ಬೆಂಗಳೂರು(ಸೆ.17): ಪಿಯಾಗೋ ಇಂಡಿಯಾ ಮೋಟಾರು ಕಂಪೆನಿ ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಸೆಪ್ಟೆಂಬರ್ ನಿಂದ ಅಕ್ಟೋಬರ್‌ವರೆಗೆ ಪಿಯಾಗೋ ಈ ಆಫರ್ ನೀಡಿದೆ. 

5ಎಕ್ಸ್ ಫನ್ ಆಫರ್ ಹೆಸರಿನಲ್ಲಿ ಹೊಸ ಬೈಕ್ ಖರೀದಿಸೋ ಗ್ರಾಹಕರಿ ಭಾರಿ ರಿಯಾಯಿತಿ ನೀಡಿದೆ. ವೆಸ್ಪಾ ಹಾಗೂ ಎಪ್ರಿಲಿಯಾ ಸ್ಕೂಟರ್ 10,000 ರೂಪಾಯಿಗಳ ಹೆಚ್ಚಿನ ಆಫರ್ ನೀಡಿದೆ. ಇಷ್ಟೇ ಅಲ್ಲ 2 ವರ್ಷಗಳ ವಾರೆಂಟಿ ಜೊತೆಗೆ 3 ವರ್ಷಗಳ ಹೆಚ್ಚುವರಿ ವಾರೆಂಟಿ, ಒಟ್ಟು 5 ವರ್ಷಗಳ ವಾರೆಂಟಿ ಕೂಡ ಸಿಗಲಿದೆ. 

ಒಂದು ವರ್ಷದ ಇನ್ಯುರೆನ್ಸ್ ಗ್ರಾಹಕರು ಪಾವತಿ ಮಾಡಿದರೆ ಸಾಕು, ಇನ್ನು 4 ವರ್ಷದ ವಿಮೆಯನ್ನ ಕಂಪೆನಿ ಪಾವತಿಸಲಿದೆ. ಈ ಮೂಲಕ 5 ವರ್ಷಗಳ ಇನ್ಸುರೆನ್ಸ್ ನಿಮ್ಮ ಕೈಸೇರಲಿದೆ. ಈ ಮೂಲಕ 4,000 ರೂಪಾಯಿ ಉಳಿತಾಯವಾಗಲಿದೆ.

ಗ್ರಾಹಕರಿಗೆ ಒಟ್ಟು 3 ವರ್ಷಗಳ ಆನ್ ರೋಡ್ ಫ್ರೀ ಸರ್ವೀಸ್  ಸೇವೆ ಕೂಡ ಸಿಗಲಿದೆ. ಇನ್ನು ಪೇಟಿಎಂನಲ್ಲಿ 5000 ಹೆಚ್ಚುವರಿ ಆಫರ್ ಅಥವಾ 3,999 ಡೌನ್ ಪೇಮೆಂಟ್‌ಗೆ ಅವಕಾಶವಿದೆ. ಅಕ್ಟೋಬರ್‌ವರೆಗೆ ಈ ಆಫರ್ ಇರಲಿದೆ. ಹೀಗಾಗಿ ವೆಸ್ಪಾ ಹಾಗೂ ಎಪ್ರಿಲಿಯಾ ಸ್ಕೂಟರ್ ಖರೀದಿಸೋ ಗ್ರಾಹಕರು ಈ ಆಫರ್‌ನತ್ತ ಚಿತ್ತ ಹರಿಸಬಹುದು.