ಹೊಸ ಕಾರು ಖರೀದಿಸಿದ ಮೇಲೆ ಪ್ರಯಾಣ ಮಾಡೋ ಮುನ್ನ ಕೆಲ ಅಂಶಗಳನ್ನ ಗಮನದಲ್ಲಿಡಬೇಕು. ಕಾರು ಖರೀದಿಸುವ ಮಾಲೀಕರು ಗಮನಿಸಲೇಬೇಕಾದ 5 ಅಂಶಗಳು ಇಲ್ಲಿದೆ.

ಬೆಂಗಳೂರು(ಸೆ.14): ಹೊಸ ಕಾರು ಖರೀದಿಸಬೇಕು ಅನ್ನೋದು ಎಲ್ಲರ ಆಸೆ. ಕಷ್ಟಪಟ್ಟು ಕಾರು ಖರೀದಿಸಿ ಸರಿಯಾಗಿ ಉಪಯೋಗಿಸದಿದ್ದರೆ ದಂಡ ತೆರಬೇಕಾಗುತ್ತೆ. ಹೊಸ ಕಾರು ಖರೀದಿಸುವ ಮಾಲೀಕರು ಕೆಲ ಅಂಶಗಳನ್ನ ಗಮನದಲ್ಲಿಟ್ಟುಕೊಳ್ಳಬೇಕು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೊಸ ಕಾರು ಖರೀದಿಸಿದ ಮೇಲೆ ಮಾಲೀಕರು ಅಥವಾ ಬಳಕೆದಾರರು ಕೆಲ ಅಂಶಗಳನ್ನ ಗಮನಿಸಲೇಬೇಕು. ಈ ಮೂಲಕ ನಿಮ್ಮ ಕಾರು ಯಾವುದೇ ಸಮಸ್ಯೆ ಇಲ್ಲದೆ ಹೆಚ್ಚು ಕಾಲ ಉಪಯೋಗಿಸಲು ಇಲ್ಲಿದೆ 5 ಸೂತ್ರಗಳು.

1 ಕಾರಿನ ಮ್ಯಾನ್ಯುಯೆಲ್ ಓದಿ:
ಹೊಸ ಕಾರು ಖರೀದಿಸುವಾಗ ಕಾರಿನ ಕುರಿತ ಸಂಪೂರ್ಣ ವಿವರಗಳ ಬುಕ್ ನೀಡಲಾಗುತ್ತೆ. ಇದನ್ನ ಸಂಪೂರ್ಣವಾಗಿ ಓದಿ. ನಿಮ್ಮ ಕಾರಿನ ಸ್ಪೀಡ್ ಗೇರ್ ಶಿಫ್ಟ್, ಸರ್ವೀಸ್ ಸಮಯ, ಎಚ್ಚರಿಕೆ ಸಿಂಬಲ್‌ಗಳು, ಟರ್ಬೋ ಚಾರ್ಜರ್, ಕಾರು ಇಂಜಿನ್ ಸೇರಿದಂತೆ ಎಲ್ಲಾ ವಿಚಾರಗಳನ್ನ ಓದಿ ತಿಳಿದುಕೊಳ್ಳಿ.

2 ಇಂಧನ ಭರ್ತಿ ಮಾಡಿ-ಚಕ್ರದ ಗಾಳಿ ಪರಿಶೀಲಿಸಿ:
ಹೊಸ ಕಾರು ಖರೀದಿಸುವ ವೇಳೆ ಕಂಪೆನಿ ಕನಿಷ್ಠ 5 ಲೀಟರ್ ಇಂಧನ ನೀಡುತ್ತೆ. ಹೊಸ ಕಾರಿನ ಜೊತೆ ನೀವು ಪ್ರಯಾಣ ಮಾಡೋ ಮುನ್ನ ಕಾರಿನ ಇಂಧನ ಹಾಗೂ ಚಕ್ರದ ಗಾಳಿ ಪರಿಶೀಲಿಸಿ. 

3 ಗರಿಷ್ಠ ಆರ್‌ಪಿಎಂ ಬಳಕೆ ನಿಲ್ಲಿಸಿ:
ಹೊಸ ಕಾರಿನ ಪ್ರಯಾಣದ ವೇಳೆ ಗರಿಷ್ಠ ಆಕ್ಸಿಲರೇಟರ್ (ಹೈ ಆರ್‌ಪಿಎಂ) ಬಳಕೆ ಮಾಡಬೇಡಿ. ಇಷ್ಟೇ ಅಲ್ಲ ಆರಂಭಿಕ 1000-1500 ಕೀಮಿ ಪ್ರಯಾಣದವರೆಗೆ 80 ಕೀಮಿ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಪ್ರಯಾಣ ಮಾಡಬೇಡಿ.

4 ಶಾರ್ಟ್ ಟ್ರಿಪ್‌ ಮಾಡಬೇಡಿ:
ಹೊಸ ಕಾರಿನ ಪ್ರಯಾಣದ ವೇಳೆ ಶಾರ್ಟ್ ಟ್ರಿಪ್ ಮಾಡಬೇಡಿ. ಉದಾಹರಣೆಗೆ ಪ್ರತಿ 5 ರಿಂದ 10 ಕೀಮಿ ಪ್ರಯಾಣ ಮಾಡಿ ಕಾರು ನಿಲ್ಲಿಸಬೇಡಿ. ಕಾರಣ ಹೊಸ ಕಾರಿನಲ್ಲಿ ಇಂಜಿನ್ ಲ್ಯೂಬ್ರಿಕೆಂಟ್ಸ್ ಸಮಸ್ಯೆ ಎದುರಾಗಬಹುದು.

5 ಇನ್ಶುರೆನ್ಸ್ ಗಮನದಲ್ಲಿರಲಿ:
ಹೊಸ ಕಾರು ಖರೀದಿಸಿದ ಮೇಲೆ ನಿಮ್ಮ ಕಾರಿನ ವಿಮೆ ಪಾಲಿಸಿ ಸಂಪೂರ್ಣವಾಗಿ ಓದಿ. ನಿಮ್ಮ ಪಾಲಿಸಿ ಕವರೇಜ್, ಷರತ್ತು ಹಾಗೂ ನಿಯಮ ಹಾಗೂ ವಿಮೆಯಲ್ಲಿ ನಮೂದಿಸಿರುವ ನಿಮ್ಮ ಕಾರಿನ ಇಂಜಿನ್ ಚಾಸಿ ನಂಬರ್ ಎಲ್ಲವನ್ನೂ ಪರಿಶೀಲಿಸಿಕೊಳ್ಳಿ.