1 ಕೋಟಿಗೂ ಅಧಿಕ ಫೋನ್‌ಗಳಲ್ಲಿದೆ ಈ ಫೇಕ್ ಆ್ಯಪ್: ಕೂಡಲೇ ಡಿಲೀಟ್ ಮಾಡಿ!
ಸ್ಮಾರ್ಟ್‌ಫೋನ್ ಬಳಕೆದಾರರೇ ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ ಎಷ್ಟು ಸೇಫ್ ಎಂದು ತಿಳಿದುಕೊಂಡಿದ್ದೀರಾ?| ಫೋನ್‌ಗಳಿಗೆ ಲಗ್ಗೆ ಇಡುತ್ತಿವೆ ಫೇಕ್ ಆ್ಯಪ್‌ಗಳು| ಎಚ್ಚರ 1 ಕೋಟಿಗೂ ಅಧಿಕ ಮಂದಿಯ ಫೋನ್‌ನಲ್ಲಿ ಬೆಚ್ಚಗೆ ಕುಳಿತು ತನ್ನ ಕಾರ್ಯ ನಿರ್ವಹಿಸುತ್ತಿದೆ ಈ ಡೇಂಜರ್ ಆ್ಯಪ್
ಆ್ಯಂಡ್ರಾಯ್ಡ್ ಗ್ರಾಹಕರಿಗೆ ಸಹಾಯವಾಗಲೆಂದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹಲವಾರು ಆ್ಯಪ್‌ಗಳು ಲಭ್ಯವಿದೆ. ಇವುಗಳಲ್ಲಿ ಕೆಲವೊಂದು ಅಸಲಿ ಆ್ಯಪ್‌ಗಳಾದರೆ ಮತ್ತೆ ಕೆಲವು ನಕಲಿ. ಕಳೆದ ಕೆಲ ದಿನಗಳ ಹಿಂದೆ ಬ್ಯಾಂಕಿಂಗ್ ಆ್ಯಪ್ ಒಂದರ ಬಗ್ಗೆ ಹಲವಾರು ದೂರುಗಳು ಕೇಳಿ ಬಂದಿದ್ದು, ಬ್ಯಾಂಕ್‌ಗಳು ಈ ಆ್ಯಪ್ ಬಳಸದಂತೆ ಎಚ್ಚರಿಸಿದ್ದವು.
ಹಲವಾರು ಬಾರಿ ಇಂತಹ ಫೇಕ್ ಆ್ಯಪ್‌ಗಳನ್ನು ಡೌನ್ ಲೋಡ್ ಮಾಡಿ ಬಳಸಿರುವವರ ಬ್ಯಾಂಕ್ ಖಾತೆಯಿಂದ ಹಣ ಸದ್ದಿಲ್ಲದೆ ನಾಪತ್ತೆಯಾದ ದೂರುಗಳೂ ಕೇಳಿ ಬಂದಿವೆ. ಬ್ಯಾಂಕಿಂಗ್ ಆ್ಯಪ್ ಹೊರತುಪಡಿಸಿ ಸ್ಮಾರ್ಟ್ ಫೋನ್ ಕೆಡಿಸುವ ಹಾಗೂ ಡೇಟಾ ಕಳ್ಳತನ ಮಾಡುವ ಹಲವಾರು ನಕಲಿ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿವೆ. ಇಂತಹುದೇ ಫೇಕ್ ಆ್ಯಪ್ ಒಂದು ಸುಮಾರು 1 ಕೋಟಿಗೂ ಅಧಿಕ ಮಂದಿಯ ಸ್ಮಾರ್ಟ್ ಫೋನ್ ನಲ್ಲಿ ಬೆಚ್ಚನೆ ಕುಳಿತು ತನ್ನ ಕಾರ್ಯ ನಿರ್ವಹಿಸುತ್ತಿದೆ. ಅಷ್ಟಕ್ಕೂ ಆ ಆ್ಯಪ್ ಯಾವುದು? ಮುಂದಿದೆ ವಿವರ
