Asianet Suvarna News Asianet Suvarna News

ಇಕೋಸಿಸ್ಟಮ್, ತಂತ್ರಜ್ಞಾನ & ಪರ್ಯಾಯ ವಿಧಾನ ನಗರ ಸಾರಿಗೆಯ ಬೆನ್ನೆಲುಬು: ಚಿತ್ರಜಿತ್ ಚಕ್ರವರ್ತಿ

ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಯಾಕಿಂದು ಆದ್ಯತೆಯ ವಿಷಯವಾಗಿ ಪರಿಗಣಿಸಬೇಕು? ಪಾಲಿಸಿ ಮೇಕರ್ಸ್,  ಸರ್ಕಾರಿ ಅಧಿಕಾರಿಗಳು ಮತ್ತು ಕಂಪನಿಗಳು ಏನೆಲ್ಲಾ ಪ್ರಮುಖ ಅಂಶಗಳನ್ನು ಗಮನದಲ್ಲಡಬೇಕು? ನಗರ ಸಾರಿಗೆ ವ್ಯವಸ್ಥೆಯ ಡಿಜಿಟಲೀಕರಣಕ್ಕಿರುವ ಸವಾಲುಗಳೇನು? ಈ ಬಗ್ಗೆ ಬಿಪಿಸಿ ಬ್ಯಾಂಕಿಂಗ್ ಟೆಕ್ನಾಲಜಿಸ್‌ನ  ಚಿತ್ರಜಿತ್ ಚಕ್ರವರ್ತಿಯವರು ಬೆಳಕು ಚೆಲ್ಲಿದ್ದಾರೆ.

Ecosystem Technology  Commuting Alternatives Hold Key to Urban Mobility Chitrajit Chakrabarti
Author
Bengaluru, First Published Jul 8, 2020, 11:19 PM IST

ಜಾಗತಿಕ ಮಟ್ಟದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ  ಬಿಪಿಸಿ ಗ್ಲೋಬಲ್ ಸಂಸ್ಥೆಯು ಮಹತ್ವದ ಕ್ರಮಗಳನ್ನು ಕೈಗೊಂಡಿದೆ.  ಕೋವಿಡ್ ಸಾಂಕ್ರಾಮಿಕದ ವೇಳೆ ಸಂಪರ್ಕ ರಹಿತ ಸಂಚಾರ ವ್ಯವಸ್ಥೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ, ವೀಸಾ ರೆಡಿ ಸಂಸ್ಥೆಯ ಜೊತೆ ಇದು ಕೈಜೋಡಿಸಿದೆ.  ಬಿಪಿಸಿ ಬ್ಯಾಂಕಿಂಗ್ ಟೆಕ್ನಾಲಜಿಸ್ನ ಸೌತ್-ಈಸ್ಟ್ ಏಷ್ಯಾದ ಸೇಲ್ಸ್ ವಿಭಾಗದ ಮುಖ್ಯಸ್ಥ ಚಿತ್ರಜಿತ್ ಚಕ್ರವರ್ತಿಯವರನ್ನು ಸಂದರ್ಶಿಸಿದಾಗ, ಭಾರತದಲ್ಲಿ ಸಾರ್ವಜನಿಕ ಸಾರಿಗೆಯ ಭವಿಷ್ಯ ಮತ್ತು ಡಿಜಿಟಲೀಕರಣದ ಬಗ್ಗೆ ಬೆಳಕು ಚೆಲ್ಲಿದರು. 

* ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಯಾಕಿಂದು ಆದ್ಯತೆಯ ವಿಷಯವಾಗಿ ಪರಿಗಣಿಸಬೇಕು?

