Asianet Suvarna News Asianet Suvarna News

Buhl Imprezz: ಭಾರತದ ಸಣ್ಣ ವ್ಯಾಪಾರಿಗಳಿಗಾಗಿ ಉಚಿತ ಬಿಲ್ಲಿಂಗ್, ಅಕೌಂಟಿಂಗ್ ಆ್ಯಪ್!

*ಈಗಾಗಲೇ 1300 ಕ್ಕೂ ಹೆಚ್ಚು ಗ್ರಾಹಕರನ್ನು ಆನ್‌ಬೋರ್ಡ್‌ ಮಾಡಿರುವ ಇಂಪ್ರೆಝ್
*ರೂ. 600 ಕೋಟಿ ಮೌಲ್ಯದ ಇನ್ ವಾಯ್ಸ್ ಗಳನ್ನು ಉತ್ಪಾದಿಸಲು ಸಹಾಯ 
*ಮುಂದಿನ ಮೂರು ತಿಂಗಳಲ್ಲಿ 6000 ಸಣ್ಣ ವ್ಯವಹಾರಗಳಿಗೆ ವಿಸ್ತರಿಸುವ ಗುರಿ

Buhl Imprezz application for billing and accounting software to create invoices payments mnj
Author
Bengaluru, First Published Jan 24, 2022, 3:01 PM IST

ಬೆಂಗಳೂರು (ಜ. 24): ‌ಜರ್ಮನ್ ಮೂಲದ ಬುಹ್ಲ್ ಗ್ರೂಪ್ (Buhl Group) ತನ್ನ ಉಚಿತ  ಆ್ಯಪ್ ಇಂಪ್ರೆಝ್‌ (Imprezz) ಮೂಲಕ ಮುಂದಿನ ಮೂರು ತಿಂಗಳಲ್ಲಿ 6000 ಗ್ರಾಹಕರು ಮತ್ತು ಸಣ್ಣ ವ್ಯಾಪಾರಸ್ಥರನ್ನು ಆನ್‌ಬೋರ್ಡ್ ಮಾಡುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಘೋಷಿಸಿದೆ. ಬುಹ್ಲ್ ಗ್ರೂಪ್ ಜರ್ಮನ್ ಮೂಲದ ಅತಿ ದೊಡ್ಡ ಹಣಕಾಸು ಮತ್ತು ತೆರಿಗೆ ಸಾಫ್ಟ್‌ವೇರ್ (Software) ಸಂಸ್ಥೆಯಾಗಿದ್ದು, ಯುರೋಪ್ ಮತ್ತು ಏಷ್ಯಾದಾದ್ಯಂತ 13 ಕಚೇರಿಗಳು ಮತ್ತು 50 ಸಾಫ್ಟ್‌ವೇರ್ ಉತ್ಪನ್ನಗಳೊಂದಿಗೆ ವಾರ್ಷಿಕ €150 ಮಿಲಿಯನ್  ವಹಿವಾಟು ಹೊಂದಿದೆ. 

ಇಂಪ್ರೆಝ್‌ ಭಾರತದಾದ್ಯಂತ ಇರುವ ಚಿಲ್ಲರೆ-ದಿನಸಿ ವ್ಯಾಪಾರಿಗಳಿಗೋಸ್ಕರ ಡಿಸೆಂಬರ್ 1, 2021 ರಂದು ಉಚಿತ ಅಪ್ಲಿಕೇಶನ್ ಪರಿಚಯಿಸಿತ್ತು. ಬಿಡುಗಡೆ ಬಳಿಕ ಇಂಪ್ರೆಜ್ 1300 ಕ್ಕೂ ಹೆಚ್ಚು ಗ್ರಾಹಕರನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಈ ಆ್ಯಪ್ 22,000ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ರೂ.600 ಕೋಟಿ  ಮೌಲ್ಯದ ಇನ್‌ವಾಯ್ಸ್‌ಗಳನ್ನು ನೀಡುವಲ್ಲಿ ಆ್ಯಪ್ ಸಹಾಯ ಮಾಡಿದೆ.

ಇದನ್ನೂ ಓದಿ: Salesmen Against Reliance: ಮುಖೇಶ್‌ ಅಂಬಾನಿಯ ಜಿಯೋ ಮಾರ್ಟ್ ವಿರುದ್ಧ ಸಮರ ಸಾರಿದ ಸ್ಥಳೀಯ ವಿತರಕರು!

