ಭಾರತದಲ್ಲಿ ಅತಿಹೆಚ್ಚು ಡೌನ್'ಲೋಡ್ ಆದ ಆ್ಯಪ್?

First Published 16, Oct 2017, 5:19 PM IST
flipkart becomes highest downloaded app in india
Highlights

ಫ್ಲಿಪ್'ಕಾರ್ಟ್'ನ ಡೆಸ್ಕ್'ಟಾಪ್ ಮತ್ತು ಆ್ಯಪ್ ಆವೃತ್ತಿಯಂತೆ ಮೊಬೈಲ್ ವೆಬ್'ಸೈಟ್ ಕೂಡ ಜನಪ್ರಿಯವಾಗಿದೆ. ಇಂಟರ್ನೆಟ್ ಕನೆಕ್ಟಿವಿಟಿ ತುಸು ದುರ್ಬಲವಾಗಿರುವ ಪ್ರದೇಶಗಳಲ್ಲೂ ಫ್ಲಿಪ್'ಕಾರ್ಟ್'ನ ಮೊಬೈಲ್ ವೆಬ್'ಸೈಟ್'ನ್ನು ಬಳಸಬಹುದಾಗಿದೆ. ಸಂಸ್ಥೆಯ ಈ ತಂತ್ರಜ್ಞಾನವು ಇತರ ಆ್ಯಪ್'ಗಳಿಗೆ ಮಾದರಿಯಾಗಿದೆ.

ಬೆಂಗಳೂರು(ಅ. 16): ಇ-ಕಾಮರ್ಸ್ ಕಂಪನಿ ಫ್ಲಿಪ್-ಕಾರ್ಟ್ ಹೊಸ ಮೈಲಿಗಲ್ಲು ಮುಟ್ಟಿದೆ. ಗೂಗಲ್ ಪ್ಲೇ ಸ್ಟೋರ್'ನಲ್ಲಿ ಫ್ಲಿಪ್'ಕಾರ್ಟ್ ಆ್ಯಪ್ 10 ಕೋಟಿ ಬಾರಿ ಡೌನ್'ಲೋಡ್ ಆಗಿದೆ. ಈ ಮೈಲುಗಲ್ಲು ಮುಟ್ಟಿದ ಮೊದಲ ಭಾರತೀಯ ಆ್ಯಪ್ ಎನಿಸಿದೆ. ಅತೀ ಹೆಚ್ಚು ಡೌನ್'ಲೋಡ್ ಆದ ಭಾರತದ ಆ್ಯಪ್ ಎಂಬ ದಾಖಲೆಯೂ ಫ್ಲಿಪ್'ಕಾರ್ಟ್ ಹೆಸರಿನಲ್ಲಿದೆ.

ಭಾರತದಲ್ಲಿ 30 ಕೋಟಿ ಸ್ಮಾರ್ಟ್'ಫೋನ್ ಬಳಕೆದಾರರಿದ್ದಾರೆ. ಆ ಪೈಕಿ 10 ಕೋಟಿ ಮೊಬೈಲ್'ಗಳಲ್ಲಿ ಫ್ಲಿಪ್'ಕಾರ್ಟ್ ಇನ್ಸ್'ಟಾಲ್ ಆಗಿರುವುದು ಗಮನಾರ್ಹ.

2016ರ ಫೆಬ್ರವರಿಯಲ್ಲಿ ಫ್ಲಿಪ್'ಕಾರ್ಟ್ ಆ್ಯಪ್ 5 ಕೋಟಿ ಡೌನ್'ಲೋಡ್ ಆಗಿತ್ತು. ಒಂದೂವರೆ ವರ್ಷದ ಅವಧಿಯಲ್ಲಿ ಇನ್ನೂ 5 ಕೋಟಿ ಡೌನ್'ಲೋಡ್ ಆಗಿರುವುದು ವಿಶೇಷ. ಆ್ಯಪ್'ನಲ್ಲಿ ಆದ ಒಂದಷ್ಟು ಬದಲಾವಣೆ, ಕಡಿಮೆ ಬ್ಯಾಂಡ್'ವಿಡ್ತ್, ಕಡಿಮೆ ಡೇಟಾ ಬಳಕೆ, ಪರಿಣಾಮಕಾರಿ ಸರ್ಚ್ ಎಂಜಿನ್ ಇತ್ಯಾದಿ ಫೀಚರ್'ಗಳಿವೆ. ಡೆಸ್ಕ್'ಟಾಪ್'ನಲ್ಲಿ ಫ್ಲಿಪ್'ಕಾರ್ಟ್ ಹೊಂದಿರುವ ಬಹುತೇಕ ಫೀಚರ್'ಗಳು ಆ್ಯಪ್'ನಲ್ಲೂ ಲಭ್ಯವಿವೆ. ಅಷ್ಟೇ ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಿದೆ. ಇವು ಫ್ಲಿಪ್'ಕಾರ್ಟ್'ನ ಜನಪ್ರಿಯತೆ ಹೆಚ್ಚಲು ಕಾರಣವಾಗಿರಬಹುದೆಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

loader