Asianet Suvarna News Asianet Suvarna News

ಜಿಯೋ ಉಚಿತ ಫೋನ್'ನಲ್ಲಿ ಏನೆಲ್ಲಾ ಆಫರ್ಸ್ ಇವೆ? ಇಲ್ಲಿದೆ ಡೀಟೇಲ್ಸ್

ಆಗಸ್ಟ್ 15ರಿಂದ ಜಿಯೋ ಫೋನ್ ಮಾರಾಟಕ್ಕೆ ಲಭ್ಯವಿರುತ್ತದೆ. ಆಗಸ್ಟ್ 24ರಿಂದ ಮುಂಗಡವಾಗಿ ಫೋನ್ ಕಾಯ್ದಿರಿಸಬಹುದಾಗಿದೆ. ಮೈಜಿಯೋ ಆ್ಯಪ್ ಅಥವಾ ಜಿಯೋ ಸ್ಟೋರ್'ಗಳಲ್ಲೂ ಮುಂಗಡ ಬುಕಿಂಗ್ ಸೌಲಭ್ಯವಿದೆ. ಅಡ್ವಾನ್ಸ್ ಆಗಿ ಬುಕ್ ಮಾಡಿದವರಿಗೆ ಜಿಯೋ ಫೋನ್ ದೊರಕುವುದು ಸೆಪ್ಟಂಬರ್ ನಂತರವೇ.

facilities and features of jio phone

ಬೆಂಗಳೂರು: ರಿಲಾಯನ್ಸ್ ಜಿಯೋ ಮತ್ತೊಮ್ಮೆ ದೇಶದಲ್ಲಿ ಸಂಚಲನ ಮೂಡಿಸಿದೆ. ವರ್ಷಾದ್ಯಂತ ಉಚಿತ ಡೇಟಾ ಆಫರ್ ಮೂಲಕ ಸರ್'ಪ್ರೈಸ್ ಎಂಟ್ರಿ ಕೊಟ್ಟಿದ್ದ ಜಿಯೋ ಈಗ ಉಚಿತ ಫೋನನ್ನೇ ಗ್ರಾಹಕರಿಗೆ ನೀಡುವುದಾಗಿ ಘೋಷಿಸಿದೆ. ಮೂರು ವರ್ಷಗಳವರೆಗೆ 150 ರೂಪಾಯಿ ಡೆಪಾಸಿಟ್ ಮಾಡಿದರೆ 4ಜಿ ಫೋನ್ ಉಚಿತವಾಗಿ ಸಿಗಲಿದೆ. ಇಷ್ಟೇ ಆಗಿದ್ದರೆ ಇದ್ಯಾವುದೋ ಮಾರ್ಕೆಟ್ ಗಿಮಿಕ್ ಎಂದು ಸುಮ್ಮನಾಗಬಹುದಿತ್ತು. ಆದರೆ, ಮುಕೇಶ್ ಅಂಬಾನಿಯವರು ಈ ಫೋನ್'ನಲ್ಲಿ ಹಲವು ಮಹತ್ವದ ಅಂಶಗಳನ್ನು ಅಡಕ ಮಾಡಿರುವ ಸುಳಿವು ನೀಡಿದ್ದಾರೆ.

ಏನಿದೆ ಈ ಫೋನ್ ಸ್ಪೆಷಾಲಿಟಿ?
* ಇದು 4ಜಿ ಶಕ್ತ ಫೀಚರ್ ಫೋನ್
* ಸ್ಮಾರ್ಟ್'ಫೋನ್'ನಲ್ಲಿರುವ ಬಹಳಷ್ಟು ಅಂಶಗಳು ಈ ಫೀಚರ್ ಫೋನ್'ನಲ್ಲಿರಲಿವೆ.
* 153 ರೂಪಾಯಿ ರೀಚಾರ್ಜ್ ಮಾಡಿಸಿದರೆ ಅನ್'ಲಿಮಿಟೆಡ್ ಡೇಟಾ; ಉಚಿತ ಕರೆ, ಎಸ್ಸೆಮ್ಮೆಸ್; ಜಿಯೋಟಿವಿ, ಜಿಯೋ ಮೂವಿಗಳು ಲಭ್ಯ
* 309 ರೂಪಾಯಿ ರೀಚಾರ್ಜ್ ಮಾಡಿಸಿದರೆ ಇವೆಲ್ಲವುಗಳ ಜೊತೆಗೆ ಜಿಯೋ ಕೇಬಲ್ ಟಿವಿಯನ್ನು ಎಂಜಾಯ್ ಮಾಡಬಹುದು. ಅಂದರೆ, ಫೋನ್'ನಿಂದ ಕೇಬಲ್ ಮೂಲಕ ಟಿವಿಗೆ ಕನೆಕ್ಟ್ ಮಾಡಬಹುದು.
* ಆ್ಯಪ್'ಗಳು: ಜಿಯೋದ ಎಲ್ಲಾ ಆ್ಯಪ್'ಗಳು ಇದರಲ್ಲಿರಲಿವೆ; ಜೊತೆಗೆ ಫೇಸ್ಬುಕ್ ಮೊದಲಾದ ಹಲವು ಆ್ಯಪ್'ಗಳನ್ನು ಒಳಗೊಂಡಿವೆ.
* ವಾಟ್ಸಾಪ್ ಸದ್ಯಕ್ಕೆ ಇಲ್ಲ.
* 22 ಭಾರತೀಯ ಭಾಷೆಗಳಿಗೆ ಈ ಫೋನ್'ನಲ್ಲಿ ಸಪೋರ್ಟ್ ಇದೆ. ವಾಯ್ಸ್ ಕಮ್ಯಾಂಡ್ ಮೂಲಕವೂ ಫೋನ್'ನ್ನು ಆಪರೇಟ್ ಮಾಡಬಹುದು.
* ಯುಪಿಐ ಮೂಲಕ ಹಣ ವಹಿವಾಟು ನಡೆಸಬಹುದು.
* ಕ್ಯಾಮೆರಾ, ಎಫ್'ಎಂ ರೇಡಿಯೋ, ಬ್ಲೂಟೂಥ್, ಎನ್'ಎಫ್'ಸಿ, ಡುಯೆಲ್ ಸಿಮ್, ಟಾರ್ಚ್ ಇತ್ಯಾದಿ ಮಾಮೂಲಿಯ ಸೌಲಭ್ಯಗಳೂ ಇವೆ.

ಯಾವಾಗಿನಿಂದ ಸಿಗುತ್ತೆ?
ಆಗಸ್ಟ್ 15ರಿಂದ ಜಿಯೋ ಫೋನ್ ಮಾರಾಟಕ್ಕೆ ಲಭ್ಯವಿರುತ್ತದೆ. ಆಗಸ್ಟ್ 24ರಿಂದ ಮುಂಗಡವಾಗಿ ಫೋನ್ ಕಾಯ್ದಿರಿಸಬಹುದಾಗಿದೆ. ಮೈಜಿಯೋ ಆ್ಯಪ್ ಅಥವಾ ಜಿಯೋ ಸ್ಟೋರ್'ಗಳಲ್ಲೂ ಮುಂಗಡ ಬುಕಿಂಗ್ ಸೌಲಭ್ಯವಿದೆ. ಅಡ್ವಾನ್ಸ್ ಆಗಿ ಬುಕ್ ಮಾಡಿದವರಿಗೆ ಜಿಯೋ ಫೋನ್ ದೊರಕುವುದು ಸೆಪ್ಟಂಬರ್ ನಂತರವೇ.

Follow Us:
Download App:
  • android
  • ios