ವಾಷಿಂಗ್ಟನ್(ಜು.26): ಖಗೋಳ ವಿಜ್ಞಾನಿಗಳ ನಿದ್ದೆಗೆಡೆಸಿದ್ದ ಕ್ಷುದ್ರಗ್ರಹ 2019 OK ಭೂಕಕ್ಷೆಯಿಂದ ಅತ್ಯಂತ ಸುರಕ್ಷಿತವಾಗಿ ಹಾದು ಹೋಗಿದೆ. ಒಂದು ಸೆಕೆಂಡ್‌ಗೆ 24 ಕಿ.ಮೀ ವೇಗದಲ್ಲಿ ಭೂ ಕಕ್ಷೆಯಿಂದ ಸುಮಾರು 71,880 ಕಿ.ಮೀ ಅಂತರದಲ್ಲಿ ಕ್ಷುದ್ರಗ್ರಹ ಹಾದು ಹೋಗಿದೆ.

ಸುಮಾರು 57 ರಿಂದ 130 ಮೀಟರ್ ವಿಸ್ತೀರ್ಣತೆ ಹೊಂದಿದ್ದ 2019 OK ಕ್ಷುದ್ರಗ್ರಹ, ಇತ್ತಿಚಿನ ದಿನಗಳಲ್ಲಿ ಭೂಮಿಯ ಅತ್ಯಂತ ಸಮೀಪ ಹಾದು ಹೋದ ಕ್ಷುದ್ರಗ್ರಹ ಎನ್ನಲಾಗಿದೆ.

ಒಂದು ವೇಳೆ ಈ ಕ್ಷದ್ರಗ್ರಹ ಭೂಮಿಯ ಗುರುತ್ವಾಕರ್ಷಣೆಗೆ ಸಿಕ್ಕು ಭೂಮಿಗೆ ಬಂದು ಅಪ್ಪಳಿಸಿದ್ದರೆ, ಹಿರೋಶಿಮಾ ಮೇಲೆ ಹಾಕಲಾಗಿದ್ದ ಅಣುಬಾಂಬ್'ಗಿಂತ 30 ಪಟ್ಟು ಹೆಚ್ಚು ಶಕ್ತಿಯನ್ನು ಉತ್ಪಾದಿಸಿ ಭಾರೀ ವಿನಾಶಕ್ಕೆ ಕಾರಣವಾಗುತ್ತಿತ್ತು ಎಂದು ನಾಸಾ ತಿಳಿಸಿದೆ.

ವರ್ಷದಲ್ಲಿ ಸರಿಸುಮಾರು 2,000ಕ್ಕೂ ಅಧಿಕ ಕ್ಷುದ್ರಗ್ರಹಗಳು ಭೂಮಿಯನ್ನು ಹಾದು ಹೋಗುತ್ತವೆ. ಅದರಲ್ಲಿ ಕೆಲವೇ ಕೆಲವು ಕ್ಷುದ್ರಗ್ರಹಗಳು ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗುತ್ತವೆ. ಇದು ನಾಸಾ ಸೇರಿದಂತೆ ಜಗತ್ತಿನ ಎಲ್ಲಾ ಖಗೋಳ ಸಂಸ್ಥೆಗಳು ಮತ್ತ ಉವಿಜ್ಞಾನಿಳ ನಿದ್ದೆಗೆಡೆಸುವುದು ಸುಳ್ಳಲ್ಲ.