ನವದೆಹಲಿ[ಸೆ.30]: ಆರ್ಥಿಕ ಹಿಂಜರಿತದಿಂದಾಗಿ ಕಳೆದ ನಾಲ್ಕೈದು ತಿಂಗಳಿನಲ್ಲಿ ವಹಿವಾಟು ಕುಸಿತಗೊಂಡಿದ್ದ ಅಮೇಜಾನ್‌ಗೆ ‘ಗ್ರೇಟ್‌ ಇಂಡಿಯನ್‌ ಸೇಲ್‌’ ಹಬ್ಬದ ವ್ಯಾಪಾರ ಭರ್ಜರಿ ಚೇತರಿಕೆ ನೀಡಿದೆ.

ಕೇವಲ 36 ಗಂಟೆಯಲ್ಲಿ 750 ಕೋಟಿ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ಕಂತುಗಳಲ್ಲಿ ಮಾರಾಟ ಮಾಡುವ ಮೂಲಕ ಅಮೇಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ದಾಖಲೆಯ ಆರಂಭ ಪಡೆದಿದೆ.

Amazonನ ಒಂದು ತಪ್ಪು: 9 ಲಕ್ಷದ ಕ್ಯಾಮೆರಾ ಗೇರ್ ಕೇವಲ 6500 ರೂ. ಸೇಲ್!

ಇದೇ ವೇಳೆ ಟಿವಿ ಮಾರಾಟದಲ್ಲಿ 10 ಪಟ್ಟು, ಫ್ಯಾಶನ್‌ ವಸ್ತುಗಳಲ್ಲಿ 5 ಪಟ್ಟು, ಸೌಂದರ್ಯ ವರ್ಧಕಗಳಲ್ಲಿ 7 ಪಟ್ಟು, ದಿನಸಿ ಉತ್ಪನ್ನಗಳ ಮಾರಾಟದಲ್ಲಿ ಮೂರುವರೆ ಪಟ್ಟು ಹೆಚ್ಚಳವಾಗಿದೆ. 25 ಸಾವಿರಕ್ಕೂ ಅಧಿಕ ಮಾರಾಟಗಾರರು ಒಂದೇ ದಿನದಲ್ಲಿ ದಾಖಲೆಯ ವ್ಯಾಪಾರ ಕಂಡಿದ್ದಾರೆ ಎಂದು ಅಮೇಜಾನ್‌ ತಿಳಿಸಿದೆ.

ಅಮೇಜಾನ್‌ನಲ್ಲಿ ಬುಕ್ ಮಾಡಿ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್!