ವಾಷಿಂಗ್ಟನ್(ಜೂ.08): ಮತ್ತೆ ಚಂದ್ರನ ಮೇಲೆ ಮಾನವನನ್ನು ಇಳಿಸಲು ನಾಸಾ ಸಕಲ ಸಿದ್ಧತೆ ನಡೆಸಿದೆ. 2024ರಲ್ಲಿ ಚಂದ್ರನೆಡೆಗೆ ಮಾನವ ಸಾಗುವುದು ಬಹುತೇಕ ನಿಶ್ಚಿತವಾಗಿದೆ.

 ಆದರೆ ಚಂದ್ರನಡೆಗೆ ದೃಷ್ಟಿ ನೆಟ್ಟಿರುವ ನಾಸಾಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಶಾಕ್ ನೀಡಿದ್ದಾರೆ. ಚಂದ್ರ ಮಂಗಳ ಗ್ರಹದ ನೈಸರ್ಗಿಕ ಉಪಗ್ರಹವಾಗಿದ್ದು, ನಾಸಾ ಕೇವಲ ಚಂದ್ರ ಮಾತ್ರವಲ್ಲದೇ ಮಂಗಳ ಗ್ರಹಕ್ಕೂ ಮಾನವನನ್ನು ಕಳುಹಿಸುವ ಯೋಜನೆ ರೂಪಿಸಬೇಕು ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಅಮೆರಿಕ ಸರ್ಕಾರ ನಾಸಾ ಯೋಜನೆಗಳಿಗಾಗಿ ಭಾರೀ ಹಣ ವ್ಯಯ ಮಾಡುತ್ತಿದ್ದು, ನಾಸಾ ಕಾಏವಲ ಚಂದ್ರ ಮಾತ್ರವಲ್ಲದೇ ಮಂಗಳ ಗ್ರಹಕ್ಕೂ ಮಾನವನನ್ನು ಕಳುಹಿಸುವ ಯೋಜನೆ ರೂಪಿಸಬೇಕು ಎಂದು ಟ್ರಂಪ್ ಹೇಳಿದ್ದಾರೆ.

ಆದರೆ ತಮ್ಮ ಟ್ವೀಟ್ ನಲ್ಲಿ ಚಂದ್ರನನ್ನು ಮಂಗಳ ಗ್ರಹದ ಉಪಗ್ರಹ ಎಂದು ಹೇಳುವ ಮೂಲಕ ಖೂದ್ದು ಪೇಚಿಗೆ ಸಿಲುಕಿದ್ದಲ್ಲದೇ ನಾಸಾವನ್ನೂ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಟ್ರಂಪ್ ನೆರವಿಗೆ ಧಾವಿಸಿರುವ ನಾಸಾ ಮುಖ್ಯಸ್ಥ ಜಿಮ್ ಬ್ರಿಡೆನ್ಸಟೈನ್, ಅಧ್ಯಕ್ಷರು ಚಂದ್ರನನ್ನು ನೆಲೆ ಮಾಡಿಕೊಂಡು ಅಲ್ಲಿಂದ ಮಂಗಳ ಗ್ರಹ ತಲುಪುವ ಕುರಿತು ಮಾತನಾಡಿದ್ದಾರೆ ಎಂದು ಸಮಜಾಯಿಷಿ ನೀಡಿದ್ದಾರೆ.

ಆದರೆ ಟ್ರಂಪ್ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ನಾಸಾ ಸಮಜಾಯಿಷಿಯನ್ನು ಎಲ್ಲರೂ ವ್ಯಂಗ್ಯವಾಡಿದ್ದಾರೆ.