ಕಾರು ತಯಾರಿಕಾ ಕಂಪೆನಿಗಳು ಈಗಾಗಲೇ ಗುಜರಾತ್‌ನಲ್ಲಿ ತಮ್ಮ ಘಟಕ ಆರಂಭಿಸಿದೆ. ಇದೀಗ ಎಲೆಕ್ಟ್ರಿಕಲ್ ಕಾರು ತಯಾರಿಕೆಗೂ ಕಂಪೆನಿಗಳು ಗುಜರಾತ್‌ನತ್ತ ಮುಖಮಾಡಿದೆ. ಇತರ ರಾಜ್ಯಗಳಿಗಿಂತ ಬಹುತೇಕ ಕಂಪೆನಿಗಳು ಗುಜರಾತ್‌ ಪಾಲಾಗುತ್ತಿರುವುದೇಕೆ? ಇಲ್ಲಿದೆ ವಿವರ.

ಗಾಂಧಿನಗರ(ಆ.11): ಗುತರಾಜ್‌ನಲ್ಲಿ ಈಗಾಗಲೇ ಹಲವು ಕಾರು ಕಂಪೆನಿಗಳು ತಮ್ಮ ಘಟಕ ಆರಂಭಿಸಿದೆ. ಇದೀಗ ಹೊಸದಾಗಿ ಎಲೆಕ್ಟ್ರಿಕಲ್ ಕಾರು ಕಂಪೆನಿಗಳು ಕೂಡ ಗುಜರಾ‌ತ್‌ನಲ್ಲೇ ಘಟಕ ತೆರೆಯಲು ಮುಂದಾಗಿದೆ.

ಟಾಟಾ ಮೋಟಾರ್ಸ್ ಲಿಮಿಟೆಡ್ ಇದೀಗ ಅಹಮ್ಮದಾಬಾದ್ ಸಮೀಪದ ಸನಂದ್ ನಗರದಲ್ಲಿ ಎಲೆಕ್ಟ್ರಿಕಲ್ ಮೋಟಾರ್ಸ್ ಘಟಕ ತಯಾರಿಸಲು ಗುಜರಾತ್ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ. 1600 ಕೋಟಿ ಮೊತ್ತದ ಬೃಹತ್ ಯೋಜನೆಗೆ ಟಾಟಾ ಮೋಟಾರ್ಸ್ ಗುಜರಾತ್‌ನ್ನ ಆಯ್ಕೆಮಾಡಿಕೊಂಡಿದೆ.

ಗುತರಾಜ್ ಸರ್ಕಾರದ ಮೂಲಗಳ ಪ್ರಕಾರ, ಟಾಟಾ ಮೋಟಾರ್ಸ್ ಲಿಮಿಟೆಡ್‌ಗೊ ಮೊದಲು ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪೆನಿಗಳು ಎಲೆಕ್ಟ್ರಿಲ್ ಕಾರು ತಯಾರಿಕಾ ಘಟಕ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿದೆ. ಸ್ಥಳ ಹಾಗೂ ಮೂಲಭೂತ ಸೌಕರ್ಯದ ಕುರಿತು ಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದಿದೆ.

ಗುಜರಾಜ್ ಸರ್ಕಾರ ನೀಡೋ ಸೌಲಭ್ಯ, ಮೋಟಾರು ಕಂಪೆನಿಗಳಿಗೆ ಸೂಕ್ತ ವಾತಾವರಣ ಹಾಗೂ ಮೂಲಭೂತ ಸೌಕರ್ಯಗಳು ಇತರ ರಾಜ್ಯಗಳಿಗಿಂತ ಅತ್ಯುತ್ತಮವಾಗಿದೆ. ಹೀಗಾಗಿ ಟಾಟಾ ಮೋಟಾರ್ಸ್ ಎಲೆಕ್ಟ್ರಿಕಲ್ ಕಾರು ತಯಾರಿಕಾ ಘಟಕಕ್ಕೆ ಗುಜರಾತ್ ಆಯ್ಕೆ ಮಾಡಿಕೊಂಡಿದೆ. ಸದ್ಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಂತಿಮ ನಿರ್ಧಾರ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಟಾಟಾ ಮೋಟಾರ್ಸ್ ಸಂಸ್ಥೆಯ ಮಾಧ್ಯಮ ವಕ್ತಾರ ಹೇಳಿದ್ದಾರೆ.