Asianet Suvarna News Asianet Suvarna News

ಫೇಸ್'ಬುಕ್'ನಲ್ಲಿ ಮತ್ತೊಂದು ಹೊಸ ಫೀಚರ್, ಬಳಕೆದಾರರ ಮನಗೆದ್ದಿದೆ ಈ ಆಯ್ಕೆ!

ಫೇಸ್'ಬುಕ್ ಇತ್ತೀಚೆಗೆ ವಿಡಿಯೋಗಳ ಮೇಲೆ ಹೆಚ್ಚಿನ ಗಮನ ನೀಡುತ್ತಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ತನ್ನ ಉದ್ದೇಶದಿಂದ ಫೇಸ್'ಬುಕ್ ಆ್ಯಪ್'ಗಳನ್ನು ನಕಲು ಮಾಡಲು ಹಿಂದೆ ಸರಿಯಲಿಲ್ಲ. ಇದೀಗ ವಿಡಿಯೋ ವಿಭಾಗದಲ್ಲಿ ತನ್ನದೇ ಆದ ಕೆಲವು ನೂತನ ಆಯ್ಕೆಗಳನ್ನು ಫೇಸ್'ಬುಕ್ ಪರಿಚಯಿಸುವ ಪ್ರಯತ್ನದಲ್ಲಿದೆ. ಇದು ತನ್ನ ಲೈವ್ ವಿಡಿಯೋ ಸರ್ವಿಸ್'ನಲ್ಲಿ 'ಲೈವ್ ಚಾಟ್ ವಿತ್ ಫ್ರೆಂಡ್ಸ್' ಹಾಗೂ 'ಲೈವ್ ವಿಥ್' ಎಂಬ ಎರಡು ಹೊಸತಾದ ಫೀಚರ್'ಗಳನ್ನು ಪರಿಚಯಿಸಿದೆ.

facebook gets live chat with friends and live with features

ಫೇಸ್'ಬುಕ್ ಇತ್ತೀಚೆಗೆ ವಿಡಿಯೋಗಳ ಮೇಲೆ ಹೆಚ್ಚಿನ ಗಮನ ನೀಡುತ್ತಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ತನ್ನ ಉದ್ದೇಶದಿಂದ ಫೇಸ್'ಬುಕ್ ಆ್ಯಪ್'ಗಳನ್ನು ನಕಲು ಮಾಡಲು ಹಿಂದೆ ಸರಿಯಲಿಲ್ಲ. ಇದೀಗ ವಿಡಿಯೋ ವಿಭಾಗದಲ್ಲಿ ತನ್ನದೇ ಆದ ಕೆಲವು ನೂತನ ಆಯ್ಕೆಗಳನ್ನು ಫೇಸ್'ಬುಕ್ ಪರಿಚಯಿಸುವ ಪ್ರಯತ್ನದಲ್ಲಿದೆ. ಇದು ತನ್ನ ಲೈವ್ ವಿಡಿಯೋ ಸರ್ವಿಸ್'ನಲ್ಲಿ 'ಲೈವ್ ಚಾಟ್ ವಿತ್ ಫ್ರೆಂಡ್ಸ್' ಹಾಗೂ 'ಲೈವ್ ವಿಥ್' ಎಂಬ ಎರಡು ಹೊಸತಾದ ಫೀಚರ್'ಗಳನ್ನು ಪರಿಚಯಿಸಿದೆ.

ತನ್ನ ನೂತನ ಪ್ರಯೋಗ ಲೈವ್ ಚಾಟ್'ನ್ನು ಗ್ರಾಹಕರು ಸಮರ್ಪಕವಾಗಿ ಬಳಸಬೇಕೆಂಬ ಉದ್ದೇಶದಿಂದ ಈ ಎರಡು ಫೀಚರ್'ಗಳನ್ನು ಪರಿಚಯಿಸುತ್ತಿದೆ. 'ಲೈವ್ ಚಾಟ್ ವಿತ್ ಫ್ರೆಂಡ್ಸ್' ಮೂಲಕ ಬಳಕೆದಾರರು ಲೈವ್ ಸ್ಟರೀಮ್ ನೋಡುತ್ತಿರುವಾಗಲೇ ಚಾಟ್ ಮಾಡುವ ಅವಕಾಶ ಒದಗಿಸಲಿದೆ. ಈ ಮೊದಲು ಕೇವಲ ಪಬ್ಲಿಕ್ ಕಮೆಂಟ್ಸ್ ಮಾಡುವ ಅವಕಾಶ ಮಾತ್ರ ಇತ್ತು. ಇದರಿಂದಾಗಿ ಕೆಲವೊಮ್ಮೆ ಪ್ರೇಕ್ಷಕರು ಅಭಿಪ್ರಾಯಗಳಲ್ಲಿ ಹೊಂದಾಣಿಕೆ ಇಲ್ಲದೆ ಜಗಳವಾಡಿದ ಪ್ರಸಂಗಗಳೂ ಇವೆ.

