Asianet Suvarna News Asianet Suvarna News

Twitterಗೆ ಬೆಂಗಳೂರಿನ ಮನೀಶ್‌ ಮಹೇಶ್ವರಿ ಗುಡ್‌ಬೈ : ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ನಿರ್ಧಾರ!

*ಟ್ವೀಟರ್‌ ಇಂಡಿಯಾ ಮಾಜಿ ಮುಖ್ಯಸ್ಥ  ಮನೀಶ್‌ 
*ಇತ್ತೀಚೆಗೆ  ಅಮೆರಿಕಕ್ಕೆ ವರ್ಗಾಯಣೆಯಾಗಿದ್ದ ಮಹೇಶ್ವರಿ
*ಭಾರವಾದ ಹೃದಯದಿಂದ ಟ್ವೀಟರ್‌ ಬಿಡುತ್ತಿದ್ದೇನೆ ಎಂದು ಟ್ವೀಟ್‌

Former Twitter India head Manish Maheshwari Is Quitting Twitter mnj
Author
Bengaluru, First Published Dec 15, 2021, 11:34 AM IST | Last Updated Dec 15, 2021, 11:39 AM IST

ನವದೆಹಲಿ(ಡಿ. 15): ವಿವಾದದ ಸುಳಿಯಲ್ಲಿದ್ದ ‘ಟ್ವೀಟರ್‌ ಇಂಡಿಯಾ’ದ ಈ ಹಿಂದಿನ ಮುಖ್ಯಸ್ಥ ಹಾಗೂ ಬೆಂಗಳೂರು ಮೂಲದ ಮನೀಶ್‌ ಮಹೇಶ್ವರಿ (Manish Maheshwari), ಟ್ವೀಟರ್‌ಗೆ ರಾಜೀನಾಮೆ (Resign) ನೀಡಿದ್ದಾರೆ. ಇತ್ತೀಚೆಗೆ ಅವರನ್ನು ಅಮೆರಿಕಕ್ಕೆ ವರ್ಗಾಯಿಸಲಾಗಿತ್ತು. ಇದರ ಬೆನ್ನಲ್ಲೇ ಅವರು ಪದತ್ಯಾಗ ಮಾಡಿದ್ದಾರೆ. ‘ಭಾರವಾದ ಹೃದಯದಿಂದ ಟ್ವೀಟರ್‌ ಬಿಡುತ್ತಿದ್ದೇನೆ. ಇನ್ನು ಶಿಕ್ಷಣ ಹಾಗೂ ಬೋಧನೆಯತ್ತ ಗಮನ ಹರಿಸಲಿದ್ದೇನೆ’ ಎಂದು ಮಂಗಳವಾರ ರಾತ್ರಿ ಅವರು ಟ್ವೀಟ್‌ ಮಾಡಿದ್ದಾರೆ. 

ಕೆಲ ತಿಂಗಳ ಹಿಂದೆ ಉತ್ತರಪ್ರದೇಶದ (Uttar Padesh) ಗಾಜಿಯಾಬಾದ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಹಿಂದೂಗಳು ‘ಜೈಶ್ರೀರಾಂ’ ಹೇಳುವಂತೆ ಬಲವಂತ ಮಾಡಿದ್ದರು ಎಂದು ಟ್ವೀಟರ್‌ನಲ್ಲಿ ವಿಡಿಯೋ ಪ್ರಸಾರ ಆಗಿತ್ತು. ಆದರೆ ಇದು ನಕಲಿ ವಿಡಿಯೋ ಎಂದು ದೂರು ಬಂದ ಕಾರಣ ಉತ್ತರ ಪ್ರದೇಶ ಪೊಲೀಸರು ಮನೀಶ್‌ ಮೇಲೆ ಕೇಸು ಹಾಕಿದ್ದರು. ನಂತರ ಅವರ ವಿಚಾರಣೆಗೆ ಕರ್ನಾಟಕ ಹೈಕೋರ್ಟ್‌ ತಡೆ ನೀಡಿತ್ತು.

 

 

ಹೊಸ ಐಟಿ ನಿಯಮಗಳನ್ನು ಅನುಸರಿಸಲು ವಿಳಂಬ 

ಜೂನ್ 2021 ರಲ್ಲಿ,  ಹಲವು ಪ್ರತಿಷ್ಟಿತ ಬಳಕೆದಾರರು ಪ್ರಕಟಿಸಿದ ಟ್ವೀಟ್‌ಗಳ್ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಟ್ವೀಟರ್‌ ಸಾಕಷ್ಟು ಸಮಯ ತೆಗೆದುಕೊಂಡಿತ್ತು. ಅಲ್ಲದೆ, ಸಾಮಾಜಿಕ ಮಾಧ್ಯಮ ದೈತ್ಯ ಟ್ವೀಟರ್ ಭಾರತದಲ್ಲಿ ಹೊಸ ಐಟಿ ನಿಯಮಗಳನ್ನು ಅನುಸರಿಸಲು ವಿಳಂಬ ಮಾಡಿದೆ. ಮಹೇಶ್ವರಿ ಅವರನ್ನು ಯುಎಸ್‌ಗೆ ವರ್ಗಾಯಿಸಲು ಟ್ವಿಟರ್ ಅಧಿಕೃತವಾಗಿ ಕಾರಣವನ್ನು ಬಹಿರಂಗಪಡಿಸದಿದ್ದರೂ, ಭಾರತದಲ್ಲಿನ ಈ ಬೆಳವಣಿಗೆಗಳ ನಂತರವೇ ಅವರ ವರ್ಗಾವಣೆ ಮಾಡಲಾಗಿತ್ತು. 