ಇಂಪ್ರೆಝ್‌  ಬಳಕೆದಾರರು ತಮ್ಮ ಇನ್‌ವಾಯ್ಸಿಂಗ್ ಹಾಗೂ ಬಿಲ್ಲಿಂಗ್ ಅಗತ್ಯಗಳಿಗಾಗಿ ಇಂಪ್ರೆಜ್ ಅನ್ನು ಬಳಸಬಹುದಾಗಿದೆ. ಈ ಮೂಲಕ  ಚಿಲ್ಲರೆ ಅಂಗಡಿಗಳು  ಯಾವುದೇ ಅಡಚಣೆಯಿಲ್ಲದೇ ಸ್ಕ್ಯಾನ್ ಮಾಡುವುದರ ಮೂಲಕ ವ್ಯಾಪಾರದಲ್ಲಿ ಪಾರದರ್ಶಕತೆ, ಬಿಲ್ಲಿಂಗ್, ದಾಸ್ತಾನು ಮತ್ತು ಗ್ರಾಹಕರ ಪ್ರೊಫೈಲ್ ಗಳನ್ನು ನಿರ್ವಹಿಸಬಹುದಾಗಿದೆ. 

"ಇದು ಇಂಗ್ಲಿಷ್ ಮಾತನಾಡುವ ಅತಿದೊಡ್ಡ ಮಾರುಕಟ್ಟೆಯಾಗಿರುವ  ಭಾರತದಲ್ಲಿ ತನ್ನ ವ್ಯಾಪಾರವನ್ನು ವಿಸ್ತರಿಸಲು ಬಿಡುಗಡೆಯಾದ ಬುಹ್ಲ್‌ ನ ಪ್ರಮುಖ ಉತ್ಪನ್ನಗಳಲ್ಲಿ ಒಂದಾಗಿದೆ. ಇಂಪ್ರೆಜ್ ವೆಬ್‌ ಆವೃತ್ತಿ ಹಾಗೂ ಆ್ಯಂಡ್ರಾಯ್ಡ್ ಅಪ್ಲಿಕೇಶನ್‌ ಲಭ್ಯವಿದ್ದು ವಿವಿಧ್‌ ಫೀಚರ್‌ಗಳ ಮೂಲಕ ವ್ಯಾಪಾರಿಗಳಿಗೆ ಸಹಾಯ ಮಾಡುತ್ತದೆ. ಇಂಪ್ರಝ್‌ನ ಪಾಯಿಂಟ್ ಆಫ್ ಸೇಲ್ (POS) ವ್ಯವಸ್ಥೆಯಲ್ಲಿ ದಾಸ್ತಾನು ನಿರ್ವಹಣೆ, ಉತ್ಪನ್ನಗಳ ಸಿದ್ಧ ಡೇಟಾಬೇಸ್‌ನಿಂದ ಪದಾರ್ಥಗಳನ್ನು ಸ್ಕ್ಯಾನ್ ಮಾಡುವುದು ಮತ್ತು ಟ್ರ್ಯಾಕಿಂಗ್ ಮಾಡುವುದು, ಇನ್‌ವಾಯ್ಸಿಂಗ್,  ಪಾವತಿಗಳು ಮತ್ತು ಪಾವತಿ ಜ್ಞಾಪಕಗಳು, ಗ್ರಾಹಕರ ಡೇಟಾ ನಿರ್ವಹಣೆ, ಮಾರಾಟ ಮತ್ತು ವೆಚ್ಚ , ಡೇಟಾ ಭದ್ರತೆ ಮತ್ತು ತೆರಿಗೆ ಸೇರಿದಂತೆ ವ್ಯಾಪಾರದಲ್ಲಿ ಪಾರದರ್ಶಕತೆ ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಿದೆ" ಎಂದು  ಬುಹ್ಲ್ ಡೇಟಾ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ನ ಸಿಇಒ ಮತ್ತು ಕಂಟ್ರಿ ಮ್ಯಾನೇಜರ್ ಅಮಿತ್ ಮುಂದ್ರಾ  ಹೇಳಿದ್ದಾರೆ.

Follow Us:
Download App:
  • android
  • ios