Bulli Bai row: ಗಿಟ್‌ಹಬ್‌ನಲ್ಲಿ ಮುಸ್ಲಿಂ ಮಹಿಳೆಯರ ಹರಾಜು: ಬೆಂಗಳೂರಲ್ಲಿ ಯುವಕ ವಶಕ್ಕೆ!

‘ಬುಲ್ಲಿ ಬಾಯಿ’ ಆ್ಯಪ್‌ (Bulli Bai App) ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ 21 ವರ್ಷದ ಯುವಕನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ.

Bulli Bai row Mumbai Police detains suspect from Bengaluru Karnataka mnj

ಮುಂಬೈ (ಜ. 4): ಮುಸ್ಲಿಂ ಮಹಿಳೆಯರನ್ನು (Muslim Women) ಅವಹೇಳನಕಾರಿ ಚಿತ್ರಿಸಿ ಅವರನ್ನು ಮಾರಾಟ ಮಾಡುವ ರೀತಿಯಲ್ಲಿ ಬಿಂಬಿಸುತ್ತಿದ್ದ ‘ಬುಲ್ಲಿ ಬಾಯಿ’ ಆ್ಯಪ್‌ (Bulli Bai App) ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ 21 ವರ್ಷದ ಯುವಕನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಈತ ಬುಲ್ಲಿ ಬಾಯ್‌ ಆ್ಯಪ್‌ನ 5 ಫಾಲೋವರ್‌ಗಳ ಪೈಕಿ ಒಬ್ಬನಾಗಿದ್ದ ಎಂದು ಮುಂಬೈ ಪೊಲೀಸರು (Mumbai Police) ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಮುಂಬೈ ಪೊಲೀಸರು ಬೆಂಗಳೂರಿಗೆ ಆಗಮಿಸಿ ಯುವಕನನ್ನು ವಶಕ್ಕೆ ಪಡೆದು, ಮುಂಬೈಗೆ ಕರೆದೊಯ್ದಿದ್ದಾರೆ. ಆತನನ್ನು ವಿಚಾರಣೆ ನಡೆಸಿ ಬಂಧಿಸುವ ಸಾಧ್ಯತೆ ಇದೆ.

ಈ ನಡುವೆ ‘ಬುಲ್ಲಿ ಬಾಯಿ ಆ್ಯಪ್‌’ ಸೃಷ್ಟಿಕರ್ತರು ಯಾರು ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಈ ಆ್ಯಪ್‌ಗೆ ಜಾಗ ಕಲ್ಪಿಸಿದ್ದ ಟ್ವೀಟರ್‌ (Twitter) ಮತ್ತು ಗಿಟ್‌ಹಬ್‌ಗೆ (Github) ದೆಹಲಿ ಪೊಲೀಸರು ಸೂಚಿಸಿದ್ದಾರೆ. ಅಲ್ಲದೆ ಈ ಆ್ಯಪ್‌ ಮೂಲಕ ರವಾನಿಸಿದ ಯಾವುದೇ ಮಾಹಿತಿ ಇದ್ದರೆ ಅದನ್ನು ರದ್ದುಪಡಿಸುವಂತೆ ಸೂಚಿಸಿದ್ದಾರೆ. ಈ ವಿವಾದಾತ್ಮಕ ಆ್ಯಪ್‌ನಲ್ಲಿ ಜ.1ರಂದು ದೆಹಲಿ ಮೂಲದ ಪತ್ರಕರ್ತೆಯೊಬ್ಬರ ಫೋಟೋ ಪೋಸ್ಟ್‌ ಮಾಡಲಾಗಿತ್ತು. ಈ ಬಗ್ಗೆ ಅವರು ದೂರು ನೀಡಿದ ಬಳಿಕ ಮತ್ತು ಶಿವಸೇನೆ ಸಂಸದೆ ಪ್ರಿಯಾಂಕಾ ಚರ್ತುವೇದಿ ಅವರು ಕೇಂದ್ರ ಸರ್ಕಾರದ ಗಮನ ಸೆಳೆದ ಬಳಿಕ, ಕೇಂದ್ರ ಸರ್ಕಾರ ಈ ಆ್ಯಪ್‌ ಅನ್ನು ರದ್ದುಪಡಿಸಿತ್ತು.

ಪ್ರಕರಣ ಏನು?

