ಬೆಂಗಳೂರು(ಅ.09): ಫ್ಲಿಪ್‌ಕಾರ್ಟ್, ಅಮೇಜಾನ್ ಬಿಗ್ ಬಿಲಿಯನ್ ಡೇಸ್ ಸೇಲ್ ಆಫರ್ ನೀಡಿದ್ದರೆ, ಇದೀಗ ಪೇಟಿಎಂ ಮಹಾ ಕ್ಯಾಶ್‌ಬ್ಯಾಕ್ ಆಫರ್ ನೀಡಿದೆ. ಈ ಮೂಲಕ ಲ್ಯಾಪ್‌ಟಾಪ್‌ ಮೇಲೆ ಭರ್ಜರಿ ಆಫರ್ ನೀಡಿದೆ. 

ಪೇಟಿಎಂ ಮಹಾ ಕ್ಯಾಶ್‌ಬ್ಯಾಕ್ ಆಫರ್ ಮೂಲಕ ಹೆಚ್‌ಪಿ, ಲೆನೊವೋ, ಆಸುಸ್ ಸೇರಿದಂತೆ ಪ್ರಮುಖ 5 ಬ್ರ್ಯಾಂಡ್‌ಗಳ ಲ್ಯಾಪ್‌ಟಾಪ್‌ಗಳು 20 ಸಾವಿರಕ್ಕಿಂತಲೂ ಕಡಿಮೆಬೆಲೆಯಲ್ಲಿ ದೊರೆಯಲಿದೆ.  ಅಕ್ಟೋಬರ್ 9 ರಿಂದ 15 ವರೆಗೆ ಪೇಟಿಎಂ ಕ್ಯಾಶ್‍‌ಬ್ಯಾಕ್ ಆಫರ್ ನೀಡಿದೆ.

ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಇತರ ವಸ್ತುಗಳ ಮೇಲೆ ಪೇಟಿಎಂ ಕ್ಯಾಶ್‌ಬ್ಯಾಕ್ ಆಫರ್ ಘೋಷಿಸಿದೆ. ಪೇಟಿಎಂ ಮೂಲಕ ಖರೀದಿಸೋ ಗ್ರಾಹಕರಿಗೆ ಗರಿಷ್ಠ 3500 ರೂಪಾಯಿ ಕ್ಯಾಶ್‌ಬ್ಯಾಕ್ ಸಿಗಲಿದೆ.

ಲೆನೊವೋ ಐಪಾಡ್ 330ಗೆ ಶೇಕಡಾ 32 ರಷ್ಟು ಡಿಸ್ಕೌಂಟ್ ಹಾಗೂ 2500  ಕ್ಯಾಶ್‌ಬ್ಯಾಕ್ ಆಫರ್ ನೀಡಲಾಗಿದೆ. ಹೀಗಾಗಿ 29,990 ರೂಪಾಯಿ  ಲೆನೊವೋ ಐಪಾಡ್ 330 ಇದೀಗ 17490 ರೂಪಾಯಿಗೆ ಸಿಗಲಿದೆ.

ಎಸರ್ ಆಸ್ಪೈರ್ ಲ್ಯಾಪ್‌ಟಾಪ್‌ಗಳಿಗೆ 32% ಡಿಸ್ಕೌಂಟ್ ಹಾಗೂ 2500 ಪೇಟಿಎಂ ಕ್ಯಾಶ್‌ಬ್ಯಾಕ್ ನೀಡಲಾಗಿದೆ. ಹೀಗಾಗಿ ಎಸರ್ ಆಸ್ಪೈರ್ ಲ್ಯಾಪ್‌ಟಾಪ್‌ ಕೇವಲ 16,190 ರೂಪಾಯಿಗೆ ಸಿಗಲಿದೆ.

ಆಸುಸ್ ವಿವೋಬಾಕ್ಸ್ X507 ಲ್ಯಾಪ್‌ಟಾಪ್‌ಗೆ 21% ಡಿಸ್ಕೌಂಟ್ ಹಾಗೂ 3500 ರೂಪಾಯಿ ಪೇಟಿಎಂ ಕ್ಯಾಶ್‌ಬ್ಯಾಕ್ ನೀಡಿದೆ. ಈ ಮೂಲಕ ಆಸುಸ್ ವಿವೋಬಾಕ್ಸ್ X507 ಲ್ಯಾಪ್‌ಟಾಪ್‌ 19,490  ರೂಪಾಯಿಗೆ ಲಭ್ಯವಿದೆ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಲ್ಯಾಪ್‌ಬುಕ್ L1161ಗೆ 17%  ಡಿಸ್ಕೌಂಟ್ ಹಾಗೂ 999 ರೂಪಾಯಿ ಕ್ಯಾಶ್‌ಬ್ಯಾಕ್ ನೀಡಲಾಗಿದೆ. ಈ ಮೂಲಕ ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಲ್ಯಾಪ್‌ಬುಕ್ 8,991 ರೂಪಾಯಿಗೆ ಸಿಗಲಿದೆ.

ಇಷ್ಟೇ ಅಲ್ಲ ಹೆಚ್‌ಪಿ 15 BW096AU ಲ್ಯಾಪ್‌ಟಾಪ್ 10% ಡಿಸ್ಕೌಂಟ್ ಹಾಗೂ 2500 ರೂಪಾಯಿ ಕ್ಯಾಶ್‌ಬ್ಯಾಕ್ ನೀಡಲಾಗಿದೆ. ಇದರೊಂದಿಗೆ ಮೊಬೈಲ್ ಹಾಗೂ ಇತರ ಎಲೆಕ್ಟ್ರಾನಿಕ್ ವಸ್ತುಗಳ ಮೇಲೂ ಪೇಟಿಎಂ ಕ್ಯಾಶ್‌ಬ್ಯಾಕ್ ಆಫರ್ ನೀಡಲಾಗಿದೆ.