ನಗರಗಳು ನಿರಂತರವಾಗಿ ಬೆಳೆಯುತ್ತಿವೆ. ಗ್ರಾಮೀಣ ಭಾಗದಿಂದ ದೊಡ್ಡ ಪ್ರಮಾಣದಲ್ಲಿ ಜನ ಉದ್ಯೋಗವನ್ನರಸಿ ದೊಡ್ಡ ನಗರಗಳತ್ತ ಬರ್ತಿದ್ದಾರೆ. ಸಹಜವಾಗಿ ಇದು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ. ಈ ಪ್ರವೃತ್ತಿ ಇದೇ ರೀತಿ ಮುಂದುವರಿದರೆ, 2030ರ ವೇಳೆಗೆ ಜಗತ್ತಿನ ಶೇ. 60 ಜನಸಂಖ್ಯೆಯು ನಗರಗಳಲ್ಲಿ ವಾಸಿಸಲಿದೆ. ಆಗ ನಗರಗಳಲ್ಲಿ  ಜನಸಂಖ್ಯೆ ಹೆಚ್ಚಲಿದ್ದು, ಮಧ್ಯಮ ವರ್ಗದ ಜನ ವಾಹನಗಳಿಗೆ ಹೆಚ್ಚೆಚ್ಚು ಹಣ ಖರ್ಚುಮಾಡುವರು. ಹಾಗಾಗಿ ಸಂಚಾರ ದಟ್ಟಣೆ ಜೊತೆಗೆ ಪರಿಸರ ಮಾಲಿನ್ಯವೂ ಹೆಚ್ಚಾಗಲಿದೆ. 

ಈಗಿರುವ ನಗರಸೌಕರ್ಯಗಳು ವಾಹನಗಳ ಸಂಖ್ಯೆಯಲ್ಲಿ ದೊಡ್ಡಮಟ್ಟದ ಹೆಚ್ಚಳವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿಲ್ಲ. ಹಾಗಾಗಿ ಸರ್ಕಾರಗಳು ನಗರ ಸಾರಿಗೆಯನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಿವೆ. ಅದಕ್ಕಾಗಿ ಹೊಸ ಬಿಸ್ನೆಸ್ ಮಾಡೆಲ್ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಪ್ರಯೋಗಿಸುವ ಮೂಲಕ,  ಜನರ ನಗರ-ಜೀವನಮಟ್ಟವನ್ನು ಸುಧಾರಿಸವ ಅಗತ್ಯವಿದೆ. ಬಹಳಷ್ಟು ಉದ್ಯಮಗಳು ಡಿಜಿಟಲೀಕರಣಗೊಂಡಿವೆ, ಈಗ ನಗರಗಳು ಆ ಬದಲಾವಣೆಯನ್ನು ಅಳವಡಿಸುವ ಅಗತ್ಯವಿದೆ.   

* ಅರ್ಬನ್ ಮೊಬಿಲಿಟಿಯ ಆ ಪರಿಕಲ್ಪನೆ ಸಾಕಾರವಾಗಬೇಕಾದರೆ ಪಾಲಿಸಿ ಮೇಕರ್ಸ್,  ಸರ್ಕಾರಿ ಅಧಿಕಾರಿಗಳು ಮತ್ತು ಕಂಪನಿಗಳು ಏನೆಲ್ಲಾ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು?

ಅರ್ಬನ್ ಮೊಬಿಲಿಟಿಯನ್ನು ಸುಧಾರಿಸಬೇಕಾದರೆ ಪ್ರಮುಖ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. 

ಮೊದಲನೆಯದಾಗಿ, ಇಲ್ಲಿನ ಇಕೋಸಿಸ್ಟಮ್ ಅಂದರೆ ಒಟ್ಟಾರೆ ವ್ಯವಸ್ಥೆ.  ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು  ಜೊತೆ ಸೇರಿ ಬಹುವಿಧದ ಸೇವೆಯನ್ನು ಒದಗಿಸಬೇಕು. ಸಾರಿಗೆ ಸಮಸ್ಯೆಗಳಿಗೆ ಪರಿಹಾರ ಕಂಡುಹುಡುಕುವುದು ಬರೇ ಸಾರಿಗೆ ಸಂಸ್ಥೆಗಳ ಜವಾಬ್ದಾರಿಯಲ್ಲ. ಪಾಲಿಸಿ ಮೇಕರ್ಸ್ ಸಂಬಂಧಪಟ್ಟವರನ್ನು ಒಟ್ಟು ಸೇರಿಸಿ ಇದಕ್ಕೆ ಇತಿಶ್ರೀ ಹಾಡಬೇಕು. ಇದು ಪರಸ್ಪರ ಸಹಭಾಗಿತ್ವ, ಸಹಕಾರ, ಸಮನ್ವಯತೆ ಬಯಸುವ ಕೆಲಸ.  

