ಫೇಸ್’ಬುಕ್ ಲೈಕ್ ನಲ್ಲಿ ಪ್ರಧಾನಿ ವಿಶ್ವದಲ್ಲೇ ನಂ.1

First Published 3, May 2018, 10:39 AM IST
Facebook Likes PM No 1
Highlights

ಫೇಸ್‌ಬುಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅತಿಹೆಚ್ಚು ಜನರ ಇಷ್ಟದ ವಿಶ್ವ ನಾಯಕ ಎಂದು  ಗುರುತಿಸಲ್ಪಟ್ಟಿದ್ದಾರೆ. ಜನಪ್ರಿಯತೆಯಲ್ಲಿ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಿಂತಲೂ ತುಂಬಾ ಮುಂದಿದ್ದಾರೆ.  

ಜಿನೆವಾ/ನವದೆಹಲಿ: ಫೇಸ್‌ಬುಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅತಿಹೆಚ್ಚು ಜನರ ಇಷ್ಟದ ವಿಶ್ವ ನಾಯಕ ಎಂದು  ಗುರುತಿಸಲ್ಪಟ್ಟಿದ್ದಾರೆ. ಜನಪ್ರಿಯತೆಯಲ್ಲಿ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಿಂತಲೂ ತುಂಬಾ ಮುಂದಿದ್ದಾರೆ.  

ಫೇಸ್‌ಬುಕ್‌ನಲ್ಲಿ ಮೋದಿ 4.32 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ಬ್ರೂಸನ್ ಕೊನ್ ಮತ್ತು ವೋಲ್ಫ್ ಬಿಡುಗಡೆಗೊಳಿಸಿರುವ ‘ಫೇಸ್‌ಬುಕ್‌ನಲ್ಲಿ ವಿಶ್ವ ನಾಯಕರು’ ವರದಿಯ ಪ್ರಕಾರ, ಟ್ರಂಪ್‌ಗೆ 2.31 ಕೋಟಿ ಹಿಂಬಾಲಕರಿದ್ದು, ಮೋದಿಯವರ ನಂತರದ ಸ್ಥಾನದಲ್ಲಿದ್ದಾರೆ. 2017ರ ಜ.1ರಿಂದ ಇಲ್ಲಿ ವರೆಗೆ  ಸುಮಾರು 650 ಪ್ರತಿಷ್ಠಿತ ಮಂದಿಯ ಫೇಸ್‌ಬುಕ್ ಪುಟದ ವಿಶ್ಲೇಷಣೆ ನಡೆಸಿ, ವರದಿ ಸಿದ್ಧಪಡಿಸಲಾಗಿದೆ. ಕಳೆದ 14 ತಿಂಗಳಿನಲ್ಲಿ ಟ್ರಂಪ್ ಫೇಸ್‌ಬುಕ್‌ನಲ್ಲಿ ಅತಿ ಹೆಚ್ಚು ಸಂವಾದ ನಡೆಸಿದ ಮುಖಂಡ.

ಟ್ರಂಪ್ ಒಟ್ಟಾರೆ 20 ಕೋಟಿ ಬಾರಿ ಫೇಸ್‌ಬುಕ್ ಮೂಲಕ ಸಂವಹನ ನಡೆಸಿದ್ದಾರೆ. ಈ ಅವಧಿಯಲ್ಲಿ ಮೋದಿ 11 ಕೋಟಿ ಬಾರಿ ಸಂವಹನ ನಡೆಸಿದ್ದಾರೆ. 2017ರಲ್ಲಿ 5 ಅತಿಹೆಚ್ಚು ಲೈಕ್ ಮಾಡಲಾದ ಚಿತ್ರಗಳಲ್ಲಿ ಎಲ್ಲ 5 ಚಿತ್ರಗಳೂ ಮೋದಿ ಪೋಸ್ಟ್ ಮಾಡಿದ್ದಾಗಿದೆ. ಅದರಲ್ಲಿ ಒಡಿಶಾದ ಲಿಂಗರಾಜ್ ದೇಗುಲ ಫೋಟೊ ಅತಿಹೆಚ್ಚು ಲೈಕ್ ಮಾಡಲ್ಪಟ್ಟಿದೆ.

loader