ನಟ ಶಾರುಖ್ ಬಳಿ ಇದೆಯಾ 20 ಕೋಟಿ ಮೌಲ್ಯದ ಬುಗಾಟಿ ವೆಯ್ರಾನ್ ಕಾರು?

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 15, Jul 2018, 5:00 PM IST
Does SRK Really Own The Bugatti Veyron? Here's What The Actor Says
Highlights

ಬಾಲಿವುಡ್ ನಟ ಶಾರುಖ್ ಖಾನ್ 20 ಕೋಟಿ ಮೌಲ್ಯದ ಬುಗಾಟಿ ವೆಯ್ರಾನ್ ಕಾರು ಖರೀಧಿಸಿದ್ದಾರ? ಇಂತದೊಂದು ಪ್ರಶ್ನೆ ಅಭಿಮಾನಿಗಳಲ್ಲಿ ಹಲವು ದಿನಗಳಿಂದ ಹರಿದಾಡುತ್ತಿದೆ. ಹಲವು ಇದೆ ಎಂದರೆ, ಇನ್ನು ಕೆಲವರು ಇಲ್ಲಾ ಎಂದಿದ್ದಾರೆ. ನಿಜಕ್ಕೂ ಈ ದುಬಾರಿ ಕಾರು ಶಾರುಖ್ ಬಳಿ ಇದೆಯಾ? ಈ ಪ್ರಶ್ನೆಗೆ ಸ್ವತಃ ಶಾರುಖ್ ಖಾನ್ ಉತ್ತರಿಸಿದ್ದಾರೆ.


ಮುಂಬೈ(ಜು.15): ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಬಳಿ ಹಲವು ದುಬಾರಿ ಕಾರುಗಳಿವೆ. ಕೋಟಿ ಕೋಟಿ ಮೌಲ್ಯದ ಕಾರುಗಳು ರೋಮ್ಯಾನ್ಸ್ ಕಿಂಗ್ ಶಾರುಖ್‌ಗೆ ಹೊಸದಲ್ಲ. ಆದರೆ ಶಾರುಖ್ ಖಾನ್ ಬಳಿ ಬುಗಾಟಿ ವೆಯ್ರಾನ್ ಕಾರು ಇದೆಯಾ? ಇಲ್ವಾ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಪದೇ ಪದೇ ಕಾಡುತ್ತಿತ್ತು.

ಬುಗಾಟಿ ವೆಯ್ರಾನ್ ಕಾರಿನ ಬೆಲೆ 2010ರಲ್ಲಿ 16 ಕೋಟಿ. ಸದ್ಯ ಇದರ ಬೆಲೆ 20 ಕೋಟಿ ರೂಪಾಯಿಗೂ ಅಧಿಕವಾಗಿದೆ. 8.0 ಲೀಟರ್ ಇಂಜಿನ್ ಹೊಂದಿರೋ ಈ ಕಾರು ಮೋಸ್ಟ್ ಪವರ್‌ಫುಲ್ ಕಾರು ಎಂದೇ ಪ್ರಖ್ಯಾತಿ ಹೊಂದಿದೆ.

1184 ಬಿಹೆಚ್‌ಪಿ ಪವರ್, 1500 ಎನ್‌ಎಮ್ ಆಫ್ ಪೀಕ್ ಟಾರ್ಕ್ಯೂ ಹೊಂದಿದೆ. ವಿಶೇಷ ಅಂದರೆ ಇದರ ಗರಿಷ್ಠ ವೇಗ 431 ಕೀಮಿ ಪ್ರತಿ ಗಂಟೆಗೆ. ಫೋಕ್ಸ್‌ವ್ಯಾಗನ್ ಕಾರು ಸಂಸ್ಥೆಯ ಈ ಲಕ್ಸುರಿ ಕಾರನ್ನ ಖರೀದಿಸುವುದು ನಟ ಶಾರುಖ್ ಖಾನ್‌ ದುಬಾರಿಯೇನಲ್ಲ. ಆದರೆ ಪ್ರಶ್ನೆ ಇದಲ್ಲ, ಶಾರುಖ್ ಬಳಿ ಈ ಕಾರು ಇದೆಯಾ? ಇಲ್ವಾ ಅನ್ನೋದು.

ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಆಸ್ಕ್ ಶಾರುಖ್ ಪ್ರಶ್ನೆಗೆ ಅಭಿಮಾನಿಯೊಬ್ಬ ಬುಗಾಟಿ ವೆಯ್ರಾನ್ ಕಾರಿನ ಕುರಿತು ಪ್ರಶ್ನಿಸಿದ್ದಾನೆ. ತಕ್ಷಣವೇ ಶಾರುಖ್ ಊಹಾಪೋಗಳಿಗೆ ತೆರೆಎಳೆದಿದ್ದಾರೆ. ತನ್ನಲ್ಲಿ ಬುಗಾಟಿ ವೆಯ್ರಾನ್ ಕಾರು ಇಲ್ಲ ಎಂದು ಉತ್ತರಿಸಿದ್ದಾರೆ. 

ಹಲವು ದಿನಗಳಿಂದ ಅಭಿಮಾನಿಗಳನ್ನ ಕಾಡುತ್ತಿರುವ ಪ್ರಶ್ನೆಗೆ ಕೊನೆಗೂ ಶಾರುಖ್ ಖಾನ್ ಉತ್ತರ ಕೊಟ್ಟಿದ್ದಾರೆ. ಈ ಮೂಲಕ ಶಾರುಖ್ ಬಳಿ ಬುಗಾಟಿ ವೆಯ್ರಾನ್ ಕಾರು ಇದೆ ಅನ್ನೋ ಗಾಳಿ ಸುದ್ದಿಗೆ ತೆರೆ ಬಿದ್ದಿದೆ.

loader