ಮೆಟಾವರ್ಸಿಟಿ ಪ್ರಾರಂಭಿಸಲಿರುವ ಮಹೇಶ್ವರಿ 

ತಮ್ಮ ಭವಿಷ್ಯದ ಯೋಜನೆಗಳ ಕುರಿತು ಮಾತನಾಡಿದ ಮಹೇಶ್ವರಿ, “COVID19 ಆರ್ಥಿಕತೆಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಕೌಶಲ್ಯಗಳನ್ನು ನೀಡುವುದು ಮಾತ್ರವಲ್ಲದೆ ಆ ಕೌಶಲ್ಯಗಳನ್ನು ಹೇಗೆ ನೀಡಲಾಗುತ್ತದೆ ಎಂಬುದನ್ನು ಮೂಲಭೂತವಾಗಿ ಬದಲಾಯಿಸಿದೆ. ಶಿಕ್ಷಣ ಮತ್ತು ಉದ್ಯೋಗವನ್ನು ಸುಧಾರಿಸಲು ತಂತ್ರಜ್ಞಾನವನ್ನು, ವಿಶೇಷವಾಗಿ #ಮೆಟಾವರ್ಸ್ ಅನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ನಾನು ರೋಮಾಂಚನಗೊಂಡಿದ್ದೇನೆ" ಎಂದು ಹೇಳಿದ್ದಾರೆ.

 

 

"ಶಿಕ್ಷಣ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಭಾರತದ  ಮಧ್ಯಮ ವರ್ಗದ ಕುಟುಂಬದವನಾದ  ನಾನು ಪ್ರೌಢಶಾಲೆಯಿಂದಲೂ ಶಿಕ್ಷಕನಾಗಿದ್ದೆ. ವಾರ್ಟನ್‌ನಲ್ಲಿ ಸಹ, ನಾನು ಬೋಧನಾ ಸಹಾಯಕನಾಗಿ ಕೆಲಸ ಮಾಡಿ ನನ್ನ ಶಿಕ್ಷಣದ ಖರ್ಚು ವೆಚ್ಚ ಹಾಗೂ ಶುಲ್ಕಗಳನ್ನು ಪಾವತಿಸಿದೆ. ನನ್ನ ಬೇರುಗಳಿಗೆ ಹಿಂತಿರುಗಲು ಇದು ಒಂದು ಅವಕಾಶ. ” ಎಂದು ಅವರು ಹೇಳಿದ್ದಾರೆ.“ನಾನು ಶಿಕ್ಷಣವನ್ನು ಮರುರೂಪಿಸಲು ಮೈಕ್ರೋಸಾಫ್ಟ್‌ನಲ್ಲಿ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ತನಯ್ ಪ್ರತಾಪ್ (Tanay Pratap- Invact ಸಂಸ್ಥಾಪಕ) ಅವರೊಂದಿಗೆ ಪಾಲುದಾರನಾಗಲಿದ್ದೇನೆ. ನಾವು ಮೆಟಾವರ್ಸಿಟಿ ಎಂಬ ವೇದಿಕೆಯ ಮೂಲಕ ಉದ್ಯೋಗದ ತರಬೇತಿಯನ್ನು ನೀಡಲಿ ಪ್ರಾರಂಭಿಸುತ್ತೇವೆ,”ಎಂದು ಮಹೇಶ್ವರಿ ತಿಳಿಸಿದ್ದಾರೆ.

ಇದನ್ನೂ ಓದಿ:

1) Twitter toppers: ಸೌತ್ ಸಿನಿಮಾ ಆಳೋ ನಟ, ನಟಿ ಇವರು..!

2) Twitter Trends‌ in India: 2021ರಲ್ಲಿ ಟ್ವೀಟರ್‌ನಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದ ವಿಷಯ ಯಾವುದು ಗೊತ್ತಾ?

3) Twitter CEO on trend: ಭಾರತೀಯ ಮೂಲದ ಟ್ವಿಟ್ಟರ್‌ನ ಹೊಸ ಸಿಇಒ ಬಗ್ಗೆ ನಿಮಗೆಷ್ಟು ಗೊತ್ತು?

Latest Videos
Follow Us:
Download App:
  • android
  • ios