ಮುಂದಿನ 48 ಗಂಟೆಗಳ ಕಾಲ ಇಂಟರ್‌ನೆಟ್ ಸೇವೆ ಅಲಭ್ಯವಾಗಲಿದೆ. ಇಂಟರ್‌ನೆಟ್ ಸೇವೆಯಿಂದ ನಿಮ್ಮ ದಿನ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಅಡಚಣೆಯಾಗಲಿದೆ. ಈ ಸಮಸ್ಯೆಯಿಂದ ಪಾರಾಗಲು ನಿವೇನು ಮಾಡ್ಬೇಕು? ಇಲ್ಲಿದೆ.

ಬೆಂಗಳೂರು(ಅ.12): ಇಂಟರ್‌ನೆಟ್ ಇಲ್ಲದೇ ಬದುಕಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಬ್ಯಾಂಕ್ ವ್ಯವಹಾರ, ಬಿಲ್ ಪಾವತಿ, ಟಿಕೆಟ್ ಬುಕ್ಕಿಂಗ್, ಟಾಕ್ಸಿ ಬುಕ್ಕಿಂಗ್, ವ್ಯಾಟ್ಸಾಪ್, ಫೇಸ್‌ಬುಕ್.. ಹೀಗೆ ನಮ್ಮ ದಿನ ನಿತ್ಯದ ಬಳಕೆ ಒಂದಾ-ಎರಡಾ? ಇದೀಗ ಇದೇ ಇಂಟರ್‌ನೆಟ್ 48 ಗಂಟೆ ಕಾಲ ಇರಲ್ಲ ಅಂದ್ರೆ ದಿಕ್ಕೇ ತೋಚದಂತಾಗುವುದು ನಿಜ. ಹಾಗಂತ ಆಕಾಶ ಕಳಚಿ ಬಿದ್ದವರ ಹಾಗೇ ಇರಬೇಕಿಲ್ಲ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೆಟ್ ಸೇವೆ ಅಲಭ್ಯತೆಯಿಂದ ಪಾರಾಗಲು ಹಲವು ಸೂತ್ರಗಳಿವೆ. ಈ ಅಂಶಗಳನ್ನ ಗಮನಿಸಿದರೆ, ಇಂಟರ್‌ನೆಟ್ ಸೇವೆ ಅಲಭ್ಯತೆ ನಿಮ್ಮನ್ನ ಹೆಚ್ಚಾಗಿ ಕಾಡುವುದಿಲ್ಲ. 

  • ಇಂಟರ್‌ನೆಟ್ ಮೂಲಕ ಬ್ಯಾಂಕ್ ವ್ಯವಹಾರಗಳನ್ನ ಈಗಲೇ ಮುಗಿಸಿಕೊಳ್ಳಿ
  • ಟಿಕೆಟ್ ಬುಕ್ಕಿಂಗ್, ಟ್ಯಾಕ್ಸಿ ಬುಕ್ಕಿಂಗ್ ಸೇವೆಯನ್ನ ಈಗಲೇ ಧೃಡಪಡಿಸಿಕೊಳ್ಳಿ
  • ರಿಚಾರ್ಚ್, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಸೇರಿದಂತೆ ಎಲ್ಲಾ ಬಿಲ್ ಪಾವತಿ ಕಡೆ ದಿನಾಂಕ ಪರೀಕ್ಷಿಸಿ(ಇನ್ನೆರಡು ದಿನವೇ ಅಂತಿಮವಾಗಿದ್ದರೆ ಈಗಲೇ ಪಾವತಿಸಿ)
  • ಸಮಸ್ಯೆ ಎದುರಾಗೋ ಮುನ್ನ ಆನ್‌ಲೈನ್ ಶಾಪಿಂಗ್ ಮಗಿಸಿ, ಇಲ್ಲಾ ಮುಂದೂಡಿ
  • ಅಗತ್ಯಕ್ಕಾಗಿ ಎಟಿಎಂನಿಂದ ಹಣ ಡ್ರಾ ಮಾಡಿಟ್ಟುಕೊಳ್ಳಿ
  • ಈಗಲೇ ಇ-ಮೇಲ್ ಹಾಗೂ ಇತರ ಪ್ರಮುಖ ಡಾಕ್ಯುಮೆಂಟ್ ಕಳುಹಿಸುವ ಅಥವಾ ಸ್ವೀಕರಿಸುವ ಕಾರ್ಯ ಮುಗಿಸಿಕೊಳ್ಳಿ

ಇದನ್ನೂ ಓದಿ: ನೆಟ್ ಬಳಕೆದಾರರಿಗೆ ಶಾಕ್- ಇನ್ನೆರಡು ದಿನ ಇರಲ್ಲ ಇಂಟರ್‌ನೆಟ್!

ಮುಂದಿನ 48 ಗಂಟೆಗಳ ಕಾಲ ಜಾಗತಿಗವಾಗಿ ಇಂಟರ್‌ನೆಟ್ ಅಲಭ್ಯವಾಗಲಿದೆ. ಮೈಂಟೇನೆನ್ಸ್ ಕಾರಣದಿಂದ ಇನ್ನೆರಡು ದಿನ ಇಂಟರ್‌ನೆಟ್ ಸೇವೆ ಏರುಪೇರಾಗಲಿದೆ ಎಂದು ಕಮ್ಯೂನಿಕೇಶನ್ ರೆಗ್ಯೂಲೇಟರಿ ಅಥಾರಿಟಿ(CRA) ಹೇಳಿದೆ.