್ಲೆ ಡೇವಿಡ್ಸನ್ ಕಂಪೆನಿ ನೂತನ ಬೈಕ್‌ಗಳ ಡಿಸೈನ್ ಅನಾವರಣಗೊಳಿಸದ ಬೆನ್ನಲ್ಲೇ ವಿನ್ಯಾಸ ಎಲ್ಲರನ್ನ ಆಕರ್ಷಿಸಿದೆ.
2010ರಲ್ಲಿ ಚೇತನ್ ಹಾರ್ಲೆ ಡೇವಿಡನ್ಸ್ ಕಂಪೆನಿ ಸೇರಿಕೊಂಡರು. ಇದೀಗ ಹಾರ್ಲೆ ಡೇವಿಡ್ಸನ್ ಕಂಪೆನಿಯ ಹಿರಿಯ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚೇತನ್ ಹುಟ್ಟೂರು ಮಹಾರಾಷ್ಟ್ರದ ಸೋಲಾಪುರ್. ಚಿಕ್ಕಂದಿನಿಂದಲೇ ಬೈಕ್ ಆಸಕ್ತಿ ಬೆಳೆಸಿಕೊಂಡಿದ್ದ ಚೇತನ್, ಬೈಕ್ ಕಂಪೆನಿಯಲ್ಲಿ ಕೆಲಸ ಮಾಡೋ ಗುರಿ ಇಟ್ಟುಕೊಂಡಿದ್ದರು.
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ ಬಾಲ್ಯ ಕಳೆದ ಚೇತನ್, ಕನ್ನಡ ಕೂಡ ಮಾತನಾಡುತ್ತಾರೆ ಅನ್ನೋದು ನಮಗೆ ಹೆಮ್ಮೆ. ಇಟೆಲಿಯಲ್ಲಿ ಆರ್ಕಿಟೆಕ್ಚರ್ ಅಭ್ಯಾಸ ಮಾಡಿದ ಚೇತನ್ ಇದೀಗ ಪ್ರತಿಷ್ಠಿತ ಹಾರ್ಲೆ ಡೇವಿಡ್ಸನ್ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.