ಖಾಸಗಿ ಮಾಹಿತಿ ಚೌರ್ಯ: ತನ್ನ ಫೇಸ್'ಬುಕ್ ಪೇಜ್ ಡಿಲೀಟ್ ಮಾಡಿದ ಬಾಲಿವುಡ್ ನಟ

Farhan Akhtar deletes personal Facebook account his official page still active
Highlights

ತಾವು ಶಾಶ್ವತವಾಗಿ ತಮ್ಮ ವೈಯುಕ್ತಿಕ ಫೇಸ್'ಬುಕ್ ಖಾತೆಯನ್ನು ಡೆಲೀಟ್ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಪರಿಶೀಲನೆಯಾದ ತಮ್ಮ 'FarhanAkhtarLive page' ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಇಂಗ್ಲೆಂಡಿನ ಡಾಟಾ ವಿಶ್ಲೇಷಣೆ ಸಂಸ್ಥೆ ಕೇಬ್ರಿಡ್ಜ್ ಅನಾಲಿಟಿಕಾ ಫೇಸ್'ಬುಕ್ ಖಾತೆದಾರರ ಖಾಸಗಿ ಮಾಹಿತಿಗಳನ್ನು ಚೌರ್ಯ ಮಾಡಿದ ನಂತರ ವಿಶ್ವದ ಹಲವಾರು ಪ್ರಮುಖ ಸಂಸ್ಥೆಗಳು, ವ್ಯಕ್ತಿಗಳು ತಮ್ಮ ಫೇಸ್'ಬುಕ್ ಪೇಜ್'ಅನ್ನು ಡಿಲೀಟ್ ಮಾಡಿವೆ.

ಭಾರತೀಯ ಸಂಸ್ಥೆಗಳು, ಪ್ರಮುಖರು ಕೂಡ ತಮ್ಮ ಫೇಸ್'ಬುಕ್ ಪೇಜ್'ಅನ್ನು ಡಿಲೀಟ್ ಮಾಡಿದ್ದಾರೆ. ಈಗ ಅವರ ಸಾಲಿಗೆ ಬಾಲಿವುಡ್ ನಟ, ನಿರ್ದೇಶಕ ಫರಾನ್ ಅಖ್ತರ್ ಕೂಡ ಸೇರಿದ್ದಾರೆ. ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಅವರು ತಾವು ಶಾಶ್ವತವಾಗಿ ತಮ್ಮ ವೈಯುಕ್ತಿಕ ಫೇಸ್'ಬುಕ್ ಖಾತೆಯನ್ನು ಡೆಲೀಟ್ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಪರಿಶೀಲನೆಯಾದ ತಮ್ಮ 'FarhanAkhtarLive page' ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಕೇಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಡೊನಾಲ್ಡ್ ಟ್ರಂಪ್ ಅವರ 2016ರ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ 5 ಕೋಟಿ ಸದಸ್ಯರ ಖಾಸಗಿ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡಿತ್ತು. ಬಾಲಿವುಡ್ ನಟ ಈ ವಿಚಾರದ ಬಗ್ಗೆ ಪ್ರಸ್ತಾಪಿಸಿಲ್ಲ.

 

 

loader