ಫೆರಾರಿ ಪೋರ್ಟೋಫಿನೋ ಕಾರು ಬಿಡುಗಡೆಗೆ ಕೌಂಟ್‌ಡೌನ್-ಬೆಲೆ ಹೆಚ್ಚಿಲ್ಲ!

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 18, Jul 2018, 5:54 PM IST
Ferrari Portofino 2018 on Indian roads soon
Highlights

ಭಾರತದ ಜನಪ್ರೀಯ ಲಕ್ಸುರಿ ಕಾರು ಫೆರಾರಿ ಮತ್ತೆ ಹೊಚ್ಚ ಹೊಸ ಕಾರನ್ನ ಬಿಡುಗಡೆ ಮಾಡಲು ರೆಡಿಯಾಗಿದೆ. ನೂತನ ಫೆರಾರಿ ಪೋರ್ಟೋಫಿನೋ ಕಾರಿನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ವಿವರ.

ಬೆಂಗಳೂರು(ಜು.18): ಫೆರಾರಿ ಕಾರಿಗೂ ಭಾರತಕ್ಕೂ ಅವಿಭಾವ ಸಂಬಂಧವಿದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್‌ಗೆ, ರೇಸ್ ದಿಗ್ಗಜ ಮೈಕಲ್ ಶುಮಾಕರ್ ಫೆರಾರಿ ಕಾರನ್ನ ಉಡುಗೊರೆಯಾಗಿ ಫೆರಾರಿ ಕಾರು ನೀಡಿದ್ದರು. ಇದೀಗ ಫೆರಾರಿ ಸಂಸ್ಥೆ ಭಾರತದಲ್ಲಿ ನೂತನ ಫೆರಾರಿ ಪೋರ್ಟೋಫಿನೋ ಬಿಡುಗಡೆಗೆ ಸಜ್ಜಾಗಿದೆ.

ಇಟಲಿ ಮೂಲದ ಫೆರಾರಿ ಕಾರು ಸಂಸ್ಥೆಯ ಈ ನೂತನ ಫೆರಾರಿ ಪೋರ್ಟೋಫಿನೋ ಕಾರಿನ ಬೆಲೆ 3.50 ಕೋಟಿ ರೂಪಾಯಿ(ಎಕ್ಸ್ ಶೋರೂಂ). ಇತರ ಲಕ್ಸುರಿ ಕಾರುಗಳಿಗೆ ಸ್ಪರ್ಧಾತ್ಮಕವಾಗಿ ಬೆಲೆ ನಿಗಧಿಪಡಿಸಲಾಗಿದೆ. ಲಕ್ಸುರಿ ಕಾರು ಕೊಳ್ಳುವವರಿಗೆ ಇದು ಸೂಕ್ತ ಕಾರು. ಈ ಕಾರು  8 ಸಿಲಿಂಡರ್, ಡ್ಯುಯೆಲ್ ಕ್ಲಚ್, 7500 ಆರ್‌ಪಿಎಮ್ ಪವರ್ ಹೊಂದಿದೆ.

ಫೆರಾರಿ ಪೋರ್ಟೋಫಿನೋ ಪೆಟ್ರೋಲ್ ಇಂಜಿನ್‌ನಲ್ಲಿ ಮಾತ  ಲಭ್ಯವಿದೆ. 3855ಸಿಸಿ ಇಂಜಿನ್ ಹೊಂದಿರುವ ಪೋರ್ಟೋಫಿನೋ ಅಟೋಮ್ಯಾಟಿಕ್ ಟ್ರಾನ್ಸ್‌ಮಿಶನ್(ಎಎಂಟಿ) ಹೊಂದಿದೆ. 591 ಬಿಹೆಚ್‌ಪಿ ಪವರ್ ಹೊಂದಿರೋ ಈ ನೂತನ ಕಾರು ಇತರ ಲಕ್ಸುರಿ ಕಾರುಗಳಿಗಿಂತ ಬಲಿಷ್ಠವಾಗಿದೆ.

10.2 ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ ಹಾಗೂ ಆಕರ್ಷಕ ಒಳ ಹಾಗೂ ಹೊರ ವಿನ್ಯಾಸ ಹೊಂದಿದೆ. ಹೀಗಾಗಿ ಭಾರತದ ಕಾರು ಪ್ರೀಯರನ್ನ ಫೆರಾರಿ ಪೋರ್ಟೋಫಿನೋ ಮೋಡಿ ಮಾಡಲಿದೆ ಅನ್ನೋದು ಫೆರಾರಿ ಸಂಸ್ಥೆಯ ವಿಶ್ವಾಸ.


 

loader