ಒಂದು ವೇಳೆ ನಿಮಗೆ ನಿಮ್ಮ ಮಿತ್ರರೊಂದಿಗೆ ಲೈವ್ ವಿಡಿಯೋ ನೋಡುವುದು ಇಷ್ಟವೆಂದಾದರೆ ಈ ಫೀಚರ್ ಬಹಳ ಉಪಯೋಗ ಬೀಳಲಿದೆ. ತನ್ನ ಬ್ಲಾಗ್ ಪೋಸ್ಟ್'ನಲ್ಲಿ ಈ ಕುರಿತಾಗಿ ಬರೆದುಕೊಂಡಿರುವ ಫೇಸ್'ಬುಕ್ 'ಇನ್ಮುಂದೆ ನೀವು ಲೈವ್ ಸ್ಟ್ರೀಮ್ ನೋಡುತ್ತಿರುವ ನಿಮ್ಮ ಮಿತ್ರರನ್ನು ಇನ್ವೈಟ್ ಮಾಡಬಹುದು, ಇಲ್ಲವೇ ಈ ಲೈವ್'ನಲ್ಲಿ ಅಭಿರುಚಿಯುಳ್ಳವರನ್ನೂ ಆಮಂತ್ರಿಸಬಹುದು ಹಾಗೂ ಚಾಟ್ ಮಾಡಬಹುದು. ಇನ್ನು ವೈಯುಕ್ತಿಕ ಚಾಟ್ ಮಾಡುವುದು ಬೇಡವೆಂದಾಗ ಪಬ್ಲಿಕ್ ಚಾಟ್ ಆಯ್ಕೆಗೆ ಮರಳಬಹುದು. ಇನ್ನು ಲೈವ್ ಸ್ಟ್ರೀಮಿಂಗ್ ಮುಕ್ತಾಯವಾದ ಬಳಿಕವೂ ನೀವು ಚಾಟ್ ಮಿತ್ರರೊಂದಿಗೆ ವಿಡಿಯೋ ಕುರಿತಾಗಿ ಚಾಟ್ ಮಾಡಬಹುದು' ಎಂದಿದೆ.

ಸದ್ಯ 'ಲೈವ್ ವಿತ್ ಫ್ರೆಂಡ್ಸ್' ಫೀಚರ್ ಸದ್ಯ ಮೊಬೈಲ್'ನಲ್ಲಿ ಟೆಸ್ಟಿಂಗ್ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ಒದಗಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಇನ್ನು 'ಲೈವ್ ವಿತ್' ಫೀಚರ್ ಕುರಿತಾಗಿ ಹೇಳುವುದಾದರೆ ಈ ಮೂಲಕ ನೀವು ಲೈವ್ ವಿಡಿಯೋ ವೀಕ್ಷಿಸುವ ಅಪರಿಚಿತ ಬಳಕೆದಾರರನ್ನೂ ಚಾಟ್ ಮಾಡಲು ಆಮಂತ್ರಿಸಬಹುದು. ಇದರಿಂದ ಇಬ್ಬರು ಈ ವಿಡಿಯೋ ಕುರಿತಾಗಿ ಚರ್ಚೆ ನಡೆಸಿ ವಿಡಿಯೋ ನೋಡಬಹುದಾಗಿದೆ. ಇನ್ನೂ ಮಜದಾಯಕ ವಿಚಾರವೆಂದರೆ ಬಳಕೆದಾರ ಈ ಫೀಚರ್'ನ್ನು ಪೋರ್ಟ್ರೆಡ್ ಇಲ್ಲವೇ ಲ್ಯಾಂಡ್ಸ್ಕೇಪ್ ಮೋಡ್'ನಲ್ಲೂ ಬಳಸಬಹುದು.

ಈ ಫೀಚರ್'ನ್ನು ಬಳಸಲು ಬಳಕೆದಾರರು ಲೈವ್ ವೀವರ್ಸ್ ಸೆಕ್ಷನ್'ಗೆ ತೆರಳಿ ಅಲ್ಲಿರುವ ವೀಕ್ಷಕರಲ್ಲಿ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ನೀವು ಇನ್ವೈಟ್ ಮಾಡಬಯಸುವ ವ್ಯಕ್ತಿ ಹಾಕಿದ ಕಮೆಂಟ್'ನ್ನು ಲಾಂಗ್ ಪ್ರಸ್ ಮಾಡಿಯೂ ಆಮಂತ್ರಿಸಬಹುದು. ಆದರೆ ನೀವು ಆಂತ್ರಿಸಿದ ವ್ಯಕ್ತಿ ನಿಮ್ಮ ಆಮಂತ್ರಣವನ್ನು ಪುರಸ್ಕರಿಸುವ ಇಲ್ಲವೇ ತಿರಸ್ಕರಿಸುವ ಎರಡೂ ಆಯ್ಕೆ ಹೊಂದಿರುತ್ತಾರೆ. ಈ ಫೀಚರ್ ರಿಮೋಟ್ ಏರಿಯಾದಲ್ಲಿರುವ ವ್ಯಕ್ತಿಯೊಂದಿಗೆ ಚಾಟ್ ಮಾಡಲು ಬಹಳ ಸಹಾಯಕವಾಗುತ್ತದೆ. ಈ ಮೊದಲು ಈ ಫೀಚರ್ ಬಳಸುವ ಻ವಕಾಶ ಕೆಲವು ಗಣ್ಯರಿಗಷ್ಟೇ ನೀಡಲಾಗಿತ್ತು. ಆದರೀಗ ಎಲ್ಲಾ ಬಳಕೆದಾರರು ಇದನ್ನು ಬಳಸುವ ಅವಕಾಶ್ ಫೇಸ್'ಬುಕ್ ನೀಡಿದೆ. ಫೇಸ್'ಬುಕ್ ಪೇಜ್'ನಲ್ಲೂ ಇದನ್ನು ಬಳಸಬಹುದು.

Follow Us:
Download App:
  • android
  • ios