Fact Check| ಮೊಬೈಲ್ ಉಣ್ಣೆ ಇಟ್ಟರೆ ಕರೆ ಬಂದಾಗ ಹೊತ್ತಿ ಉರಿಯುತ್ತೆ!
ಐಫೋನ್ ಪಕ್ಕದಲ್ಲಿದ್ದ ಸ್ಟೀಲ್ ಉಣ್ಣೆಯೊಂದು ಮೊಬೈಲ್‌ಗೆ ಕರೆ ಬಂದ ತಕ್ಷ ಹೊತ್ತಿ ಉರಿಯುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿ ಹಿಂದಿನ ಸತ್ಯ
ನವದೆಹಲಿ[ಜ.30]: ಐಫೋನ್ ಪಕ್ಕದಲ್ಲಿದ್ದ ಸ್ಟೀಲ್ ಉಣ್ಣೆಯೊಂದು ಮೊಬೈಲ್‌ಗೆ ಕರೆ ಬಂದ ತಕ್ಷ ಹೊತ್ತಿ ಉರಿಯುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದೊಂದಿಗೆ ಮಲಗುವಾಗ ತಲೆಗೆ ಮೊಬೈಲನ್ನು ತಲೆಯ ಹತ್ತಿರ ಇಟ್ಟುಕೊಳ್ಳಬೇಡಿ. ಮೊಬೈಲ್ ಹೊರಸೂಸುವ ವಿಕಿರಣಗಳು ಹೇಗಿರುತ್ತವೆ ನೋಡಿ’ ಎಂದು ಬರೆದಿದ್ದಾರೆ. ಈ ವಿಡಿಯೋವೀಗ ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿ ಬಾರೀ ವೈರಲ್ ಆಗುತ್ತಿದೆ.
ಆದರೆ ನಿಜಕ್ಕೂ ಕರೆ ಬಂದಾಗ ಮೊಬೈಲ್ ಹೊರಸೂಸುವ ರೇಡಿಯೋ ವಿಕಿರಣಗಳಿಂದಾಗ ಸ್ಟೀಲ್ ಉಣ್ಣೆಗೆ ಬೆಂಕಿ ಹೊತ್ತಿಕೊಂಡಿತೇ ಎಂದು ಬೂಮ್ ಲೈವ್ ಸುದ್ದಿಸಂಸ್ಥೆ ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ದೃಢವಾಗಿದೆ. ಗೂಗಲ್ ಸಚ್‌ರ್‍ಲ್ಲಿ ಹುಡುಕಹೊರಟಾಗ 2019, ಡಿಸೆಂಬರ್ 27ರಂದು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿರುವ ಮೂಲ ವಿಡಿಯೋ ಲಭ್ಯವಾಗಿದೆ. ಅನಂತರ ಇದನ್ನು ಬೂಮ್ ಮತ್ತೊಮ್ಮೆ ಪರೀಕ್ಷಿಸಿದೆ. ಹಲವು ಬಾರಿ ಪರೀಕ್ಷಿಸಿದಾಗಲೂ ವೈರಲ್ ವಿಡಿಯೋದಂತೆ ಬೆಂಕಿ ಕಾಣಿಸಿಕೊಂಡಿಲ್ಲ. ವಾಸ್ತವಾಗಿ ವೈರಲ್ ಆಗಿರುವ ವಿಡಿಯೋವು ಎಡಿಟ್ ಮಾಡಿ, ಡಿಜಿಟಲ್ ಎಫೆಕ್ಟ್ ನೀಡಿರುವಂಥದ್ದು.
ಮೊಬೈಲ್ ಹೊರಸೂಸುವ ವಿಕಿರಣಗಳಿಂದ ಆರೋಗ್ಯಕ್ಕೆ ಹಾನಿಯುಂಟಾಗುವುದು ನಿಜವೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೆ ಮೊಬೈಲ್ ಪಕ್ಕ ಇರುವ ಉಣ್ಣೆಯೊಂದು ಕರೆ ಬಂದಾಗ ಈ ರೀತಿ ಹೊತ್ತಿ ಉರಿಯುತ್ತದೆ ಎಂಬುದು ಸುಳ್ಳು ಸುದ್ದಿ.