ಎರಡನೆಯದಾಗಿ, ತಂತ್ರಜ್ಞಾನ. ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ನಗರಗಳಲ್ಲಿ ಜನರ ಓಡಾಟದ ಸ್ವರೂಪ ಬಹಳ ದೊಡ್ಡ ಮಟ್ಟದಲ್ಲಿ ಬದಲಾಗಿದೆ. ತಂತ್ರಜ್ಞಾನವು ಟ್ರಾಫಿಕ್ನ್ನು ನಿಯಂತ್ರಿಸುವ ಜೊತೆಗೆ, ಪ್ರಯಾಣಿಕರು ಮೊಬೈಲ್ ಮೂಲಕವೇ ತಮ್ಮ ಓಡಾಟದ ಪೂರ್ವತಯಾರಿ ಮಾಡುವಷ್ಟು ಸವಲತ್ತು ಒದಗಿಸಿದೆ. ಮುಖ್ಯವಾಗಿ ಹಣ ಪಾವತಿ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವ ಮೂಲಕ, ಕ್ಯೂ-ರಹಿತ ಮತ್ತು ಸೌಕರ್ಯಗಳಿಗೆ ಹಣ ಖರ್ಚು ಮಾಡದೇ,  ನಗರಗಳಲ್ಲಿ ಸಾರ್ವಜನಿಕ ಸಂಚಾರವನ್ನು ಸರಳೀಕರಿಸಲಾಗುತ್ತಿದೆ. ಈಗಿರುವ ಕಾಂಟಾಕ್ಟ್ಲೆಸ್ ಕಾರ್ಡ್, ಕ್ಯೂಆರ್ ಕೋಡ್ ಮತ್ತು ಫೇಶಿಯಲ್ ಪೇಮೆಂಟ್ಸ್ ಆಧಾರಿತ ಓಪನ್ ಲೂಪ್ ತಂತ್ರಜ್ಞಾನವು ನಗರಗಳಲ್ಲಿ ಜನರ ಸಂಚಾರದ ಸ್ವರೂಪವನ್ನು ಬದಲಿಸಿದೆಯಲ್ಲದೇ, ಸಮಯ ಉಳಿಸುವ ಜೊತೆಗೆ ಮತ್ತು ನಿಯಂತ್ರಣವನ್ನೂ ಹೊಂದಿದೆ.

ಮೂರನೆಯದಾಗಿ, ಪರ್ಯಾಯ ಸಂಚಾರ ವ್ಯವಸ್ಥೆ. ಬಹುವಿಧದ ಸಾರಿಗೆ ವ್ಯವಸ್ಥೆಯೆಂದರೆ ರೈಲು, ಮೆಟ್ರೋ,  ಬಸ್ ಮತ್ತು ಟ್ರಾಮ್ವೇಗಳ ವೆಲ್-ಕನೆಕ್ಟೆಡ್ ನೆಟ್ವರ್ಕ್. ಜೊತೆಗೆ ಶೇರ್ಡ್ ರೈಡ್ಸ್, ಆನ್-ಡಿಮ್ಯಾಂಡ್ ಸಂಚಾರ ಮೊಬಿಲಿಟಿ ಸೇವೆಗಳ ಲಭ್ಯತೆಯೂ ಮುಖ್ಯ.


