ವಾಹನಗಳಿಗೆ ನೂತನ ವಿಮೆ ನೀತಿ ಜಾರಿಗೆ ಬಂದಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಕಾರುಗಳಿಗೆ 3 ವರ್ಷ ಹಾಗೂ ಬೈಕ್,ಸ್ಕೂಟರ್‌ಗಳಿಗೆ 5 ವರ್ಷದ ನೂತನ ಇನ್ಶುರೆನ್ಸ್ ನಿಯಮ ಜಾರಿಗೆ ಬಂದಿದೆ.  ಹೀಗಾಗಿ ಬಜಾಜ್ ಮೋಟಾರ್ ತನ್ನ ಬೈಕ್ ಹಾಗೂ ಸ್ಕೂಟರ್‌ಗಳ ಬೆಲೆ ಪರಿಷ್ಕರಿಸಿದೆ. ಇಲ್ಲಿದೆ ಬಜಾಜ್ ಸಂಸ್ಥೆಯ ನೂತನ ಬೆಲೆ

ಬೆಂಗಳೂರು(ಸೆ.13): ಭಾರತದಲ್ಲಿ ನೂತನ ವಿಮೆ ನೀತಿ ಜಾರಿಗೊಳಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕಾರು ಸೇರಿದಂತೆ ನಾಲ್ಕು ಚಕ್ರದ ವಾಹನಗಳಿಗೆ 3 ವರ್ಷ ಹಾಗೂ ಬೈಕ್ , ಸ್ಕೂಟರ್‌ಗಳಿಗೆ 5 ವರ್ಷದ ವಿಮೆ ನೀತಿ ಜಾರಿಗೊಳಿಸಲಾಗಿದೆ. ಕೋರ್ಟ್ ಆದೇಶದ ಪ್ರಕಾರ ಎಲ್ಲಾ ಮೋಟಾರು ಕಂಪೆನಿಗಳು ತಮ್ಮ ವಾಹನಗಳ ದರವನ್ನ ಪರಿಷ್ಕರಿಸಿದೆ.

ನೂತನ ನಿಯಮದ ಪ್ರಕಾರ ಬಜಾಜ್ ಮೋಟಾರು ಕಂಪೆನಿ ಇದೀಗ ಬೈಕ್ ಹಾಗೂ ಸ್ಕೂಟರ್ ಬೆಲೆ ಪರಿಷ್ಕರಿಸಿದೆ. ನೂತನ ವಿಮೆ ನೀತಿಯಿಂದ ಎಲ್ಲಾ ವಾಹನಗಳ ಬೆಲೆ ಏರಿಕೆಯಾಗಿದೆ. ಇದೀಗ ಬಜಾಜ್ ಡೊಮಿನಾರ್ 400 ಎಬಿಎಸ್ ಬೈಕ್ ಬೆಲೆ 2 ಲಕ್ಷ ರೂಪಾಯಿ ದಾಟಿದೆ.

ಬಜಾಜ್ ಮೋಟಾರು ಕಂಪೆನಿ 4,000 ದಿಂದ 8000 ರೂಪಾಯಿ ವರೆಗೆ ವಿಮೆ ದರ ಪರಿಷ್ಕರಿಸಿದೆ. ಬಜಾಜ್ ನೂತನ ವಿಮೆ ನೀತಿ ಪ್ರಕಾರ ಒಂದು ವರ್ಷ ಸಮಗ್ರ ವಿಮೆ ಹಾಗೂ 4 ವರ್ಷಗಳ ಥರ್ಡ್ ಪಾರ್ಟಿ ವಿಮೆ ಅನ್ವಯವಾಗಲಿದೆ.

ಬಜಾಜ್ ಬೈಕ್-ಸ್ಕೂಟರ್ ನೂತನ ಬೆಲೆ:

ಮಾಡೆಲ್ಆನ್‌ರೋಡ್(ಹಳೆ ಬೆಲೆ)ಹೊಸ ಬೆಲೆ
ಸಿಟಿ10045900-5330046587-54378
ಪ್ಲಾಟಿನಂ6030062320
ಡಿಸ್ಕವರ್1106250067148
ಡಿಸ್ಕವರ್12564100-6670071664-74291
ವಿ158100082493
ಪಲ್ಸಾರ್ 15080600-9310085106-95985
ಪಲ್ಸಾರ್180987001.05 ಲಕ್ಷ
ಪಲ್ಸಾರ್220ಎಫ್1.11 ಲಕ್ಷ1.18 ಲಕ್ಷ
ಪಲ್ಸಾರ್NS160970001.04 ಲಕ್ಷ
ಪಲ್ಸಾರ್NS2001.17-1.26ಲಕ್ಷ1.23-1.36ಲಕ್ಷ
ಅವೆಂಜರ್1801 ಲಕ್ಷ1.07 ಲಕ್ಷ
ಅವೆಂಜರ್2201.10 ಲಕ್ಷ1.18 ಲಕ್ಷ
ಪಲ್ಸಾರ್ RS2001.45-1.59ಲಕ್ಷ1.52-1.66ಲಕ್ಷ
ಡೊಮಿನಾರ್4001.89 ಲಕ್ಷ2.05 ಲಕ್ಷ