ಓಪನ್ ಸೋರ್ಸ್ ಪ್ಲಾಟ್‌ಫಾರ್ಮ್ ಗಿಟ್‌ಹಬ್ (GitHub) ಬಳಸಿ ಮುಸ್ಲಿಂ ಮಹಿಳೆಯರ (Muslim Women) ಫೋಟೋಗಳನ್ನು ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿದ ಸುಮಾರು ಆರು ತಿಂಗಳ ನಂತರ, ಅಂತಹ ಮತ್ತೊಂದು ಘಟನೆ ಜನವರಿ 2ರಂದು ಬೆಳಕಿಗೆ ಬಂದಿತ್ತು. 'ಬುಲ್ಲಿ ಬಾಯಿ' (Bulli Bai)  ಎಂಬ ಆ್ಯಪ್‌ನಲ್ಲಿ ನೂರಾರು ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್‌ಲೋಡ್ ಮಾಡಲಾಗಿದ್ದು, ಈ ಬೆನ್ನಲ್ಲೇ ಹಲವರು ಸಾಮಾಜಿಕ ಜಾಲತಾಣಗಳಲ್ಲಿ (Social Media) ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: Bulli Bai Blocked: ಗಿಟ್‌ಹಬ್‌ನಲ್ಲಿ ಮುಸ್ಲಿಂ ಮಹಿಳೆಯರ ಹರಾಜು: ಮತ್ತೊಂದು Sulli Deals ಪ್ರಕರಣ?

ಟ್ವಿಟರ್‌ನಲ್ಲಿ, ಬುಲ್ಲಿ ಬಾಯಿ ಆ್ಯಪ್‌ನಲ್ಲಿ ಹೆಸರಿಸಲಾದ ಮಹಿಳೆಯರಲ್ಲಿ ಒಬ್ಬರಾದ ಪತ್ರಕರ್ತರೊಬ್ಬರು, ಗಿಟ್‌ಹಬ್‌ನಲ್ಲಿ 'ಸುಲ್ಲಿ ಡೀಲ್ಸ್' ರೀತಿಯಲ್ಲಿ 'ಬುಲ್ಲಿ ಬಾಯಿ' ಎಂಬ ಗುಂಪನ್ನು ರಚಿಸಲಾಗಿದೆ ಎಂದು ಹೇಳಿಕೊಂಡಿದ್ದರು, ಅದು ಅವರ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಸಂಗ್ರಹಿಸುತ್ತದೆ ಮತ್ತು ಜನರು ತಮ್ಮ "ಹರಾಜಿನಲ್ಲಿ" (Auction) ಭಾಗವಹಿಸಲು ಪ್ರೋತ್ಸಾಹಿಸುತ್ತದೆ ಎಂದು ಹೇಳಿದ್ದರು.

ಸುಲ್ಲಿ ಡೀಲ್‌ಗಳ ಪ್ರಕರಣ ಏನು?

ಜುಲೈ 4, 2021 ರಂದು, GitHub ನಲ್ಲಿ ಗುರುತಿಸಲಾಗದ ಗುಂಪಿನಿಂದ ರಚಿಸಲಾದ ' ಸುಲ್ಲಿ ಡೀಲ್ಸ್ (Sulli Deals) ಹೆಸರಿನ ಅಪ್ಲಿಕೇಶನ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಲವಾರು Twitter ಬಳಕೆದಾರರು ಹಂಚಿಕೊಂಡಿದ್ದಾರೆ. ಆ್ಯಪ್‌ಗೆ "Sulli deal of the day" ಎಂಬ ಅಡಿಬರಹವಿದೆ ಮತ್ತು ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಹಾಕಲಾಗಿದೆ. 'ಸುಳ್ಳಿ' ಎಂಬುದು ಮಹಿಳೆಯರ ವಿರುದ್ಧ ಅವಹೇಳನಕಾರಿ ಪದವಾಗಿದೆ.

ಇದನ್ನೂ ಓದಿ: UPI payment fraud ಹಣ ಪಾವತಿ ಸೇರಿ ಡಿಜಿಟಲ್ ವಹಿವಾಟು ಸುರಕ್ಷಿತವಾಗಿಸುವುದು ಹೇಗೆ? ಇಲ್ಲಿವೆ ಟಿಪ್ಸ್!

ಅಪ್ಲಿಕೇಶನ್ ರಚನೆಕಾರರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಕ್ರಮವಾಗಿ ಸಂಗ್ರಹಿಸುತ್ತಾರೆ, ಅವರನ್ನು ಟ್ರೋಲ್ ಮಾಡುತ್ತಾರೆ, ಫೋಟೋಗಳನ್ನು ಅನುಚಿತವಾಗಿ ಬಳಸುತ್ತಾರೆ ಮತ್ತು ಅವರ "ಹರಾಜಿನಲ್ಲಿ" ಭಾಗವಹಿಸಲು ಜನರನ್ನು ಪ್ರೋತ್ಸಾಹಿಸುತ್ತಾರೆ. ಸುಲ್ಲಿ ಡೀಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಪತ್ರ ಬರೆದಿದ್ದರೂ ಗಿಟ್‌ಹಬ್‌ನಿಂದ ಇನ್ನೂ ಯಾವುದೇ ಉತ್ತರ ಬಂದಿಲ್ಲ ಎಂದು ದೆಹಲಿ ಪೊಲೀಸರು  ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
 

Latest Videos
Follow Us:
Download App:
  • android
  • ios