ಐಟಿ ಆಕ್ಟ್‌ಗೆ ಪರ್ಯಾಯವಾಗಿ ಡಿಜಿಟಲ್ ಇಂಡಿಯಾ ಬಿಲ್: ರಾಜೀವ್ ಚಂದ್ರಶೇಖರ್
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ 23 ವರ್ಷಗಳಷ್ಟು ಹಳೆಯದಾದ 2000 ಇಸವಿಯ ಮಾಹಿತಿ ತಂತ್ರಜ್ಞಾನ ಕಾಯಿದೆಯನ್ನು ಬದಲಿಸಲು ಮುಂದಾಗಿದೆ. ಐಟಿ ಆಕ್ಟ್‌ಗೆ ಪರ್ಯಾಯವಾಗಿ ಡಿಜಿಟಲ್ ಇಂಡಿಯಾ ಬಿಲ್ ತರಲಾಗುತ್ತಿದ್ದು, ಈ ಕುರಿತು ಮೊದಲ ಸಮಾಲೋಚನೆ ಸಭೆ ಬೆಂಗಳೂರಿನಲ್ಲಿ ನಡೆಯಿತು.
ಬೆಂಗಳೂರು (ಮಾ.09): ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ 23 ವರ್ಷಗಳಷ್ಟು ಹಳೆಯದಾದ 2000 ಇಸವಿಯ ಮಾಹಿತಿ ತಂತ್ರಜ್ಞಾನ ಕಾಯಿದೆಯನ್ನು ಬದಲಿಸಲು ಮುಂದಾಗಿದೆ. ಐಟಿ ಆಕ್ಟ್‌ಗೆ ಪರ್ಯಾಯವಾಗಿ ಡಿಜಿಟಲ್ ಇಂಡಿಯಾ ಬಿಲ್ ತರಲಾಗುತ್ತಿದ್ದು, ಈ ಕುರಿತು ಮೊದಲ ಸಮಾಲೋಚನೆ ಸಭೆ ಬೆಂಗಳೂರಿನಲ್ಲಿ ನಡೆಯಿತು. ಡಿಜಿಟಲ್ ಇಂಡಿಯಾ ಮಸೂದೆಯ ಮೂಲ ಚೌಕಟ್ಟು, ಮಾರ್ಗದರ್ಶಿ ತತ್ವಗಳನ್ನು ಪ್ರಸ್ತುತ ಪಡಿಸುವ ಸಲುವಾಗಿ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸಮಾಲೋಚನೆ ಸಭೆ ನಡೆಸಿದರು.
ಸಭೆಯಲ್ಲಿ ಐಟಿ ಕ್ಷೇತ್ರದ ಗ್ರಾಹಕರು, ವಕೀಲರು ಮತ್ತು ಟೆಕ್ ಉದ್ಯಮಿಗಳು, ಐಟಿ ಸ್ಟಾರ್ಟಪ್ ಸ್ಥಾಪಕರು ಸೇರಿದಂತೆ ಅನೇಕರು ಸಮಾಲೋಚನೆ ಸಭೆಯಲ್ಲಿ ಭಾಗಿಯಾಗಿದ್ದರು. ಸಮಾಲೋಚನೆ ಆರಂಭಕ್ಕೂ ಮುನ್ನ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಡಿಜಿಟಲ್ ಇಂಡಿಯಾ ಬಿಲ್ ಕುರಿತು ಹಲವು ವಿಚಾರಗಳನ್ನ ತಿಳಿಸಿದರು. ಡಿಜಿಟಲ್ ಇಂಡಿಯಾ ಕಾಯ್ಧೆ ಕುರಿತು ಕೇಂದ್ರ ಸರ್ಕಾರ ಹೊಂದಿರಯವ ಉದ್ದೇಶಗಳ ಕುರಿತು ವಿವರಣೆ ಹಾಗೂ ಮಾಹಿತಿ ನೀಡಿದ್ರು. ಈ ಆಕ್ಟ್ ಹೇಗೆ ಕಾರ್ಯರೂಪಕ್ಕೆ ಬರುತ್ತದೆ ಇದರ ವ್ಯಾಪ್ತಿ ಏನು ಅನ್ನೋದರ ಕುರಿತು ಪಿಪಿಟಿ ಪ್ರೆಸೆಂಟೇಷನ್ ನೀಡಿದರು.
