2030ರ ವೇಳೆಗೆ ಭಾರತಕ್ಕೆ ಕಾರುಗಳಿಂದಲೇ ಕಾದಿದೆ ಅಪಾಯ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Sep 2018, 5:23 PM IST
By 2030 India will sell car in every second
Highlights

ಇತರ ದೇಶಗಳಿಗೆ ಹೊಲೀಸಿದರೆ ಭಾರತ ಈಗಾಗಲೇ ಕಾರು ಹಾಗೂ ಬೈಕ್ ಮಾರಾಟದಲ್ಲಿ ದಾಖಲೆ ಬರೆಯುತ್ತಿದೆ. ಅಧ್ಯಯನದ ಪ್ರಕಾರ 2030ರ ವೇಳೆಗೆ ಭಾರತಕ್ಕೆ ಕಾರುಗಳಿಂದಲೇ ಅಪಾಯ ಕಾದಿದೆ. ಇಲ್ಲಿದೆ ವಿವರ.

ನವದೆಹಲಿ(ಸೆ.06): ಭಾರತ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಹಳ್ಳಿಗಳೆಲ್ಲಾ ಪಟ್ಟಗಳು, ನಗರಗಳಾಗಿ ಬದಲಾಗುತ್ತಿದೆ. ಇದರ ಜೊತೆಗೆ ಆಟೋಮೊಬೈಲ್ ಕ್ಷೇತ್ರ ಕಂಡು ಕೇಳರಿಯದ ರೀತಿಯಲ್ಲಿ ಅಭಿವೃದ್ದಿ ಹೊಂದುತ್ತಿದೆ.

ಇತರ ದೇಶದ ಬಹುತೇಕ ಎಲ್ಲಾ ಕಾರು ಹಾಗೂ ಮೋಟಾರು ಕಂಪೆನಿಗಳಿಗೆ ಭಾರತವೇ ಫೇವರಿಟ್. ಹೀಗಾಗಿಯೇ ಭಾರತದಲ್ಲಿ ಬಹುತೇಕ ಎಲ್ಲಾ ಕಾರು ಸಂಸ್ಥೆಗಳ ಘಟಗಳು ಸ್ಥಾಪನೆಯಾಗಿದೆ. ಭಾರತದದಲ್ಲಿ ಕಾರು ಹಾಗೂ ಬೈಕ್ ಮಾರಾಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಗಣನೀಯ ಏರಿಕೆಯೇ ಭಾರತಕ್ಕೆ ಅಪಾಯ ತಂದೊಡ್ಡಲಿದೆ ಅನ್ನೋ ಮಾತು ಕೇಳಿಬಂದಿದೆ. 

2030ರ ವೇಳೆಗೆ ಭಾರತದಲ್ಲಿ ಪ್ರತಿ ಸೆಕೆಂಡ್‌ಗೆ ಒಂದರಂತೆ ಕಾರು ಮಾರಾಟವಾಗಲಿದೆ. ಇದು ವಿಶ್ವದಲ್ಲೇ ಗರಿಷ್ಠ ಮಾರಾಟವಾಗಲಿದೆ ಎಂದು ಭಾರತದ ಎನ್ಐಟಿಐ ಆಯೋಗ್ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ. ಹೀಗಾದಲ್ಲಿ ಭಾರತದ ಎಲ್ಲಾ ದಾರಿಗಳು, ಪಾರ್ಕಿಂಗ್‌ಗಳು ಭರ್ತಿಯಾಗಲಿದೆ. ಇಡೀ ದೇಶ ಆಟೋಮೊಬೈಲ್‌ನಿಂದ ತುಂಬಿ ಹೋಗಲಿದೆ 

ಭಾರತದಲ್ಲಿ ಕಾರು ಹಾಗೂ ಬೈಕ್ ಮಾರುಕಟ್ಟೆ ಮೀತಿ ಮೀರಿ ಬೆಳೆಯುತ್ತಿದೆ. ಹೀಗಾಗಿ ಎಲ್ಲಾ ಮೋಟಾರು ಕಂಪೆನಿಗಳು ಭಾರತವನ್ನೇ ಕೇಂದ್ರಸ್ಥಾನವಾಗಿ ಮಾಡುತ್ತಿದೆ. ಹೀಗಾಗಿ 2030ರ ವೇಳೆ ಭಾರತ ಕಾರುಗಳಿಂದ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕ ವಾಹನ ಖಡ್ಡಾಯ ಸೇರಿದಂತೆ ಹಲವು ಯೋಜನೆಗಳು ಮಾತ್ರ ಭಾರತವನ್ನ ಕಾಪಾಡಲಿದೆ.

loader