ಬೆಂಗಳೂರು(ಜು.23): ಭಾರತದದಲ್ಲಿ ಸಣ್ಣ ಹಾಗೂ ಕಡಿಮೆ ಬೆಲೆ ಕಾರು ಹೆಚ್ಚು ಜನಪ್ರೀಯವಾಗಿದೆ. ಮಧ್ಯಮ ವರ್ಗದ ಜನರ ಕಾರಿನ ಕನಸನ್ನ ಈ ಕಾರುಗಳು ಸಾಕರಗೊಳಿಸಿದೆ. ಹೀಗೆ ಕಡಿಮೆ ಬೆಲೆಗಳ ಕಾರಿನಲ್ಲಿ ದಾಟ್ಸನ್ ರೆಡಿ ಗೋ ಕಾರು ಮುಂಚೂಣಿಯಲ್ಲಿದೆ.

ದಾಟ್ಸನ್ ರೆಡಿ ಗೋ ಬೇಸ್ ಕಾರಿನ ಬೆಲೆ ಕೇವಲ 2.50 ಲಕ್ಷ(ಎಕ್ಸ್ ಶೋರೂಂ). ಇತರ ಕಡಿಮೆ ಬೆಲೆಗಳ ಕಾರಿಗೆ ಹೋಲಿಸಿದರೆ ಇದಕ್ಕಿಂತ ಕಡಿಮೆ ಬೆಲೆ ಕಾರು ಇನ್ನೊಂದಿಲ್ಲ. ಮಾರುತಿ ಆಲ್ಟೋ 800 ಬೆಲೆ 2.51 ಲಕ್ಷ(ಎಕ್ಸ್ ಶೋರೂಂ). ಇನ್ನು ರೆನಾಲ್ಟ್ ಕ್ವಿಡ್ ಬೆಲೆ 2.67 ಲಕ್ಷ ರೂಪಾಯಿ(ಎಕ್ಸ್ ಶೋರೂಂ). 

ಸದ್ಯ ಭಾರತದಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿರೋ ಈ ಮೂರು ಕಾರುಗಳು ಬಾರಿ ಜನಪ್ರೀಯವಾಗಿದೆ.  ದಾಟ್ಸನ್ ರೆಡಿ ಗೋ ಕಾರು 800 ಸಿಸಿ ಇಂಜಿನ್ ಹೊಂದಿದೆ. 5 ಮಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿದೆ. ಟ್ರೆಂಡಿ ಕಲರ್‌ಗಳಲ್ಲೂ ದಾಟ್ಸನ್ ರೆಡಿ ಗೋ ಲಭ್ಯವಿದೆ.

222 ಲೀಟರ್ ಬೂಟ್ ಸ್ಪೇಸ್, ಅತ್ಯುತ್ತಮ ರೆಡ್ ರೂಮ್, 185ಎಂಎಂ ಗ್ರೌಂಡ್ ಕ್ಲೀಯರೆನ್ಸ್  ಹೊಂದಿರೋ ದಾಟ್ಸನ್ ರೆಡಿ ಗೋ ಪೆಟ್ರೋಲ್ ಕಾರು ಪ್ರತಿ ಲೀಟರ್‌ಗೆ 22.7 ಕೀಮಿ ಮೈಲೇಜ್ ನೀಡಲಿದೆ ಎಂದು ದಾಟ್ಸನ್ ಹೇಳಿದೆ.