ಶೀಘ್ರದಲ್ಲೇ ರಸ್ತೆಗಳಿಯಲಿದೆ ಕಡಿಮೆ ಬೆಲೆಯ ದಾಟ್ಸನ್ SUV ಕಾರು!

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 24, Jul 2018, 8:54 PM IST
Datsun confirms SUV for India
Highlights

ದಾಟ್ಸನ್ ಕಾರು ತಯಾರಿಕಾ ಸಂಸ್ಥೆ ಇದೀಗ ಎಸ್‌ಯುವಿ ಕಾರನ್ನ ಬಿಡುಗಡೆಗೊಳಿಸಲು ಸಜ್ಜಾಗಿದೆ. ಕಡಿಮೆ ಬೆಲೆ, ಸುರಕ್ಷತೆ ಹಾಗೂ ಶಕ್ತಿಯುತ ಎಸ್‌ಯುವಿ ಕಾರನ್ನ ರಸ್ತೆಗಳಿಸಲು ದಾಟ್ಸನ್ ತಯಾರಿ ಆರಂಭಿಸಿದೆ. ಈ ಕಾರಿನ ವಿಶೇಷತೆ ಏನು? ಬೆಲೆ ಎಷ್ಟು? ಇಲ್ಲಿದೆ ವಿವರ.

ಬೆಂಗಳೂರು(ಜು.24): ಭಾರತದಲ್ಲಿ ಕಡಿಮೆ ಬೆಲೆಯ ಕಾರುಗಳನ್ನ ಪರಿಚಯಿಸಿದ ದಾಟ್ಸನ್ ಕಾರು ಸಂಸ್ಥೆ ಇದೀಗ ಎಸ್‌ಯುವಿ ಕಾರನ್ನ ಬಿಡುಗಡೆಗೊಳಿಸಲು ಸಜ್ಜಾಗಿದೆ. ನೂತನ ದಾಟ್ಸನ್ ಎಸ್‌ಯುವಿ ಕಾರಿನ ಬೆಲೆ 10 ಲಕ್ಷ ರೂಪಾಯಿ ಒಳಗಿರಲಿದೆ ಎಂದಿದೆ.

ಮುಂದಿನ ವರ್ಷದ ಆರಂಭದಲ್ಲಿ ದಾಟ್ಸನ್ ಎಸ್‌ಯುವಿ ಕಾರು ಬಿಡುಗಡೆಗೊಳಿಸಲು ದಾಟ್ಸನ್ ಸಂಸ್ಥೆ ತಯಾರಿ ನಡೆಸಿದೆ. ಕಡಿಮೆ ಬೆಲೆಯಲ್ಲಿ ಎಸ್‌ಯುವಿ ಕಾರನ್ನ ಬಿಡುಗಡೆಗೊಳಿಸಲು ಸಜ್ಜಾಗಿರುವ ದಾಟ್ಸನ್ ಸಂಸ್ಥೆ ಸುರಕ್ಷತೆಯಲ್ಲಿ ರಾಜಿಯಾಗಲ್ಲ ಎಂದಿದೆ.

ನಿಸಾನ್ ಎಸ್‌ಯುವಿ ಕಾರಿನ ರೀತಿಯಲ್ಲೇ ಬಲಿಷ್ಠ ಹಾಗೂ ಶಕ್ತಿಯುತ ಎಸ್‌ಯುವಿ ಕಾರನ್ನ ಮಾರಕಟ್ಟೆಗೆ ಪರಿಚಯಿಸಲು ಮುಂದಾಗಿದೆ. 1.0 ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಮೂಲಕವೇ ಎಸ್‌ಯುವಿ ಲಗ್ಗೆಇಡಲಿದೆ ಅನ್ನೋ ಮಾತುಗಳು ಕೇಳಿಬಂದಿದೆ.

ಎಬಿಎಸ್, ಇಬಿಡಿ ಹಾಗೂ ಡ್ಯುಯೆಲ್ ಫ್ರಂಟ್ ಏರ್‌ಬ್ಯಾಗ್ಸ್ ನೂತನ ದಾಟ್ಸನ್ ಎಸ್‌ಯುವಿ ಕಾರಿನಲ್ಲಿ ಇರಲಿದೆ. ಆಕರ್ಷಕ ವಿನ್ಯಾಸ, ಎಲ್ಇಡಿ ಹೆಡ್‌ಲ್ಯಾಂಪ್ಸ್ , ಟಚ್ ಸ್ಕ್ರೀನ್ ಸೇರಿದಂತೆ ಹಲವು ಫೀಚರ್ಸ್‌ಗಳು ಇರಲಿದೆ ಎಂದು ಸಂಸ್ಥೆ ಹೇಳಿದೆ.
 

loader