ಬಳಕೆದಾರರು ಯಾವುದೇ ಚಿತ್ರ,ವಿಡಿಯೋ ಅಥವಾ ಬರಹವನ್ನು ಫೇಸ್'ಬುಕ್'ನಲ್ಲಿ ಪೋಸ್ಟ್ ಮಾಡಿದಾಗ ಯೂಸರ್ಸ್'ನ ಸ್ನೇಹಿತರು ಅಥವಾ ಫಾಲೂ ಮಾಡುವವರು 'ಲೈಕ್' 'ಲವ್' 'ವ್ಹಾವ್' 'ಹ್ಹಹ್ಹ' ದುಃಖ, ಕೋಪ'ವಿರುವ 6 ಚಿಹ್ನೆಗಳ ಬಟನ್'ನನ್ನು ಒತ್ತಬಹುದಿತ್ತು.
ವಿಶ್ವದಾದ್ಯಂತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಹಾಗೂ ಸರಿಸುವಾರು 200 ಕೋಟಿ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಫೇಸ್'ಬುಕ್ ಹೊಸದೊಂದು ಇಂದು ಆಪ್ಷನ್'ನನ್ನು ಪರಿಚಯಿಸಿದೆ.
ಬಳಕೆದಾರರು ಯಾವುದೇ ಚಿತ್ರ,ವಿಡಿಯೋ ಅಥವಾ ಬರಹವನ್ನು ಫೇಸ್'ಬುಕ್'ನಲ್ಲಿ ಪೋಸ್ಟ್ ಮಾಡಿದಾಗ ಯೂಸರ್ಸ್'ನ ಸ್ನೇಹಿತರು ಅಥವಾ ಫಾಲೂ ಮಾಡುವವರು 'ಲೈಕ್' 'ಲವ್' 'ವ್ಹಾವ್' 'ಹ್ಹಹ್ಹ' ದುಃಖ, ಕೋಪ'ವಿರುವ 6 ಚಿಹ್ನೆಗಳ ಬಟನ್'ನನ್ನು ಒತ್ತಬಹುದಿತ್ತು.
ಈಗ ಅದೇ ಸಾಲಿಗೆ 'ಗ್ರೇಟ್'ಫುಲ್' ಮತ್ತೊಂದು ಚಿಹ್ನೆಯಿರುವ ಬಟನ್'ನನ್ನು ಪರಿಚಯಿಸಿದ್ದು, ಅತೀ ಹೆಚ್ಚು ಧನ್ಯವಾದಗಳನ್ನು ತಿಳಿಸುವುದಕ್ಕೆ ಇದನ್ನು ಬಳಸಬಹುದು. ತಾಯಂದಿರ ದಿನಾಚರಣೆ ಅಂಗವಾಗಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಆಯ್ಕೆಯನ್ನು ಸೇರಿಸಲಾಗಿದೆ