Asianet Suvarna News Asianet Suvarna News

ಗಣೇಶ ಹಬ್ಬಕ್ಕೆ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಟಾಟಾ ಮೋಟಾರ್ಸ್!

ಟಾಟಾ ಕಾರುಗಳ ಮಾರಾಟದಲ್ಲಿ ಗಣನೀಯ ಏರಿಕೆಯಾಗಿದೆ. ಇದೀಗ ಭಾರತದಲ್ಲಿ ಕಾರು ಪ್ರೀಯರು ಟಾಟಾ ಕಾರುಗಳತ್ತ ಚಿತ್ತ ಹರಿಸಿದ್ದಾರೆ. ಗಣೇಶ ಹಬ್ಬ ಸೇರಿದಂತೆ ಸೆಪ್ಟೆಂಬರ್ ತಿಂಗಳಲ್ಲಿ ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ.

Festival season Tata motors started offering special benefits
Author
Bengaluru, First Published Sep 13, 2018, 5:16 PM IST
  • Facebook
  • Twitter
  • Whatsapp

ನವದೆಹಲಿ(ಸೆ.13): ಭಾರತದ ಕಾರು ಮಾರುಕಟ್ಟೆಯನ್ನ ಆಕ್ರಮಿಸಿಕೊಳ್ಳುತ್ತಿರಪುವ ಟಾಟಾ ಮೋಟಾರ್ಸ್ ಕಳೆದ ಆಗಸ್ಟ್‌ ಮಾರಾಟದಲ್ಲಿ ಶೇಕಡಾ 14 ರಷ್ಟು ಏರಿಕೆ ಕಂಡಿದೆ. ಇದೀಗ ಗಣೇಶ ಹಬ್ಬ ಸೇರಿದಂತೆ ಸೆಪ್ಟೆಂಬರ್ ತಿಂಗಳಿನಲ್ಲಿ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದೆ.

Festival season Tata motors started offering special benefits

ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಕ್ಯಾಶ್ ಡಿಸ್ಕಂಟ್ ಜೊತೆಗೆ ಕಾರು ವಿಮೆಯಲ್ಲೂ ಭರ್ಜರಿ ರಿಯಾಯಿತಿ ನೀಡಿದೆ. ಈ ಮೂಲಕ ಸೆಪ್ಟೆಂಬರ್‌ನಲ್ಲಿ ಗರಿಷ್ಠ ಮಾರಾಟದ ನಿರೀಕ್ಷೆಯಲ್ಲಿದೆ.

Festival season Tata motors started offering special benefits

ಟಾಟಾ ಬೋಲ್ಟ್ ಕಾರಿಗೆ ಕ್ಯಾಶ್ ಡಿಸ್ಕಂಟ್ ಗರಿಷ್ಠ 50,000 ರೂಪಾಯಿ ಹಾಗೂ ಎಕ್ಸ್‌ಚೇಂಜ್ ಬೋನಸ್ ಗರಿಷ್ಠ 15,000 ರೂಪಾಯಿ ನೀಡಿದೆ. ಇನ್ನು ಟಾಟಾ ಜೆಸ್ಟ್ ಕಾರಿಗೆ ಗರಿಷ್ಠ 45,000 ರೂಪಾಯಿ ಕ್ಯಾಶ್ ಡಿಸ್ಕಂಟ್ ಹಾಗೂ ಗರಿಷ್ಠ 20,000 ರೂಪಾಯಿ  ಎಕ್ಸ್‌ಚೇಂಜ್ ಬೋನಸ್ ನೀಡಿದೆ.

Festival season Tata motors started offering special benefits

ಟಾಟಾ ಸುಮೋ ಕಾರಿಗೆ ಗರಿಷ್ಠ 25,000 ರೂಪಾಯಿ ಕ್ಯಾಶ್ ಡಿಸ್ಕಂಟ್ ಹಾಗೂ ಗರಿಷ್ಠ 10,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ನೀಡಿದೆ. ಟಾಟಾ ನೆಕ್ಸಾನ್ ಕಾರಿಗೆ ಗರಿಷ್ಠ 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಆಫರ್ ನೀಡಿದೆ.

Festival season Tata motors started offering special benefits

ಟಾಟಾ ಹೆಕ್ಸಾ ಕಾರಿಗೆ ಗರಿಷ್ಠ 25,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್, ಟಾಟಾ ಟಿಗೋರ್‌ಗೆ ಗರಿಷ್ಠ 20,000 ರೂಪಾಯಿ  ಹಾಗೂ ಟಿಯಾಗೋ ಕಾರಿಗೆ ಗರಿಷ್ಠ 10,000 ರೂಪಾಯಿ ಎಕ್ಸ್‌ಜೇಂಜ್ ಬೋನಸ್ ನೀಡಿದೆ. ನೆಕ್ಸಾನ್, ಹೆಕ್ಸಾನ್, ಟಿಗೋರ್, ಸಫಾರಿ, ಟಿಗೋರ್, ಟಿಯಾಗೋ ಕಾರು ಖರಿದಿಸುವ ಗ್ರಾಹಕರಿಗೆ ಎಕ್ಸ್‌ಚೇಂಜ್ ಬೋನಸ್ ಜೊತೆಗೆ ವಿಮೆಯಲ್ಲೂ ರಿಯಾಯಿ ನೀಡಿದೆ.

Festival season Tata motors started offering special benefits

ವಿಶೇಷ ಸೂಚನೆ: ಟಾಟಾ ಕಾರುಗಳ ರಿಯಾಯಿತಿಗಳು(ಆಫರ್) ಶೋ ರೂಂ, ನಗರ ಹಾಗೂ ರಾಜ್ಯಕ್ಕೆ ಅನುಸಾರವಾಗಿ ಬದಲಾಗಲಿದೆ.

Follow Us:
Download App:
  • android
  • ios