ಶೀಘ್ರದಲ್ಲೇ ಟ್ರೈನ್ 18ಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ!

ಚಾಲಕ ರಹಿತ ಟ್ರೈನ್ 18ಗೆ ಶೀಘ್ರದಲ್ಲೇ ಮೋದಿಯಿಂದ ಚಾಲನೆ| ಅತ್ಯಾಧುನಿಕ ಸೌಲಭ್ಯವುಳ್ಳ ಸ್ವಯಂ ಚಾಲಿತ ಟ್ರೈನ್ 18 ರೈಲು| ಯಶಸ್ವಿಯಾಗಿ ಪೂರ್ಣಗೊಂಡ ಪರೀಕ್ಷಾರ್ಥ ಚಾಲನೆ| 180 ಕಿ.ಮೀ.ಗಿಂತಲೂ ಹೆಚ್ಚಿನ ವೇಗದಲ್ಲಿ ಓಡುವ ರೈಲು| ಮೇಕ್ ಇನ್‌ ಇಂಡಿಯಾ ಅಭಿಯಾನದಲ್ಲಿ ತಯಾರಿಸಲಾದ ಬೋಗಿಗಳು

First Engine less Train18 To Be Flagged Of By PM Modi

ನವದೆಹಲಿ(ಡಿ.20): ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಚಾಲಕ ರಹಿತ ಸ್ವಯಂ ಚಾಲಿತ 'ಟ್ರೈನ್-18'ಗೆ ಪ್ರಧಾನಿ ನರೇಂದ್ರ ಮೋದಿ ಇದೇ ಡಿಸೆಂಬರ್ 29ರಂದು ಹಸಿರು ನಿಶಾನೆ ತೋರಲಿದ್ದಾರೆ.

ಟ್ರೈನ್ 18 ಈಗಾಗಲೇ ವೇಗದ ಪರೀಕ್ಷಾರ್ಥ ಚಾಲನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪರೀಕ್ಷಾರ್ಥ ಚಾಲನೆ ವೇಳೆ ಈ ರೈಲು ಪ್ರತಿಗಂಟೆಗೆ 180 ಕಿ.ಮೀ.ಗಿಂತಲೂ ಹೆಚ್ಚಿನ ವೇಗದಲ್ಲಿ ಓಡಿದೆ. ಇದರ ಯಶಸ್ಸಿನ ಬೆನ್ನಲ್ಲೇ ದೇಶದ ವೇಗಧೂತ ರೈಲು ಸಂಚಾರಕ್ಕೆ ಚಾಲನೆ ನೀಡಲು ರೈಲ್ವೆ ಇಲಾಖೆ ಸನ್ನದ್ಧವಾಗಿದೆ.

ಶತಾಬ್ಧಿ ರೈಲಿಗೆ ಟ್ರೈನ್ 18 ಎಂಜಿನ್ ಅಳವಡಿಸಲಾಗಿದ್ದು, ಮೊದಲ ಸಂಚಾರ ದೆಹಲಿ- ವಾರಣಾಸಿ ನಡುವೆ ನಡೆಯಲಿದೆ. ಶೇ 100ರಷ್ಟು ಮೇಕ್ ಇನ್‌ ಇಂಡಿಯಾ ಅಭಿಯಾನದಲ್ಲಿ ತಯಾರಿಸಲಾದ ಈ ಬೋಗಿಗಳನ್ನು, ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ತುಕ್ಕುರಹಿತ ಉಕ್ಕನ್ನು ಬಳಸಿ ಈ ರೈಲು ನಿರ್ಮಾಣ ಮಾಡಲಾಗಿದೆ.

ಸಂಪೂರ್ಣ ಹವಾ  ನಿಯಂತ್ರಿತ ಈ ರೈಲಿನಲ್ಲಿ 16 ಬೋಗಿಗಳಿದ್ದು ಚೇರ್ ಕಾರ್‌ ಶೈಲಿಯಲ್ಲಿವೆ. ಪ್ರತಿ ಬೋಗಿಯಲ್ಲೂ 56-78 ಪ್ರಯಾಣಿಕರು ಸಂಚರಿಸಬಹುದು ಎಂದು ಇಲಾಖೆ ಮಾಹಿತಿ ನೀಡಿದೆ.

ಅಲ್ಲದೇ ವೈಫೈ, ಜಿಪಿಎಸ್ ಆಧರಿತ ಪ್ರಯಾಣಿಕ ಮಾಹಿತಿ ಸೌಲಭ್ಯ, ಮಾದರಿ ಶೌಚಾಲಯ, ಬಯೋ ವ್ಯಾಕ್ಯೂಮ್ ಸೌಲಭ್ಯ, ಎಲ್‌ಇಡಿ ಬಲ್ಬ್‌ ಸೇರಿದಂತೆ ಅನೇಕ ಸೌಲಭ್ಯಗಳನ್ನು ಈ ರೈಲು ಒಳಗೊಂಡಿದೆ.

Latest Videos
Follow Us:
Download App:
  • android
  • ios