Asianet Suvarna News Asianet Suvarna News

ಸಿನಿಮಾ ಶೈಲಿಯಲ್ಲಿ ಇಬ್ಬರು ಉದ್ಯೋಗಿಗಳಿಂದ 2 ಡಸ್ಟರ್ ಕಾರು ಕಳವು!

ಅದೆಷ್ಟೇ ಭದ್ರವಾಗಿಟ್ಟರೂ ಕಾರು, ಬೈಕ್ ಕಳವು ಮಾಡುವವರು ಹೊಸ ಹೊಸ ವಿಧಾನ ಅನುಸರಿಸುತ್ತಾರೆ. ಇದೀಗ ಚೆನ್ನೈ ರೆನಾಲ್ಟ್ ಕಾರು ಘಟಕದ ಉದ್ಯೋಗಿಗಳೇ 2 ಡಸ್ಟರ್ ಕಾರುಗಳನ್ನ ಕಳವು ಮಾಡಿದ್ದಾರೆ. ಇಲ್ಲಿದೆ ಸಿನಿಮಿಯ ಶೈಲಿಯ ಕಳವು!

Employees at Renaults Chennai Plant steal two new Dusters
Author
Bengaluru, First Published Sep 16, 2018, 8:32 PM IST

ಚೆನ್ನೈ(ಸೆ.16): ರೆನಾಲ್ಟ್ ಡಸ್ಟರ್ ಉದ್ಯೋಗಿಗಳಿಬ್ಬರು ಸಿನಿಮಿಯ ರೀತಿಯಲ್ಲಿ 2 ಡಸ್ಟರ್ ಕಾರು ಕದ್ದು ಸಿಕ್ಕಿಬಿದ್ದಿದ್ದಾರೆ. ಈ ಘಟನೆ ನಡೆದಿರುವುದು ಚೆನ್ನೈನಲ್ಲಿರೋ ರೆನಾಲ್ಟ್ ಕಾರು ಜೋಡಣೆ ಘಟಕದಲ್ಲಿ.

ಚೆನ್ನೈನ ರೆನಾಲ್ಟ್  ಕಾರು ಜೋಡಣೆ ಘಟಕದ ಉದ್ಯೋಗಿಗಳಿಬ್ಬರು ಹೊಸ 2 ಡಸ್ಟರ್ ಕಾರನ್ನ ಘಟಕದಿಂದ ಕದ್ದೊಯ್ದಿದ್ದಾರೆ. ಘಟಕ್ಕೆ ಆಗಮಿಸಿದ ಇಬ್ಬರು ಉದ್ಯೋಗಿಗಳು ಹಳೆ ಕಾರೊಂದರ ನಂಬರ್ ಪ್ಲೇಟ್ ತೆಗೆದು ಹೊಸ 2 ಡಸ್ಟರ್ ಕಾರಿಗೆ ಅಳವಡಿಸಿದ್ದಾರೆ.

ನಂಬರ್ ಪ್ಲೇಟ್ ಅಳವಡಿಸಿ, ಹಳೇ ಕಾರಿನ ನಂಬರ್ ಪ್ಲೇಟ್ ಮೂಲಕವೇ ಘಟಕದಿಂದ ಹೊರಗೆ ಹೋಗುವ ಗೇಟ್ ಪಾಸ್ ಪಡೆದುಕೊಂಡಿದ್ದಾರೆ. ಬಳಿಕ ಸುಲಭವಾಗಿ 2 ಡಸ್ಟರ್ ಹತ್ತಿದ್ದ ಇಬ್ಬರು ಉದ್ಯೋಗಿಗಳು ಡ್ರೈವ್ ಮಾಡಿ ಕಾರಿನ ಜೊತೆ ಪರಾರಿಯಾಗಿದ್ದಾರೆ.

ಹೊಸ ಕಾರನ್ನ ಕದ್ದ ಇಬ್ಬರು ಉದ್ಯೋಗಿಗಳು ಈ ಕಾರನ್ನ ಮಾರಾಟ ಮಾಡಲು ಯತ್ನಿಸಿದ್ದಾರೆ. ಆದರೆ ಚೆನ್ನೈ ರೆನಾಲ್ಟ್ ಘಟಕದಿಂದ 2 ಕಾರುಗಳು ಮಿಸ್ಸಿಂಗ್ ಆದಾಗ, ದೂರು ದಾಖಲಿಸಿದ್ದಾರೆ. ಸಿಸಿಟಿವಿ ಹಾಗೂ ಇತರ ಮಾಹಿತಿ ಆಧರಿಸಿ ಇಬ್ಬರು ಕಳ್ಳರನ್ನ ಪೊಲೀಸರು ಬಂಧಿಸಿದ್ದಾರೆ.

Follow Us:
Download App:
  • android
  • ios