Asianet Suvarna News Asianet Suvarna News

ಟ್ವಿಟರ್ ಅಕೌಂಟ್ ಇದ್ದವರು ತಕ್ಷಣವೆ ಪಾಸ್'ವರ್ಡ್ ಬದಲಿಸಿಕೊಳ್ಳಿ

ಸುಮಾರು 3 ಕೋಟಿಗೂ ಹೆಚ್ಚು ಟ್ವಿಟರ್ ಖಾತಾದಾರರಿದ್ದು ಬದಲಿಸಿಕೊಳ್ಳಬೇಕಿದೆ. ಒಮ್ಮೆ ಈ ರೀತಿ ಮಾಡಿಕೊಂಡರೆ ಯಾವುದೇ ರೀತಿ ಹ್ಯಾಕಿಂಗ್ ದೋಷಗಳ ತೊಂದರೆ ಉದ್ಬವಿಸುವುದಿಲ್ಲ. ಟ್ವಿಟರ್ ಖಾತದಾರರು ಖಾತೆಯನ್ನು ತೆರೆದ ತಕ್ಷಣ ಪಾಸ್ವರ್ಡ್ ಬದಲಿಸಿಕೊಳ್ಳುವ ಆಯ್ಕೆ ಬರುತ್ತದೆ ನೀವು 2 ರೀತಿಯಲ್ಲಿ ಸೆಟ್ಟಿಂಗ್'ನಲ್ಲಿ ಬದಲಿಸಿಕೊಳ್ಳಬಹುದು. 

CHANGE YOUR TWITTER PASSWORD RIGHT NOW

ನ್ಯೂಯಾರ್ಕ್(ಮೇ.04): ಟ್ವಿಟರ್ ಅಕೌಂಟ್ ಖಾತೆ ಉಳ್ಳವರು ತಕ್ಷಣವೇ ತಮ್ಮ ಪಾಸ್'ವರ್ಡ್ ಬದಲಿಸಿಕೊಳ್ಳುವಂತೆ ಸಂಸ್ಥೆಯ ತಾಂತ್ರಿಕ ಮುಖ್ಯಾಧಿಕಾರಿ ಪರಾಗ್ ಅಗರ್ವಾಲ್ ತಿಳಿಸಿದ್ದಾರೆ.
ಪಾಸ್'ವರ್ಡ್'ಗೆ ಸಂಬಂಧಿಸಿದ ದೋಷವೊಂದು ಗುರುವಾರ ಪತ್ತೆಯಾದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ. ಈ ರೀತಿ ಆಗಬಾರದಿತ್ತು ಆದರೆ ದೋಷವನ್ನು ಸರಿಪಡಿಸಲಾಗಿದೆ. ನಮ್ಮ ಸಂಸ್ಥೆಯ ಸಿಬ್ಬಂದಿ ಸೂಕ್ತ ನಿರ್ಧಾರ ಕೈಗೊಂಡಿದ್ದು ಪ್ರತಿಯೊಬ್ಬ ಖಾತದಾರರು ತಮ್ಮ ಪಾಸ್ವರ್ಡ್'ಅನ್ನು ಬದಲಿಸಿಕೊಳ್ಳಿ ಎಂದು ಟ್ವಿಟರ್ ಸಿಇಒ ಡೇವಿಡ್ ಕೆನಡಿ ಮನವಿ ಮಾಡಿದ್ದಾರೆ.
ಸುಮಾರು 3 ಕೋಟಿಗೂ ಹೆಚ್ಚು ಟ್ವಿಟರ್ ಖಾತಾದಾರರಿದ್ದು ಬದಲಿಸಿಕೊಳ್ಳಬೇಕಿದೆ. ಒಮ್ಮೆ ಈ ರೀತಿ ಮಾಡಿಕೊಂಡರೆ ಯಾವುದೇ ರೀತಿ ಹ್ಯಾಕಿಂಗ್ ದೋಷಗಳ ತೊಂದರೆ ಉದ್ಬವಿಸುವುದಿಲ್ಲ. ಟ್ವಿಟರ್ ಖಾತದಾರರು ಖಾತೆಯನ್ನು ತೆರೆದ ತಕ್ಷಣ ಪಾಸ್ವರ್ಡ್ ಬದಲಿಸಿಕೊಳ್ಳುವ ಆಯ್ಕೆ ಬರುತ್ತದೆ ನೀವು 2 ರೀತಿಯಲ್ಲಿ ಸೆಟ್ಟಿಂಗ್'ನಲ್ಲಿ ಬದಲಿಸಿಕೊಳ್ಳಬಹುದು. ಮೊದಲನೆಯದು  Settings and privacy > Password ಹಾಗೂ 2ನೇ ಆಯ್ಕೆ Settings and privacy > Account ತೆರೆದರೆ  ಸೆಕ್ಯುರಿಟಿ ಸಬ್'ಸೆಕ್ಷನ್'ನಲ್ಲಿ Review your login verification methods ಆಯ್ಕೆ ಮಾಡಿಕೊಂಡು ಪಾಸ್ವರ್ಡ್ ಬದಲಿಸಿ  Login verification ಮುಖಪುಟಕ್ಕೆ ಬರಬಹುದು.  

Follow Us:
Download App:
  • android
  • ios