ರಾಜ್ಯದಲ್ಲಿ ಮತ್ತೆ ಮೋದಿ ಹವಾ: ಮಾ.12ರಂದು ಜಗತ್ತಿನ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಉದ್ಘಾಟನೆ
ಪ್ರಸ್ತುತ ಕಾಲಘಟ್ಟದಲ್ಲಿ ಐಟಿ ಆಕ್ಟ್‌ನ ಸವಾಲುಗಳ ಬಗ್ಗೆ ತಿಳುವಳಿಕೆ ಅಗತ್ಯವಾಗಿದೆ. ಈಗ 850 ಮಿಲಿಯನ್ ಭಾರತೀಯರು ಇಂಟರ್‌ನೆಟ್ ಬಳಕೆ ಮಾಡ್ತಿದ್ದಾರೆ. ಬಳಕೆದಾರರ ಖಾತೆಗಳು ಹ್ಯಾಕ್ ಆಗಿ ತೊಂದರೆ ಅನುಭವಿಸ್ತಿದ್ದಾರೆ. ಸೈಬರ್ ಕ್ರಿಮಿನಲ್ ಆಕ್ಟಿವಿಟಿ ಹೆಚ್ಚಾಗಿದೆ. ನೂತನ ಡಿಜಿಟಲ್ ಕಾನೂನು ಈಗಿನ ಮಾರ್ಕೆಟ್ ಟ್ರೆಂಡ್‌ಗೆ ತಕ್ಕನಾಗಿ ರೂಪಿಸಲಾಗಿದೆ. 10 ಪ್ರಮುಖ ಅಂಶಗಳನ್ನ ಡಿಜಿಟಲ್ ಇಂಡಿಯಾ ಆಕ್ಟ್ ಒಳಗೊಂಡಿರುತ್ತೆ ಎಂದರು. ಭಾರತೀಯ ಇಂಟರ್‌ನೆಟ್ ಬಳಕೆದಾರಿಗೆ ಹೊರೆ ಹಾಗೂ ತೊಂದರೆ ಆಗಬಾರದು.
ಹೀಗಾಗಿ ಸುರಕ್ಷಿತ ಹಾಗೂ ನಂಬಿಕೆಗೆ ಅರ್ಹವಾದ ವಿಚಾರಗಳನ್ನು ಡಿಜಿಟಲ್ ಇಂಡಿಯಾ ಆಕ್ಟ್‌ನಲ್ಲಿ ಸೇರಿಸಲಾಗಿದೆ ಎಂದರು ಸಚಿವರು ತಿಳಿಸಿದರು. ಐಟಿ ಕಾಯಿದೆಯಡಿಯಲ್ಲಿ ಇಂಟರ್ನೆಟ್ ಮಧ್ಯವರ್ತಿಗಳಿಗೆ ಕಾನೂನು ವಿನಾಯಿತಿಗಳಾಗಿವೆ. ಡಿಜಿಟಲ್ ಇಂಡಿಯಾ ಆಕ್ಟ್ ಇಂಟರ್ನೆಟ್ ಅನ್ನು ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತವಾಗಿಸುವ ಕಲ್ಪನೆಯೊಂದಿಗೆ ಬದಲಿಸುವ ಗುರಿಯನ್ನು ಹೊಂದಿದೆ ಎಂದು ಸಚಿವರು ತಿಳಿಸಿದರು. ದತ್ತಾಂಶ ಸಂರಕ್ಷಣಾ ಮಸೂದೆ, ಆನ್‌ಲೈನ್ ಗೇಮಿಂಗ್ ನಿಯಮಗಳು ಇತ್ಯಾದಿಗಳ ಪ್ರಕ್ರಿಯೆ ಪೂರ್ಣಗೊಳ್ಳಲು ಸರ್ಕಾರ ಕಾಯುತ್ತಿದೆ.
ಸಚಿವ ನಾರಾಯಣ ಗೌಡ ಮಾ.21ಕ್ಕೆ ಕಾಂಗ್ರೆಸ್ ಸೇರ್ಪಡೆ ಅಧಿಕೃತ
ಬಳಿಕ ಡಿಜಿಟಲ್ ಇಂಡಿಯಾ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ. ಇದು ಮುಂದಿನ ದಶಕದಲ್ಲಿ ಜಾಗತಿಕ ಗುಣಮಟ್ಟದ ಕಾನೂನಾಗಲಿದೆ. ಡಿಜಿಟಲ್ ಇಂಡಿಯಾ ಕಾಯ್ದೆಯ ಕರಡು ಮಸೂದೆಯು ಮಾರ್ಚ್ 28 ಅಥವಾ 29 ರೊಳಗೆ ಸಿದ್ಧವಾಗುವ ನಿರೀಕ್ಷೆಯಿದೆ. ಸಚಿವರ ಪ್ರಕಾರ ಮುಂದಿನ ಎರಡು ವಾರಗಳಲ್ಲಿ ಎರಡು ಹೆಚ್ಚುವರಿ ಸಮಾಲೋಚನೆ ಸಭೆ ನಡೆಸಲಾಗುವುದು, ಕರಡು ಮಸೂದೆ ಹೊರಬಂದ ನಂತರ, ವಿವಿಧ ಪಕ್ಷಗಳಿಂದ ಪ್ರತಿಕ್ರಿಯೆ ಮತ್ತು ಸಮಾಲೋಚನೆಗಾಗಿ 90 ದಿನಗಳ ಅವಧಿ ಇರುತ್ತದೆ. ಸದ್ಯದ ಮಾಹಿತಿ ಪ್ರಕಾರ ಜೂನ್ 29 ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.