ಬೆಂಗಳೂರು(ಅ.04): ಆಕರ್ಷಕ ವಿನ್ಯಾಸ, ಆಧುನಿಕ ತಂತ್ರಜ್ಞಾನ, ಗರಿಷ್ಠ ಸುರಕ್ಷತೆಯ ನೂತನ ಫೋರ್ಡ್ ಆಸ್ಪೈರ್ ಸೆಡಾನ್ ಕಾರು ಬಿಡುಗಡೆಯಾಗಿದೆ. ಉದ್ಯಾನ ನಗರಿಯಲ್ಲಿ ಫೋರ್ಡ್ ಇಂಡಿಯಾ ಸಂಸ್ಥೆ ನೂತನ ಆಸ್ಪೈರ್ ಕಾರನ್ನ ಬಿಡುಗಡೆ ಮಾಡಿತು.ನೂತನ ಆಸ್ಪೈರ್ ಕಾರಿನ ಬೆಲೆ 5.55ಲಕ್ಷ ರೂಪಾಯಿಂದ(ಎಕ್ಸ್ ಶೋರೂಂ)ಪ್ರಾರಂಭವಾಗಲಿದೆ. 

ಕಡಿಮೆ ಬೆಲೆ ಹಾಗೂ ಮೋಸ್ಟ್ ಪವರ್‌ಪುಲ್ ಕಾರು ಇದೀಗ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಈ ಕಾರಿನಲ್ಲಿ ಬರೋಬ್ಬರಿ 20 ಸ್ಟೋರೇಜ್ ಸ್ಪೇಸ್ ನೀಡಲಾಗಿದೆ. ಇನ್ನು ಮಳೆ ಬಂದ ತಕ್ಷಣ  ಆಟೋಮ್ಯಾಟಿಕ್ ಆಗಿ ವೈಪರ್ ಕಾರ್ಯನಿರ್ವಹಸಲಿದೆ.  ರಾತ್ರಿಯಾದ ಕೂಡಲೆ ಆಟೋಮ್ಯಾಟಿಕ್ ಆಗಿ ಹೆಡ್‌ಲ್ಯಾಂಪ್ಸ್ ಕೂಡ ಕಾರ್ಯನಿರ್ವಹಸಲಿದೆ. ಈ ಮೂಲಕ  ಯಾವುದೇ ಅಡೆ ತಡೆ ಇಲ್ಲದೇ ಫೋರ್ಡ್ ಆಸ್ಪೈರ್ ಚಾಲನೆ ಮಾಡಬಹುದಾಗಿದೆ.

1.2 ಲೀಟರ್ ಟಿವಿವಿಸಿಟಿ ಪೆಟ್ರೋಲ್ ಇಂಜಿನ್  96 ಪಿಎಸ್ ಪೀಕ್ ಪವರ್ ಹಾಗೂ 120 ಎನ್ಎಂ ಟಾರ್ಕ್ ಉತ್ವಾದಿಸುತ್ತದೆ. ಇನ್ನು ಪೆಟ್ರೋಲ್ ಕಾರು 20.4 ಕೀ.ಮಿ ಮೈಲೇಜ್ ನೀಡಲಿದೆ ಎಂದು ಫೋರ್ಡ್ ಸಂಸ್ಥೆ ಹೇಳಿದೆ. ನೂತನ ಆಸ್ಪೈರ್ ಪೆಟ್ರೋಲ್ ಜೊತೆಗೆ ಡೀಸೆಲ್‌ ಇಂಜಿನ್ ಕೂಡ ಲಭ್ಯವಿದೆ.  1.5 
ಟಿಡಿಸಿಐ ಡೀಸೆಲ್ ಇಂಜಿನ್ 100 ಪಿಎಸ್ ಪೀಕ್ ಪವರ್ ಹಾಗೂ 215 ಟಾರ್ಕ್ ಹಾಗೂ 26.1 ಕೀ.ಮಿ ಮೈಲೇಜ್ ನೀಡಲಿದೆ.

ನೂತನ ಆಸ್ಪೈರ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ ಆಟೋಮ್ಯಾಟಿಕ್ ಟ್ಸಾನ್ಸ್‌ಮಿಶನ್(AMT)ಯಲ್ಲೂ ಲಭ್ಯವಿದೆ. ಇಂಜಿನ್ ಜೊತೆಗೆ ಹೊರ ವಿನ್ಯಾಸದಲ್ಲೂ ಕೆಲ ಬದಲಾವಣೆ ಮಾಡಲಾಗಿದೆ.  ಫಾಗ್ ಲ್ಯಾಂಪ್, ಹೆಡ್ ಲೈಟ್, ಮುಭಾಗದ ಗ್ರಿಲ್ ಸೇರಿದಂತೆ ಆಸ್ಪೈರ್ ವಿನ್ಯಾಸ ಹೆಚ್ಚ ಆಕರ್ಷಕವಾಗಿದೆ. 15 ಇಂಚಿನ್ ಅಲೋಯ್ ವೀಲ್ಸ್, ಕಾರಿನೊಳಗಿನ ಬೂಟ್ ಸ್ಪೇಸ್ ಕೂಡ ಅನೂಕೂಲಕರವಾಗಿದೆ. ರಿವರ್ಸ್ ಪಾರ್ಕಿಂಗ್ ಕ್ಯಾಮಾರ, ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್, ಕೀ ಲೆಸ್ ಎಂಟ್ರಿ ಹೊಂದಿದೆ.

ಗರಿಷ್ಠ ಸುರಕ್ಷತೆ ಒದಗಿಸುವು ಫೋರ್ಡ್ ಇದೀಗ ಆಸ್ಪೈರ್‌ ಕಾರಿನಲ್ಲೂ ವಿಶೇಷ ಕಾಳಜಿವಹಿಸಿದೆ. ಸ್ಟಾಂಡರ್ಸ್ ಡ್ಯುಯೆಲ್ ಏರ್‌ಬ್ಯಾಗ್ ಎಲ್ಲಾ ವೇರಿಯೆಂಟ್ ಕಾರಿನಲ್ಲೂ ಲಭ್ಯವಿದೆ. ಟಾಪ್ ಮಾಡೆಲ್‌ಗಳಲ್ಲಿ 6 ಏರ್‌ಬ್ಯಾಗ್ ಸೌಲಭ್ಯವಿದೆ. ಎಬಿಎಸ್ ಬ್ರೇಕ್, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಶನ್(ಇಬಿಡಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್ ಹಾಗೂ ಎಲೆಕ್ಟ್ರಿಕಲ್ ಪವರ್ ಅಸಿಸ್ಟ್ ಸ್ಟೇರಿಂಗ್ ತಂತ್ರಜ್ಞಾನ ಹೊಂದಿದೆ.

ನೂತನ ಆಸ್ಪೈರ್ ಪೆಟ್ರೋಲ್ ಕಾರಿನ ಬೆಲೆ 5.55 ಲಕ್ಷ ರೂಪಾಯಿ(ಎಕ್ಸ್ ಶೋರೂಂ)ಯಿಂದ 8.49 ಲಕ್ಷ ರೂಪಾಯಿವರೆಗಿದೆ. ಇನ್ನೂ ಡೀಸೆಲ್ ಇಂಜಿನ್ ಕಾರು 6.45 ಲಕ್ಷ ರೂಪಾಯಿಂದ 8.14 ಲಕ್ಷ(ಎಕ್ಸ್ ಶೂ ರೂಂ ವರೆಗಿದೆ.