* ಸಾರಿಗೆ ಕ್ಷೇತ್ರದಲ್ಲಿ ಭಾರತದ ಪ್ರಗತಿ ಹೇಗಿದೆ?
ಸದ್ಯದ ನಗರೀಕರಣದ ವೇಗವನ್ನು  ನೋಡಿದಾಗ, ಭಾರತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ನೆಚ್ಚಿಕೊಳ್ಳಬೇಕು.  2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಆಯ್ಕೆಯಾದ ಬಳಿಕ,  ಸ್ಮಾರ್ಟ್‌ ಸಿಟಿಯ ದೂರದೃಷ್ಟಿಯೊಂದಿಗೆ ನಗರ ಕೇಂದ್ರಿತ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಲಾಗಿದೆ. ನೂರಕ್ಕಿಂತಲೂ ಹೆಚ್ಚು  ನಗರಗಳನ್ನು ಸ್ಮಾರ್ಟ್‌ಸಿಟಿ ಮಹಾತ್ವಾಕಾಂಕ್ಷಿ ಯೋಜನೆಯಡಿ  ತರಲಾಗಿದ್ದು, 1 ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆಯಿರುವ ಸುಮಾರು ಐನೂರು ನಗರಗಳ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡಲಾಗುತ್ತಿದೆ. ಮೂಲಭೂತ ಸೌಕರ್ಯಗಳ ಆಧುನಿಕರಣ ನಡೆಯುತ್ತಿದೆ. 

ಹೊಸ ಸಾರಿಗೆ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ದೆಹಲಿಯಲ್ಲಿ ಮೆಟ್ರೋ ವ್ಯವಸ್ಥೆ ಯಶಸ್ವಿಯಾದ ಬಳಿಕ ಇನ್ನಿತರ ನಗರಗಳು ಅದನ್ನು ಜಾರಿಗೊಳಿಸುತ್ತಿವೆ. ಸೌಕಾರ್ಯಾಭಿವೃದ್ಧಿಗೆ ಹರಿದು ಬರುತ್ತಿರುವ ಬಂಡವಾಳ, ರಾಜ್ಯಗಳ ನಗರ ಸಾರಿಗೆ ನೀತಿ ಮತ್ತು  ಗುಜರಾತ್, ಮಹಾರಾಷ್ಟ್ರ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಆಗುತ್ತಿರುವ ಸಾಮರ್ಥ್ಯಭಿವೃದ್ಧಿ ಯೋಜನೆಗಳು  ಭಾರತದ ಸಾರಿಗೆ ವ್ಯವಸ್ಥೆಯನ್ನು ರೂಪಾಂತರಗೊಳಿಸುತ್ತಿವೆ. ಬೆಳೆಯುತ್ತಿರುವ ಜನಸಂಖ್ಯೆಯ ಬೇಡಿಕೆಗೆ ಅನುಗುಣವಾಗಿ ಹಸಿರು ನಗರಗಳಿಗೆ ಉತ್ತೇಜನ ನೀಡುವುದೇ ಇದರ ಧ್ಯೇಯವಾಗಿದೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ಅಚ್ಚರಿ ಕಾದಿದೆ.

Ecosystem Technology  Commuting Alternatives Hold Key to Urban Mobility Chitrajit Chakrabarti

* ನಗರ ಸಾರಿಗೆ ವ್ಯವಸ್ಥೆಯ ಡಿಜಿಟಲೀಕರಣಕ್ಕಿರುವ ಸವಾಲುಗಳೇನು? ಓ-ಸಿಟಿ ಇದನ್ನು ಹೇಗೆ ಪರಿಹರಿಸಬಲ್ಲುದು?

