ಯೂಟ್ಯೂಬ್'ಗೆ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಹಣ ಗಳಿಸಬಹುದೆಂಬ ವಿಚಾರ ಬಹುತೇಕರಿಗೆ ತಿಳಿದಿದೆ. ಇದೀಗ ಫೇಸ್'ಬುಕ್ ಕೂಡಾ ಈ ಅವಕಾಶವನ್ನು ಕಲ್ಪಿಸಿದೆ. ಫೇಸ್'ಬುಕ್'ಗೆ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ನೀವು ಹಣ ಗಳಿಸಬಹುದಾಗಿದೆ.

ಯೂಟ್ಯೂಬ್'ಗೆ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಹಣ ಗಳಿಸಬಹುದೆಂಬ ವಿಚಾರ ಬಹುತೇಕರಿಗೆ ತಿಳಿದಿದೆ. ಇದೀಗ ಫೇಸ್'ಬುಕ್ ಕೂಡಾ ಈ ಅವಕಾಶವನ್ನು ಕಲ್ಪಿಸಿದೆ. ಫೇಸ್'ಬುಕ್'ಗೆ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ನೀವು ಹಣ ಗಳಿಸಬಹುದಾಗಿದೆ.

ಸಾಮಾಜಿಕ ಜಾಲಾತಾಣಗಳಲ್ಲಿ ಸಾಕಷ್ಟು ಪ್ರಖ್ಯಾತಿ ಗಳಿಸಿರುವ ಫೇಸ್'ಬುಕ್ ವಿಡಿಯೋ ಮೂಲಕ ಹಣ ಗಳಿಸಲು ಅವಕಾಶವನ್ನು ಕಲ್ಪಿಸುತ್ತಿದೆ. ಇದಕ್ಕಾಗಿಯೇ ಹೊಸದೊಂದು ಫೀಚರ್ ಪರಿಚಯಿಸುತ್ತಿದೆ. ಇಂಡಸ್ಟ್ರಿ ಮೂಲಕಗಳಿಂದ ಲಭ್ಯವಾದ ಮಾಹಿತಿ ಅನ್ವಯ ಫೇಸ್'ಬುಕ್ ಸಧ್ಯದಲ್ಲೇ 'ಮಿಡ್ ರೋಲ್' ಆ್ಯಡ್ ಫಾರ್ಮೆಟ್'ನ್ನು ಆರಂಭಿಸಲಿದೆ. ಇದಾದ ಬಳಿಕ ನೀವು ಅಪ್ಲೋಡ್ ಮಾಡುವ ವಿಡಿಯೋಗಳ ಮದ್ಯದಲ್ಲಿ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ, ಈ ಜಾಹೀರಾತುಗಳ ಮೂಲಕ ನೀವು ಹಣಗಳಿಸಬಹುದಾಗಿದೆ.

20 ಸೆಕೆಂಡ್'ನಷ್ಟು ಹೊತ್ತು ವಿಡಿಯೋ ನೋಡುವುದು ಅಗತ್ಯ!

ರೀಕೋಟ್ ಎಂಬ ವೆಬ್'ಸೈಟ್'ನಲ್ಲಿ ನೀಡಿರುವ ಮಾಹಿತಿ ಅನ್ವಯ, ಫೇಸ್'ಬುಕ್ ಅಕೌಂಟ್ ಹೊಂದಿರುವ ವ್ಯಕ್ತಿಯೊಬ್ಬ ಅಪ್ಲೋಡ್ ಮಾಡಿದ ವಿಡಿಯೋ ಒಂದನ್ನು ಜನರು 20 ಸೆಕೆಂಡ್ ನೋಡಬೇಕು. ಇದಾದ ಬಳಿಕ ವೀಕ್ಷಕರಿಗೆ ಜಾಹೀರಾತು ಕಂಡು ಬರುತ್ತದೆ ಹಾಗೂ ಈ ಜಾಹೀರಾತಿಗೆ ಸಿಗುವ ಹಣವನ್ನು ವಿಡಿಯೋ ಅಪ್ಲೋಡ್ ಮಾಡಿದ ವ್ಯಕ್ತಿಗೆ ನೀಡಲಾಗುತ್ತದೆ' ಎಂದು ತಿಳಿದು ಬಂದಿದೆ.

ಜಾಹೀರಾತಿಗೆ ಸಿಕ್ಕ ಹಣದಲ್ಲಿ ಶೇ. 55% ನಿಮ್ಮದಾಗುತ್ತದೆ.

ವಿಡಿಯೋ ಮಧ್ಯೆ ಬರುವ ಜಾಹೀರಾತಿನಿಂದ ಬಂದ ಹಣದಲ್ಲಿ ಶೇ,. 55% ನಿಮ್ಮದಾಗಲಿದೆ. ಇದು ಕಡಿಮೆಯಾಯಿತು ಎಂದು ಭಾವಿಸಬೇಡಿ ಯಾಕೆಂದರೆ ಯೂಟ್ಯೂಬ್ ಕೂಡಾ ತನ್ನ ಗ್ರಾಹಕರಿಗೆ ನೀಡುವುದು ಇಷ್ಟೇ ಹಣವನ್ನು. ಆದರೆ ಈ ಕುರಿತಾಗಿ ಫೇಸ್'ಬುಕ್ ಯಾವುದೇ ಅಧಿಕೃತ ಮಾಹಿತಿಯನಗನು ನೀಡಿಲ್ಲ.

ಈ ಹೊಸ ಹೆಜ್ಜೆ ಇಡಲು ಕಾರಣವೇನು?

ವಿಡಿಯೋ ವೀಕ್ಷಿಸುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಬಹುಶಃ ಫೇಸ್'ಬುಕ್ ಈ ನಿರ್ಧಾರ ಕೈಗೊಂಡಿರಬೇಕು. 2016ರಲ್ಲೇ 100 ಮಿಲಿಯನ್'ಗೂ ಅಧಿಕ ಬಳಕೆದಾರರು ಫೇಸ್'ಬುಕ್'ನಲ್ಲಿ ಕೇವಲ ವಿಡಿಯೋ ವೀಕ್ಷಿಸಿದವರಾಗಿದ್ದಾರೆ. ಇನ್ನೂ ಅಚ್ಚರಿಪಡಿಸುವ ವಿಚಾರವೆಂದರೆ ಈ ಬಳಕೆದಾರರು ವೀಕ್ಷಿಸಿದ್ದು ಯಾವುದೇ ಹೊಚ್ಚ ಹೊಸ ವಿಡಿಯೋ ಆಗಿರದೆ ಈ ಮೊದಲೇ ಅಪ್ಲೋಡ್ ಆಗಿದ್ದ ಹಳೆ ವಿಡಿಯೋಗಳಾಗಿದ್ದವು ಹಾಗೂ ಇವುಗಳ ನಡುವೆ ಯಾವುದೇ ಜಾಹೀರಾತು ಪ್ರದರ್ಶನವಾಗುತ್ತಿರಲಿಲ್ಲ.