ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸುಜುಕಿ ವಿ ಸ್ಟ್ರೋಮ್ 650 ಬೈಕ್!

First Published 19, Jul 2018, 9:08 PM IST
Exclusive: 2018 Suzuki V-Strom 650 To Be Launched In India This Year
Highlights

ಸುಜುಕಿ ಮೋಟಾರ್ ಸಂಸ್ಥೆಯ 650 ಇಂಜಿನ ಸಿಸಿ ಹೊಂದಿರುವ ವಿ ಸ್ಟ್ರೋಮ್ 650 ಬೈಕ್ ಬಿಡುಗಡೆಗೆ ಸಜ್ಜಾಗಿದೆ. ನೂತನ ಬೈಕ್‌ನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.

ಬೆಂಗಳೂರು(ಜು.19): ಸುಜುಕಿ ಮೋಟಾರ್ ಸಂಸ್ಥೆ ನೂತನ ಸುಜುಕಿ ವಿ ಸ್ಟ್ರೋಮ್ 650 ಬಿಡುಗಡೆಗೆ ಸಜ್ಜಾಗಿದೆ. ಮುಂದಿನ ತಿಂಗಳಲ್ಲಿ ನೂತನ ಸುಜುಕಿ ವಿ ಸ್ಟ್ರೋಮ್ 650 ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.

ನೂತನ ವಿ ಸ್ಟ್ರೋಮ್ 650 ಬೈಕ್ 645 ಸಿಸಿ ಇಂಜಿನ್ ಹೊಂದಿದೆ. ಕವಾಸಕಿ ನಿಂಜಾ 650 ಬೈಕ್‌ಗೆ ಪೈಪೋಟಿಯಾಗಿ ಇದೀಗ ಸುಜುಕಿ ವಿ ಸ್ಟ್ರೋಮ್ 650 ರೋಡಿಗಿಳಿಯುತ್ತಿದೆ. ಹೀಗಾಗಿ ಪವರ್‌ಫುಲ್ ಇಂಜಿನ್ ಹಾಗೂ ಹಲವು ವಿಶೇಷತೆಗಳೊಂದಿಗೆ ಸುಜುಕಿ ಮತ್ತೆ ಬೈಕ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ತಯಾರಿ ನಡೆಸಿದೆ.

ನೂತನ ಸುಜುಕಿ ವಿ ಸ್ಟ್ರೋಮ್ 650 ಬೈಕ್ ಬೆಲೆ 6.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಲಿಕ್ವಿಡ್ ಕೂಲ್‌ಡ್, 70 ಬಿಹೆಚ್‌ಪಿ ಪವರ್ ಹಾಗೂ 8,800 ಆರ್‌ಪಿಎಂ ಹೊಂದಿದೆ. ದ್ವಿ ಇಂಜಿನ್(ಟ್ವಿನ್ ಇಂಜಿನ್) ನೂತನ ಸುಜುಕಿ ವಿ ಸ್ಟ್ರೋಮ್ 650 ಬೈಕ್ ವಿಶೇಷತೆ.

ಅಲ್ಯೂಮಿನಿಯಂ ವೀಲ್ಸ್ , ಬ್ರಿಡ್ಜ್‌ಸ್ಟೋನ್ ಬ್ಯಾಟಲ್‌ವಿಂಗ್ ಟೈಯರ್ಸ್ ವಿ ಸ್ಟ್ರೋಮ್ ಬೈಕ್ ಲುಕ್‌ಗೆ ಮತ್ತಷ್ಟು ಮೆರುಗು ನೀಡಿದೆ. ವಿ ಸ್ಟ್ರೋಮ್ 650 ಬೈಕ್ ಬಳಿಕ, ಮುಂದಿನ ವರ್ಷ ವಿ ಸ್ಟ್ರೋಮ್ 650X ಬಿಡುಗಡೆಯಾಗಲಿದೆ.

loader