ಹೌದು ಪ್ಲೇ ಸ್ಟೋರ್ನಲ್ಲಿರುವ ಫೇಕ್ ಆ್ಯಪ್ ಒಂದನ್ನು ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ಬಳಸುತ್ತಿರುವ 1 ಕೋಟಿಗೂ ಅಧಿಕ ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ. CSIS ಸೆಕ್ಯೂರಿಟಿ ಗ್ರೂಪ್ ಒಂದರ ವರದಿಯನ್ವಯ ಈ ಫೇಕ್ ಆ್ಯಪ್ ಹೆಸರು 'Updates for Samsung' ಎಂದು ತಿಳಿದು ಬಂದಿದೆ. ಇದು ಸ್ಯಾಮ್ಸಂಗ್ ಬಿಡುಗಡೆಗೊಳಿಸಿರುವ ಆ್ಯಪ್ ಎಂಬ ತಪ್ಪು ಕಲ್ಪನೆಯೊಂದಿಗೆ ಗ್ರಾಹಕರು ಡೌನ್ ಲೋಡ್ ಮಾಡಿಕೊಂಡಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಆ್ಯಪ್ ಜಾಹೀರಾತುಗಳು ಸೇರಿದಂತೆ, ಬಳಕೆದಾರರಿಗೆ 34.99 ಡಾಲರ್[ಸುಮಾರು 2,450 ರೂಪಾಯಿ] ಮೌಲ್ಯದ ಫರ್ಮ್ ವೇರ್ ಢೌನ್ ಲೋಡ್ ಮಾಡಲು ಸೂಚಿಸುತ್ತದೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ. ಇದಕ್ಕಾಗಿ ಪೇಮೆಂಟ್ ಆಯ್ಕೆಯಲ್ಲಿ ಗೂಗಲ್ ಪ್ಲೇ Subscription ನಿಂದ ಬಿಲ್ಲಿಂಗ್ ಮಾಡುವ ಬದಲು ಕ್ರೆಡಿಟ್ ಕಾರ್ಡ್ ವಿವರ ನೀಡುವಂತೆ ಕೇಳುತ್ತದೆ. ಇಷ್ಟೇ ಅಲ್ಲದೇ, ಈ ಆ್ಯಪ್ ಗ್ರಾಹಕರಿಗೆ 19.99 ಡಾಲರ್[ಸುಮಾರು 1400 ರೂಪಾಯಿ]ಗೆ ಯಾವುದೇ ಸಿಮ್ ಅನ್ ಲಾಕ್ ಮಾಡುವ ಸೌಲಭ್ಯವನ್ನೂ ನೀಡುತ್ತಿದೆ. ಒಂದು ವೇಳೆ ನೀವು ಇದನ್ನು ಖರೀದಿಸಿದಲ್ಲಿ ಬ್ಯಾಂಕ್ ಖಾತೆಯಲ್ಲಿ ಗೋಲ್‌ಮಾಲ್ ಆಗುವುದರಲ್ಲಿ ಅನುಮಾನವಿಲ್ಲ.
ಒಂದು ವೇಳೆ ಈ ಫೇಕ್ ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿದ್ದರೆ ಈ ಕೂಡಲೇ ಎಚ್ಚೆತ್ತುಕೊಂಡು Uninstall ಮಾಡುವುದು ಸೂಕ್ತ. ಹೀಗೆ ಆ್ಯಪ್ ಡಿಲೀಟ್ ಆದ ಬಳಿಕ ನಿಮ್ಮ ಮೊಬೈಲ್ ಡಿವೈಸ್ ನ ಆಪರೇಟಿಂಗ್ ಸಿಸ್ಟಂ ಅಪ್ಡೇಟ್ ಮಾಡಲು ಮರೆಯದಿರಿ.