ತಂತ್ರಜ್ಞಾನದ ದೃಷ್ಟಿಕೋನದಿಂದ ನೋಡುವುದಾದರೆ, ಸರ್ಕಾರಿ ಸ್ವಾಮ್ಯದ ಸಾರಿಗೆ ವ್ಯವಸ್ಥೆಯಲ್ಲಿ ಓಪನ್ಲೂಪ್ ಸೌಲಭ್ಯವಿಲ್ಲದಿರುವುದೇ ದೊಡ್ಡ ಸವಾಲು. ಎಲ್ಲರಿಗೂ ಹೊಂದುವಂತಹ ವ್ಯವಸ್ಥೆಯ ಹೊಂದಬೇಕಾದರೆ, ನಾವು ಓಪನ್ಲೂಪ್ ಹಣಪಾವತಿ ಸೌಲಭ್ಯವನ್ನು ಒದಗಿಸಬೇಕಾಗುತ್ತದೆ. ಆ ಮೂಲಕ ಬಳಕೆದರರಿಗೆ ಸುಲಭವೆನಿಸುವ, ಅಂದರೆ ಕ್ರೆಡಿಟ್. ಡೆಬಿಟ್ ಕಾರ್ಡ್, ವ್ಯಾಲೆಟ್ಸ್ಗಳಂತಹ ಆಯ್ಕೆಗಳನ್ನು ನೀಡಬೇಕು. ಅದಕ್ಕಾಗಿಯೇ,ವಿವಿಧ ಪೇಮೆಂಟ್ ನೆಟ್ವರ್ಕ್ಗಳ ಜೊತೆ ಕೈಜೋಡಿಸುವ ಮೂಲಕ ಬಳಕೆದಾರರಿಗೆ ಬೇಕಾಗುವಂಥ ಓಪನ್ಲೂಪ್ ಪೇಮೆಂಟ್ ವ್ಯವಸ್ಥೆಯನ್ನು ಓ-ಸಿಟಿ ಒದಗಿಸುತ್ತದೆ.

ನಗರ ಸಾರಿಗೆಯ ಡಿಜಿಟಲ್ ರೂಪಾಂತರ ಬರೇ ತಂತ್ರಜ್ಞಾನಕ್ಕೆ ಸೀಮಿತವಾದುದಲ್ಲ. ಇದು ಸಾಂಸ್ಕೃತಿಕ ಪರಿವರ್ತನೆಯ ಪ್ರತೀಕ. ತಂತ್ರಜ್ಞಾನ ಮತ್ತು ಅದನ್ನು ಕಾರ್ಯಗತಗೊಳಿಸುವ ಕಂಪನಿ ಎಂಬ ನೆಲೆಯಲ್ಲಿ , ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳು ಮತ್ತು ಬಳಕೆದಾರರಿಗೆ ಈ ಬಗ್ಗೆ ತರಬೇತಿ ನೀಡಬೇಕಾಗುತ್ತದೆ ಎಂಬುವುದು ನಮಗೆ ಗೊತ್ತು. ನೋಟು ಅಮಾನ್ಯೀಕರಣದ ಬಳಿಕ ಭಾರತದ ಜನರು ದಿನನಿತ್ಯದ ಅವಶ್ಯಕತೆಗಳಿಗೆ ಡಿಜಿಟಲ್ ಪೇಮೆಂಟ್ ರೂಢಿಸಿಕೊಂಡಿದ್ದಾರೆ. 

ಸಹಭಾಗಿತ್ವ ಇನ್ನೊಂದು ಸವಾಲು. ಸಮನ್ವಯವಿಲ್ಲದಿದ್ದರೆ ಸಿಟಿಗಳು ಸ್ಮಾರ್ಟ್ ಆಗಲು ಸಾಧ್ಯವಿಲ್ಲ. ಆಗ ಸರ್ಕಾರ ಪ್ರಮುಖ ಪಾತ್ರವಹಿಸಬೇಕಾಗುತ್ತದೆ. . ಸಮನ್ವಯ ಸಾಧನೆಯು ಯಶಸ್ಸಿನ ಮೂಲಮಂತ್ರ. ಕೋವಿಡ್-19 ಸಾಂಕ್ರಾಮಿಕವು ನಗರ ಸಂಚಾರ ಮತ್ತು ನಗರ ಯೋಜನೆಗಳನ್ನು ಪುನರ್ವಿಮರ್ಶಿಸುವಂತೆ ಮಾಡಿದೆ. ಆದುದರಿಂದ ಸಮೂಹ ಸಾರಿಗೆ ಮುಂದಿನ ದಿನಗಳಲ್ಲಿ ವೇಗವಾಗಿ ಡಿಜಿಟಲೀಕರಣಗೊಳ್ಳಲಿದೆ.

* 5 ವರ್ಷಗಳ ಬಳಿಕದ ನಗರ ಸಾರಿಗೆ ಕುರಿತು ಓ-ಸಿಟಿ ದೂರದೃಷ್ಟಿ ಏನು?

ನಮ್ಮದು ಸ್ಮಾರ್ಟ್, ಡಿಜಿಟಲ್ ಮತ್ತು ಕನೆಕ್ಟೆಡ್ ಸಿಟಿ ಪರಿಕಲ್ಪನೆ. ಒಬ್ಬ ನಾಗರಿಕ, ಕೈಯಲ್ಲಿ ಕ್ಯಾಶ್ ಇಲ್ಲದೆಯೂ, ಬಟನ್ನ್ನು ಟಚ್, ಟ್ಯಾಪ್ ಅಥ್ವಾ ಸ್ವೈಪ್ ಮಾಡುವ ಮೂಲಕ ಮುಕ್ತವಾಗಿ ಪಯಣಿಸುವಂತಾಗಬೇಕು. ಮೊಬೈಲ್ ಆಧಾರಿತ ಪ್ರಯಾಣದ ಪ್ಲಾನಿಂಗ್, ಡಿಜಿಟಲ್ ಟಿಕೆಟಿಂಗ್ ಮತ್ತು ಪೇಮೆಂಟ್ ವ್ಯವಸ್ಥೆಯು ನಿತ್ಯಜೀವನದ ಅವಿಭಾಜ್ಯ ಅಂಗವಾಬೇಕು.

ಈ ಪ್ರಯಾಣ ವ್ಯವಸ್ಥೆ ಕೇವಲ ನಗರರಗಳಿಗೆ ಮಾತ್ರ ಸೀಮಿತವಾಗಬಾರದು. ಅದು ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಬೆಸೆಯಬೇಕು. ಅದಕ್ಕಾಗಿಯೇ ನಾವು ಸಣ್ಣ ನಗರಗಳನ್ನು ಆಯ್ಕೆ ಮಾಡಿ, ಅಲ್ಲಿನ ಜನಸಂಖ್ಯೆಗೆ ಪೂರಕವಾದ ಸೇವೆ ನೀಡಲು ಸೂಕ್ತವಾದ ತಂತ್ರಜ್ಞಾನ ಒದಗಿಸುತ್ತಿದ್ದೇವೆ. ತಂತ್ರಜ್ಞಾನವು ಹೊಸ ಅನುಭವಗಳಿಗೆ ನಾಂದಿಹಾಡುತ್ತದೆ.  ಮೊಬಿಲಿಟಿ ಕ್ಷೇತ್ರಕ್ಕೆ ಸೂಪರ್‌ಆಪ್‌ಗಳು ಪ್ರವೇಶಿಸುತ್ತಿವೆ. ಮುಕ್ತ- ಎಪಿಐಗಳ ಮೂಲಕ ಯಾವುದೇ ವ್ಯವಸ್ಥೆ ಜೊತೆಗೂ ಸಂವಹನ ನಡೆಸಬಹುದಾಗಿದೆ.. ಒಂದೇ ಆಪ್ ಮೂಲಕ ಎಲ್ಲಾ ಸೇವೆಗಳನ್ನು ನಿರ್ವಹಿಸಬಹುದಾಗಿದೆ. ‘ಡೇಟಾ’ ಎಂಬ ಶಕ್ತಿಕೇಂದ್ರವು ನಿಮ್ಮ ಪ್ರೊಫೈಲ್ಗೆ ಅನುಗುಣವಾಗಿ ದರ/ರಿಯಾಯಿತಿಗಳನ್ನು ನಿಗದಿಪಡಿಸುವ ಮಟ್ಟಿಗೆ ಬೆಳೆದಿದೆ. ಪ್ರೆಡಿಕ್ಟಿವ್ ಅನಾಲಿಸಿಸ್ ಮತ್ತು ಇಂಟೆಲಿಜೆನ್ಸ್ ಪ್ರಯಾಣವನ್ನು ವಿಶಿಷ್ಟ ಅನುಭವವಾಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ.   

Follow Us:
Download App:
  • android
  • ios